»   » ಹೀಗಂತ ಅಭಿಮಾನಿ ಹೇಳಿದ್ದ ಕೇಳಿಸಿಕೊಂಡ ಸಲ್ಮಾನ್‌ ಖಾನ್‌ ಮೈಮೇಲೆ ಇದ್ದದ್ದು ಸಿಂಗಲ್‌ ಪೀಸ್‌. ಇದು ಥಮ್ಸ್‌ ಅಪ್‌ನ ಲೇಟೆಸ್ಟ್‌ ಜಾಹಿರಾತು.

ಹೀಗಂತ ಅಭಿಮಾನಿ ಹೇಳಿದ್ದ ಕೇಳಿಸಿಕೊಂಡ ಸಲ್ಮಾನ್‌ ಖಾನ್‌ ಮೈಮೇಲೆ ಇದ್ದದ್ದು ಸಿಂಗಲ್‌ ಪೀಸ್‌. ಇದು ಥಮ್ಸ್‌ ಅಪ್‌ನ ಲೇಟೆಸ್ಟ್‌ ಜಾಹಿರಾತು.

Posted By:
Subscribe to Filmibeat Kannada

ಒಂದು ಕಾಲದಲ್ಲಿ ಎಲ್ಲರ ನೆಚ್ಚಿನ ಸಲ್ಲು ಆಗಿದ್ದ ಸಲ್ಮಾನ್‌ ಖಾನ್‌ ಈಗ ಅಕ್ಷರಶಃ ಐಲು !
ಈತನ ಫೋಟೋ ಇಟ್ಟು ಆರಾಧಿಸುತ್ತಿದ್ದವರೇ ಈಗ ಹೀಗೆ ಛೀಕಾರ ಹಾಕುತ್ತಿದ್ದಾರೆ. ಕುಡಿದು ಐಸ್‌ ಮನೆ ಬಾಗಿಲು ತಟ್ಟಿದ್ದು, ಆಕೆಯ ಕಾರನ್ನು ಅಡ್ಡಗಟ್ಟಿ, ಅದರ ಗಾಜನ್ನು ಪುಡಿಪುಡಿ ಮಾಡಿದ್ದು, ದೂರು ಪೊಲೀಸರ ತನಕ ಹೋಗಿದ್ದು, ಪೊಲೀಸರು ವಿಚಾರಣೆ ನಡೆಸಿ ಬುದ್ಧಿ ಹೇಳಿದ್ದು...ಎಲ್ಲದರ ನಂತರ ಸಲ್ಲು ಸಿನಿಕ್‌ ಆಗಿದ್ದಾನೆ.

ತನ್ನ ಕಟ್ಟುಮಸ್ತು ದೇಹದ ಮೇಲೆ ಅತಿಯಾದ ಪ್ರೀತಿ- ವಿಶ್ವಾಸವಿರುವ ಸಲ್ಲುಗೆ ಕೊನೆಗೆ ಉಳಿದಿರುವುದು ಅದೇ. ಈಗ ಸರಿಯಾಗಿ ವ್ಯಾಯಾಮವನ್ನೂ ಮಾಡದೆ, ಸಿಕ್ಕಾಪಟ್ಟೆ ಕುಡಿಯುವುದನ್ನೇ ದಿನಚರಿ ಮಾಡಿಕೊಂಡಿರುವ ಸಲ್ಲು ಸ್ಟೇಲು. ವರ್ತನೆ ಐಲು ಪೈಲು. ಸಣ್ಣ ನೆಪ ಸಾಕು, ಈತ ಮುಂದಾಗುವುದು ಬಟ್ಟೆ ಕಳಚಲು.

ಮೊನ್ನೆ ಹಾಗೇ ಆಯಿತು. ಥಾ ೖಲೆಂಡಿನ ಪಟ್ಟಾಯ ಬೀಚ್‌ನಲ್ಲಿ ಥಮ್ಸ್‌ ಅಪ್‌ ಜಾಹೀರಾತಿನ ಶೂಟಿಂಗ್‌. ತನ್ನ ಕಟ್ಟುಮಸ್ತು ದೇಹವ ಕೆಮೆರಾಗೊಡ್ಡುವ ಅವಕಾಶ. ಯಾರೋ ಹತ್ತಿರದಲ್ಲಿದ್ದವರು, ‘ಸಲ್ಲು ನಿನ್ನ ಬಾಡಿ ಕನ್ನಂಬಾಡಿ. ಭಲಾರೇ’ ಅಂತ ವಾಚಾಮಗೋಚರ ಹೊಗಳಿದ್ದೇ ತಡ, ಸಲ್ಲು ಪ್ಯಾಂಟನ್ನೂ ಕಿತ್ತೆಸೆದು ಕಾಚದಲ್ಲೇ ನರ್ತಿಸತೊಡಗಿದ. ಹೊಗಳಿಕೆ ಗುಲಗಂಜಿಯಷ್ಟು ಜಾಸ್ತಿಯಾಗಿದ್ದರೂ, ಸಲ್ಮಾನ್‌ ಬೆತ್ತಲಾಗುತ್ತಿದ್ದನೋ ಏನೋ ಅಂತ ಕೆಲವರು ಮಾತಾಡಿಕೊಂಡರು.

ಕೊನೆಗೆ ಸುಮೀತ್‌ ಚೋಪ್ರಾ ಎಂಬಾತನಿಗೆ ಅದೇ ಒರಿಜಿನಲ್‌ ಆಗಿ ಕಂಡಿತು. ಸಲ್ಲು ಕಾಚದಲ್ಲೇ ನಿಲ್ಲು ಅಂದ. ಕೊನೆಗೆ ಇದೇ ಜಾಹೀರಾತಿನ ತುಣುಕು ರೆಡಿಯಾಗಿದೆ. ಅನೇಕರ ಪ್ಯಾಂಟುಗಳ ಕಳಚಿದ ಖ್ಯಾತಿ ಸುಮೀತ್‌ ಚೋಪ್ರಾದು.

ಮುಕ್ಕಾಲು ಬೆತ್ತಲೆ ಆಕೃತಿಯ ಈ ಜಾಹೀರಾತಿಗೆ ಒಬ್ಬ ಡ್ರೆಸ್‌ ಡಿಸೈನರ್‌ ಬೇರೆ !

Post your comments

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada