For Quick Alerts
  ALLOW NOTIFICATIONS  
  For Daily Alerts

  ಸಮ್ಮರ್ ಗಾಗಿ ಬದಲಾಯ್ತು ಸಮಂತಾ ಹೇರ್ ಸ್ಟೈಲ್

  By Pavithra
  |

  ಬೇಸಿಗೆ ಶುರುವಾಗಿದೆ ವಾತಾವರಣ ಕೂಡ ನಿಧಾನವಾಗಿ ಬದಲಾಗುತ್ತಿದೆ. ಎಲ್ಲವೂ ಬದಲಾದಂತೆ ಸಮ್ಮರ್ ಗಾಗಿ ಸ್ಟೈಲ್ ಕೂಡ ಬದಲಾಗಲೇಬೇಕು. ಇನ್ನು ಸಿನಿಮಾ ಸ್ಟಾರ್ ಗಳಂತೂ ಆಯಾ ಕಾಲಕ್ಕೆ ತಕ್ಕಂತೆ ತಮ್ಮ ಸ್ಟೈಲ್ ಅನ್ನು ಚೇಂಜ್ ಮಾಡಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ನಟಿ ಸಮಂತಾ ಅಕ್ಕಿನೇನಿ ತಮ್ಮ ಹೇರ್ ಸ್ಟೈಲ್ ಬದಲಾವಣೆ ಮಾಡಿಕೊಂಡಿದ್ದಾರೆ.

  'ರಂಗಸ್ಥಲಂ' ಸಿನಿಮಾದಲ್ಲಿ ಪಕ್ಕಾ ಹಳ್ಳಿ ಬೆಡಗಿಯಾಗಿ ಕಾಣಿಸಿಕೊಂಡ ಸಮಂತಾ ಚಿತ್ರೀಕರಣ ಮುಗಿಸಿದ ತಕ್ಷಣವೇ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ. ನೀಳ ಕೇಶವನ್ನ ಹೊಂದಿದ್ದ ನಟಿ ಬೇಸಿಗೆಗೆ ಶಾರ್ಟ್ ಹೇರ್ ಸ್ಟೈಲ್ ಮಾಡಿಕೊಂಡು ಟ್ರೆಂಡ್ ಹುಟ್ಟುಹಾಕುತ್ತಿದ್ದಾರೆ.

  ತನ್ನ ಬಗ್ಗೆ ಟ್ರೋಲ್ ಮಾಡೋರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಮಂತಾತನ್ನ ಬಗ್ಗೆ ಟ್ರೋಲ್ ಮಾಡೋರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಮಂತಾ

  ಚಿತ್ರೀಕರಣ ಮತ್ತು ಯಾವುದೇ ಕಾಸ್ಟ್ಯೂಮ್ಸ್ ಹಾಕಿದರೂ ಕೂಡ ಚೆನ್ನಾಗಿ ಕಾಣುವಂತಹ ಹೇರ್ ಕಟ್ ಮಾಡಿಸಿಕೊಂಡಿರುವ ಸ್ಯಾಮ್ ನೋಡಿ ಅಭಿಮಾನಿಗಳು ವಾವ್ಹ್ ಅಂತಿದ್ದಾರೆ. ಈ ಮೂಲಕ ಸಮಂತಾ ಮದುವೆ ಆದ ನಂತರ ನಾನು ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ ಎನ್ನುವುದನ್ನೂ ತೋರಿಸುತ್ತಿದ್ದಾರೆ.

  ಮದವೆಯ ನಂತರವೂ ಸಮಂತಾ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಭಾರಿ ಬೇಡಿಕೆಯ ನಟಿಯ ಸ್ಥಾನವನ್ನೇ ಕಾಯ್ದುಕೊಂಡಿದ್ದಾರೆ. ತಮಿಳಿನಲ್ಲಿ ಐದು ಹಾಗೂ ತೆಲುಗಿನಲ್ಲಿ ಎರಡು ಚಿತ್ರಗಳಲ್ಲಿ ಸಮಂತಾ ಅಭಿನಯ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಸರ್ಕಾರಿ ಜಾಹೀರಾತುಗಳಲ್ಲಿಯೂ ಸ್ಯಾಮ್ ಅಭಿನಯವಿರುತ್ತೆ.

  English summary
  Telugu actress samantha akkineni has changed her hair style for the summer. Samantha is currently acting in two films in Tamil and five in Tamil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X