ತನ್ನ ಬಗ್ಗೆ ಟ್ರೋಲ್ ಮಾಡೋರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಮಂತಾ
ಅಕ್ಕಿನೇನಿ ಮನೆಗೆ ಸೊಸೆಯಾದ ಬಳಿಕ ನಟಿ ಸಮಂತಾ ಬಗ್ಗೆ ಕುತೂಹಲ ಹೆಚ್ಚಿದೆ. ಮದುವೆ ಬಳಿಕ ತುಂಬ ಟ್ರಡಿಷ್ನಲ್ ಆಗಿರಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದ್ರೆ, ಅಭಿಮಾನಿಗಳ ಈ ನಿರೀಕ್ಷೆಯನ್ನ ಉಲ್ಟಾ ಮಾಡಿದ ಸ್ಯಾಮ್ ಶಾಕ್ ನೀಡಿದ್ದಾರೆ.
ಹೌದು, ಬಿಕಿನಿಯಲ್ಲಿರುವ ಹಾಟ್ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈ ಫೋಟೋ ಈಗ ಟ್ರೋಲ್ ಗೆ ಒಳಗಾಗಿದೆ.
ಬಿಕಿನಿಯಲ್ಲಿದ್ದ ಅಕ್ಕಿನೇನಿ ನಾಗಾರ್ಜುನ್ ಸೊಸೆಯ ಈ ನಡೆಗೆ ಕೆಲವರು ಮೆಚ್ಚಿಕೊಂಡಿದ್ದರೇ, ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಫೋಟೋಗೆ ಸಾಕಷ್ಟು ನೆಗೆಟಿವ್ ಕಮೆಂಟ್ ಗಳೂ ಬಂದಿವೆ.

ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಮಂತಾ ತನ್ನ ಬಗ್ಗೆ ಟ್ರೋಲ್ ಮಾಡೋರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ''ನನ್ನ ನಿಯಮಗಳನ್ನು ನಾನೇ ಬರೆದುಕೊಳ್ಳುತ್ತೇನೆ, ನೀವೂ ನಿಮ್ಮ ನಿಯಮಗಳನ್ನು ಬರೆದುಕೊಳ್ಳಿ'' ತಮ್ಮ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ.

ಮದುವೆ ಆದ ಬಳಿಕ ಸಿನಿಮಾ ಅವಕಾಶಗಳು ಕಮ್ಮಿಯಾಗುತ್ತೆ ಎಂಬ ಮಾತಿದೆ. ಆದ್ರೆ, ಸಮಂತಾ ವಿಚಾರದಲ್ಲಿ ಇದು ಸುಳ್ಳಾಗಿದೆ. ಸಾಲು ಸಾಲು ಸಿನಿಮಾಗಳು ಸ್ಯಾಮ್ ಅವರನ್ನ ಹುಡುಕಿಕೊಂಡು ಬಂದಿದೆ. ಸದ್ಯ, ರಾಮ್ ಚರಣ್ ಜೊತೆಯಲ್ಲಿ 'ರಂಗಸ್ಥಲ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ, 'ಸೂಪರ್ ಡಿಲೆಕ್ಸ್' ಎಂಬ ಸಿನಿಮಾ ಹಾಗೂ ಮತ್ತೊಂದು ತ್ರಿಭಾಷಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











