ಒಂದು ದಿನಕ್ಕೆ, ಒಂದೇ ಬಕೆಟ್ ನೀರು ಬಳಸುತ್ತಾರಂತೆ ಸಮಂತಾ

ಒಂದು ದಿನಕ್ಕೆ, ಒಬ್ಬ ವ್ಯಕ್ತಿ, ಒಂದೇ ಒಂದು ಬಕೆಟ್ ನೀರು ಮಾತ್ರ ಬಳಸಲು ಸಾಧ್ಯವೇ.. ಹೌದು ಎನ್ನುತ್ತಿದ್ದಾರೆ ನಟಿ ಸಮಂತಾ. ಏಕೆಂದರೆ, ನೀರಿನ ಪ್ರತಿ ಹನಿ ಕೂಡ ಬಹಳ ಮುಖ್ಯ.

ತೆಲುಗು ನಟಿ ಸಮಂತಾ ಈಗ ಹೊಸ ಚಾಲೆಂಜ್ ಶುರು ಮಾಡಿದ್ದಾರೆ. ಈ ಚಾಲೆಂಜ್ ಮೂಲಕ ನೀರಿನ ಮಹತ್ವ ಸಾರುತ್ತಿದ್ದಾರೆ. ಸರ್ಕಾರ ಬೋರ್ ಕೊರೆಯುವ ಬಗ್ಗೆ ಹೊಸ ನಿಯಮ ತರಬೇಕು ಎಂದು ಮನವಿ ಮಾಡುತ್ತಿದ್ದಾರೆ.

''ನಾವು ನೀರು ನಲ್ಲಿಯಲ್ಲಿ ಬರುತ್ತದೆ ಎನ್ನುವ ಭ್ರಮೆಯಲ್ಲಿ ಇದ್ದೇವೆ. ಭೂಮಿಗೆ ಬಿಳುವ ಮಳೆ ಅಂತರ್ಜಾಲವಾಗಿ ಎಷ್ಟೊ ವರ್ಷದಿಂದ ಇರುತ್ತದೆ. ನಾವು ಒಂದೇ ಸೆಕೆಂಡ್ ನಲ್ಲಿ 1500 ಅಡಿ ಬೋರ್ ಕೊರೆಯುತ್ತೇವೆ. ಇದಕ್ಕಾಗಿ ಸರ್ಕಾರ ಒಂದು ಕಾನೂನು ಜಾರಿಗೆ ತರಬೇಕು.'' ಎಂದು ಬೇಡಿಕೆ ಇಟ್ಟಿದ್ದಾರೆ.

samantha akkineni started one bucket challenge

ಅನಗತ್ಯ ನೀರಿನ ಬಳಕೆ ಮಾಡಬೇಡಿ, ಪ್ರತಿ ಹನಿ ಕೂಡ ಮುಖ್ಯ ಎಂದು ಒಂದು ಚಾಲೆಂಜ್ ನೀಡಿದ್ದಾರೆ. ಇದೇ ಭಾನುವಾರ (ಜುಲೈ 21) ದಂದು ಈ ಚಾಲೆಂಜ್ ನಡೆಯುತ್ತದೆ. ಇದರಲ್ಲಿ ಭಾಗಿಯಾಗುವವರು, ಆ ಇಡೀ ದಿನ ಒಂದೇ ಒಂದು ಬಕೆಟ್ ನೀರನ್ನು ಮಾತ್ರ ಬಳಕೆ ಮಾಡಬೇಕು.

ಹಲ್ಲು ಉಚ್ಚಲು, ಕೈ ತೊಳೆಯಲು, ಸ್ನಾನ ಮಾಡಲು.. ಹೀಗೆ ಆ ದಿನ ಒಂದೇ ಬಕೆಟ್ ನೀರಿನಲ್ಲಿ ನಮ್ಮ ಕೆಲಸಗಳನ್ನು ಮಾಡಬೇಕು. ನಲ್ಲಿಯನ್ನು ಬಳಸುವಂತೆ ಇಲ್ಲ. ಜೊತೆಗೆ ಆ ದಿನ ವಾಹನ ತೊಳೆಯುವಂತೆ ಇಲ್ಲ.

samantha akkineni started one bucket challenge

ಈ ರೀತಿ ಸಮಂತಾ ಒಂದು ಬಕೆಟ್ ಚಾಲೆಂಜ್ ಮೂಲಕ ನೀರಿನ ಮಹತ್ವವನ್ನು ಅರ್ಥ ಮಾಡಿಸಲು ಪ್ರಯತ್ನ ಮಾಡಿದ್ದಾರೆ.

More from Filmibeat

English summary
Telugu actress Samantha Akkineni started one bucket challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X