ಗರ್ಭಿಣಿ ವದಂತಿ ಬಗ್ಗೆ ಸಮಂತಾ ಕೊಟ್ಟ ಪ್ರತಿಕ್ರಿಯೆ
ತೆಲುಗು ಬ್ಯೂಟಿ ಸಮಂತಾ ಮತ್ತು ನಾಗಚೈತನ್ಯ ಮದುವೆ ಆಗಿ ಒಂದೂವರೆ ವರ್ಷ ಆಗಿದೆ. 2015ರಿಂದ ಪ್ರೀತಿಯಲ್ಲಿದ್ದ ಈ ಜೋಡಿ 2017ರ ಅಕ್ಟೋಬರ್ 6 ರಂದು ಗೋವಾದಲ್ಲಿ ಮದುವೆಯಾಗಿದ್ದರು.
ಮದುವೆ ಬಳಿಕ ನಟನೆ ಕಮ್ಮಿ ಮಾಡದ ಅಥವಾ ನಟನೆ ನಿಲ್ಲಿಸದ ಸಮಂತಾ, ಸತತವಾಗಿ ಸಿನಿಮಾ ಮಾಡ್ತಾನೆ ಇದ್ದಾರೆ. ರಂಗಸ್ಥಲಂ, ಸೀಮರಾಜ, ಯು ಟರ್ನ್, ಸೂಪರ್ ಡಿಲೆಕ್ಸ್, ಮಜಿಲಿ ಈಗ 'ಓ ಬೇಬಿ' ಸಿನಿಮಾ ತೆರೆಕಾಣಲು ಸಜ್ಜಾಗಿದೆ.
ಈ ಮಧ್ಯೆ ಸಮಂತಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗಳು ಸಿನಿರಂಗದಲ್ಲಿ ಸದ್ದು ಮಾಡಿದೆ. ಸಮಂತಾ ತಾಯಿಯಾಗುತ್ತಿದ್ದಾರೆ ಎಂಬ ಅಂತೆ-ಕಂತೆಗಳ ಬಗ್ಗೆ ಅಕ್ಕಿನೇನಿ ಕುಟುಂಬದ ಸೊಸೆ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಸಮಂತಾ ಗರ್ಭಿಣಿಯಂತೆ ಎಂದು ಟ್ಯಾಗ್ ಮಾಡಿದ್ದ ಒಂದು ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ಸಮಂತಾ, ''ಹೌದಾ...ಯಾವಾಗ ಕಂಡುಹಿಡಿದಿರಿ ಅಂತ ನಮಗೂ ತಿಳಿಸಿ'' ಎಂದು ಕಾಲೆಳೆಯುವ ಮೂಲಕ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ.
ಸದ್ಯಕ್ಕೆ ಸಮಂತಾ ಅವರು ಸಿನಿಮಾಗಳ ಮೇಲೆ ಮಾತ್ರ ಗಮನ ಹರಿಸುತ್ತಿದ್ದಾರಂತೆ. ಹಾಗಾಗಿ, ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ತನಗೆ ಹೋಲುವಂತಹ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ.


Click it and Unblock the Notifications