ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರ್ತಿದ್ದಾನೆ 'ಗೌರಿ'

ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರ 'ಗೌರಿ' ಆಗಸ್ಟ್ 15 ರಂದು ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಅದ್ಧೂರಿ ಕಾರ್ಯಕ್ರಮಗಳ ಮೂಲಕ ಚಿತ್ರತಂಡ ಪ್ರಚಾರ ಮಾಡುತ್ತಿದೆ.

ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಇಂದ್ರಜಿತ್ ಲಂಕೇಶ್ ಅವರು ರಾಜಾಜಿನಗರದ ವಿದ್ಯಾವಿಹಾರ (ಎಂ ಇ ಎಸ್ ಮ್ಯಾನೇಜ್ಮೆಂಟ್) ಕಾಲೇಜಿನಲ್ಲಿ ಅದ್ದೂರಿ ಸಮಾರಂಭ ಆಯೋಜಿಸಿದ್ದರು. ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಸಮಾರಂಭಕ್ಕೆ ಸಾಕ್ಷಿಯಾದರು. ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

Samarjit Lankesh Saanya Iyer s gowri film Grand Release on August 15

ಲಂಕೇಶ್ ಪುತ್ರ ಸಮರ್ಜಿತ್ 'ಗೌರಿ' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಗಸ್ಟ್ 15 ಕ್ಕೆ ಸ್ವತಂತ್ರ ದಿನಾಚರಣೆ ದಿನ ಹಾಗೂ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ 'ಗೌರಿ' ಬರ್ತಿದ್ದಾನೆ.

ವರಮಹಾಲಕ್ಷ್ಮೀ, ಸ್ವತಂತ್ರ ದಿನಾಚರಣೆ, ರಕ್ಷಾ ಬಂಧನ ಹೀಗೆ ಸಾಲುಸಾಲು ರಜೆ ದಿನಗಳ ಸಮಯದಲ್ಲಿ ಸಿನಿಮಾ ತೆರೆಗೆ ಬರ್ತಿದೆ. 'ಗೌರಿ' ಚಿತ್ರದ ಮೂಲಕ ಸಾನ್ಯ ಅಯ್ಯರ್ ನಾಯಕಿಯಾಗಿ ಚಿತ್ರರಂಗಕ್ಕೆ ಬರ್ತಿದ್ದಾರೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಬಾಲನಟಿಯಾಗಿ ಆಕೆ ಗಮನ ಸೆಳೆದಿದ್ದರು. ದೊಡ್ಡ ನಟಿಯಾಗುಗ ಕನಸು ಕಂಡು ಅದಕ್ಕಾಗಿ ಸಕಲ ತಯಾರಿ ನಡೆಸಿದ್ದಾರೆ.

'ಗೌರಿ' ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ ಸಾನ್ಯ "ಆಗಸ್ಟ್ 15, ನನ್ನ ಕನಸು ನನ್ನಸಾಗುವ ದಿನ. ಈ ದಿನಕ್ಕಾಗಿ ಕಾಯುತ್ತಿದೆ‌. ಅವಕಾಶ ನೀಡಿದ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ" ಎಂದಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿ ಸಿನಿಮಾ ನೋಡಿ ಯು ಸರ್ಟಿಫಿಕೇಟ್ ನೀಡಿದೆ. ಚಿತ್ರದ ರನ್ ಟೈಮ್ ಸಹ ರಿವೀಲ್ ಆಗಿದೆ. 2 ಗಂಟೆ 10 ನಿಮಿಷಗಳ ಚಿಕ್ಕ ಸಿನಿಮಾ ಇದು.

Samarjit Lankesh Saanya Iyer s gowri film Grand Release on August 15

'ಗೌರಿ' ಚಿತ್ರಕ್ಕೆ ಜೆಸ್ಸಿಗಿಫ್ಟ್ ಹಾಗೂ ಚಂದನ್‌ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಎ ಜೆ ಶೆಟ್ಟಿ ಛಾಯಾಗ್ರಹಣ, ಬಿ. ಎ ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಕೆ. ಕಲ್ಯಾಣ್, ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

ಇಂದ್ರಜಿತ್ ಲಂಕೇಶ್ ಸಹೋದರಿ ಹೆಸರು ಗೌರಿ. ತಮ್ಮ ಸಹೋದರಿ ಹೆಸರಿನ ಟೈಟಲ್‌ನಲ್ಲೇ ಮಗನ ಸಿನಿಮಾ ಮಾಡಿದ್ದಾರೆ. ತಾವೇ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಟೈಟಲ್ ಯಾಕೆ ಎನ್ನುವುದು ಸಿನಿಮಾ ತೆರೆಗೆ ಬಂದಮೇಲೆ ಗೊತ್ತಾಗುತ್ತದೆ ಎಂದು ನಿರ್ದೇಶಕರು ಹಿಂದೆ ಹೇಳಿದ್ದರು. ಇದು ಬರೀ ನಾಯಕ ಹೆಸರು ಮಾತ್ರನಾ? ಅಥವಾ ಕಥೆಗೂ ಟೈಟಲ್‌ಗೂ ಬೇರೆ ಏನಾದರೂ ಸಂಬಂಧ ಇದ್ಯಾ? ಕಾದು ನೋಡಬೇಕಿದೆ.

ಸ್ಯಾಂಡಲ್‌ವುಡ್‌ನಲ್ಲಿ ಸ್ಟೈಲಿಶ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಇಂದ್ರಜಿತ್ ಗೆದ್ದಿದ್ದಾರೆ. ಸೂಪರ್ ಹಿಟ್ ಪ್ರೇಮಲೋಕ ಶೈಲಿಯಲ್ಲಿ ಈ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಮೂಡಿ ಬರಲಿದೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿವೆ. 100 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಮಾಡಲಾಗಿದೆ.

More from Filmibeat

English summary
Indrajit Lankesh directional Gowri Censored with clean U
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X