For Quick Alerts
  ALLOW NOTIFICATIONS  
  For Daily Alerts

  ಅಂಡರ್ ವಾಟರ್ ನಲ್ಲಿ 'ವರದನಾಯಕ' ನಟಿಯ ಪ್ರೆಗ್ನೆನ್ಸಿ ಫೋಟೋಶೂಟ್

  |

  ಕಿಚ್ಚ ಸುದೀಪ್ ಹಾಗೂ ಚಿರಂಜೀವಿ ಸರ್ಜಾ ಅಭಿನಯಿಸಿದ್ದ 'ವರದನಾಯಕ' ಸಿನಿಮಾ ನಟಿ ಸಮೀರಾ ರೆಡ್ಡಿ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ. 9 ತಿಂಗಳ ತುಂಬು ಗರ್ಭಿಣಿಯಾಗಿರುವ ಸಮೀರಾ ರೆಡ್ಡಿ ತಮ್ಮ ತಾಯ್ತನದ ಕ್ಷಣಗಳನ್ನ ಸಂಭ್ರಮಿಸುತ್ತಿದ್ದಾರೆ.

  ಇತ್ತೀಚಿಗಷ್ಟೆ ತಮ್ಮ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿರುವ ಸಮೀರಾ ರೆಡ್ಡಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕರ್ಷಣೆ ಮಾಡುತ್ತಿದೆ. ಅಂಡರ್ ವಾಟರ್ ನಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿರುವ ನಟಿ ಬಹಳ ಸಂತೋಷವಾಗಿರುವುದಾಗಿ ಹೇಳಿಕೊಂಡಿದ್ದಾರೆ.

  ತುಂಬು ಗರ್ಭಿಣಿಯಾಗಿರುವ ಸಮೀರಾ ರೆಡ್ಡಿ ಬಿಕಿನಿ ತೊಟ್ಟು ಅಂಡರ್ ವಾಟರ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಖುದ್ದು ತಾವೇ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗ 9ನೇ ತಿಂಗಳನ್ನ ಸಂಭ್ರಮಿಸುತ್ತಿದ್ದೇನೆ ಎಂದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  ಸಮೀರಾ ರೆಡ್ಡಿ ಪ್ರೆಗ್ನನ್ಸಿ ಫೋಟೋಗಳನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  ಅಂದ್ಹಾಗೆ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿರುವ ಸಮೀರಾ ರೆಡ್ಡಿ 2014ರಲ್ಲಿ ಅಕ್ಷಯ್ ಎಂಬುವರ ಜೊತೆ ವಿವಾಹವಾಗಿದ್ದರು. ಮದುವೆ ಆದ ಬಳಿಕ ಸಿನಿಮಾರಂಗದಿಂದ ದೂರ ಉಳಿದವರು. ಈಗಾಗಲೇ ಒಂದು ಗಂಡು ಮಗುವಿಗೆ ಜನ್ಮ ನೀಡಿರುವ ಸಮೀರಾ ಈಗ ಎರಡನೇ ಸಲ ತಾಯಿ ಆಗುತ್ತಿದ್ದಾರೆ.

  ಇನ್ನುಳಿದಂತೆ ಸಮೀರಾ ರೆಡ್ಡಿ ಕನ್ನಡದಲ್ಲಿ ಮಾಡಿದ್ದು ಒಂದೇ ಸಿನಿಮಾ. 2013ರಲ್ಲಿ ಬಿಡುಗಡೆಯಾದ ವರದನಾಯಕ ಚಿತ್ರದಲ್ಲಿ ಸುದೀಪ್ ಪತ್ನಿಯಾಗಿ ನಟಿಸಿದ್ದರು. ಇದೇ ಅವರ ಕೊನೆಯ ಚಿತ್ರವಾಗಿದೆ.

  English summary
  Indian Film actress sameera reddy shares her pregnancy photos in instagram. now, she is celebrating 9 month pregnancy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X