ಐಟಂ ಗರ್ಲ್ ಪಟ್ಟ ಅಲಂಕರಿಸಿದ ಸಮೀರಾ ರೆಡ್ಡಿ

By ಅನಂತರಾಮು, ಹೈದರಾಬಾದ್

ತಾರೆ ಸಮೀರಾ ರೆಡ್ಡಿ ಕನ್ನಡಕ್ಕೆ ಆಗ ಬರುತ್ತಾರೆ ಈಗ ಬಂದೇ ಬಿಟ್ಟರು ಎಂಬ ಸುದ್ದಿ ಹರಿದಾಡುತ್ತಿರುವ ನಡುವೆಯೇ ಆಕೆ ಐಟಂ ಹಾಡೊಂಡಕ್ಕೆ ಆಯ್ಕೆಯಾಗಿದ್ದಾರೆ. ತೆಲುಗು ಚಿತ್ರರಂಗದಿಂದ ಬಹುತೇಕ ಕಾಣೆಯಾಗಿದ್ದ ಸಮೀರಾ ಈಗ ಐಟಂ ಬೆಡಗಿಯಾಗಿ ಆಯ್ಕೆಯಾಗಿದ್ದಾರೆ.

'ಕೃಷ್ಣಂ ವಂದೇ ಜಗದ್ಗುರುಂ' ಎಂಬ ತೆಲುಗು ಚಿತ್ರದಲ್ಲಿ ಸಮೀರಾ ಸೊಂಟ ಕುಣಿಸಲಿದ್ದಾರೆ. ಇದು ಅಂತಿಂತಹ ಐಟಂ ಸಾಂಗ್ ಅಲ್ಲವಂತೆ. ಸಿಕ್ಕಾಪಟ್ಟೆ ಎಕ್ಸ್ ಪೋಸ್ ಇರುತ್ತದೆ ಎನ್ನುತ್ತದೆ ಚಿತ್ರತಂಡ. ತೆಲುಗಿನ ದಗ್ಗುಬಾಟಿ ರಾಣಾ ಹಾಗೂ ನಯನತಾರಾ ಚಿತ್ರದ ಮುಖ್ಯ ಪಾತ್ರಧಾರಿಗಳು. ಅಕ್ಟೋಬರ್ ಕೊನೆ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಈ ಹಿಂದೆ ಸಮೀರಾ ಮಾತನಾಡುತ್ತಾ, ನನ್ನ ತಾಯಿ ನಕ್ಷತ್ರಾ ಅವರು ಕನ್ನಡದವರು, ಮಡಿಕೇರಿಯವರು ಕೊಂಕಣಿ ಕನ್ನಡತಿ. ನಮ್ಮಮ್ಮನಿಗೆ ಕನ್ನಡ ಚೆನ್ನಾಗಿ ಗೊತ್ತು. ಆದರೆ ನನಗೆ ಮಾತ್ರ ಬರೋದಿಲ್ಲ ಎಂದಿದ್ದರು.

ಆದರೂ ಕಲಿಯುವ ಮನಸ್ಸಾಗಿದೆ. ಅಮ್ಮನಿಂದಲೇ ಕಲಿಯುತ್ತೇನೆ. ಹಾಗೆ ಸಾಧ್ಯವಾದಷ್ಟು ಬೇಗ ಕಲಿತು ಕನ್ನಡ ಮಾತನಾಡುತ್ತೇನೆ ಎಂದು ನನ್ನ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ ಎಂದು ಇಂಗ್ಲೀಷಿನಲ್ಲೇ ಹೇಳಿ ಅಚ್ಚರಿ ಹುಟ್ಟಿಸಿದ್ದರು. (ಏಜೆನ್ಸೀಸ್)

More from Filmibeat

English summary
Actress Sameera Reddy turns item girl in Telugu. She is going to dance for an raunchy item number in the Telugu film "Krishnam Vande Jagadgurum", Rana and Nayanatara are playing the lead roles in this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X