ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ 2 ಲಕ್ಷ ನೀಡಿದ 'ಬರ್ನಿಂಗ್ ಸ್ಟಾರ್'
ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಉಂಟಾದರೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಮತ್ತು ಅವರ ಅಭಿಮಾನಿಗಳು ತಮ್ಮ ಕೈಲಾದ ಸಹಾಯ ಮಾಡ್ತಾರೆ. ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹವಾದಾಗಲೂ ಇದನ್ನ ನೋಡಿದ್ದೇವೆ. ಈಗ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ನೆರೆ ಸಂತ್ರಸ್ಥರಿಗೆ ಸ್ಟಾರ್ ಗಳು ನೆರೆವಾಗಿದ್ದಾರೆ.
ನಮ್ಮ ರಾಜ್ಯದಲ್ಲಿ ಈ ರೀತಿ ಸಮಸ್ಯೆಗಳಾದರೂ ಬೇರೆ ಭಾಷೆಯ ಯಾರೊಬ್ಬರು ನೆರವು ನೀಡುವುದಿಲ್ಲ. ತೆಲುಗು, ತಮಿಳು, ಹಿಂದಿ ಯಾವ ಇಂಡಸ್ಟ್ರಿಯವರು ಸಹಾಯ ಹಸ್ತ ಚಾಚುವುದಿಲ್ಲ. ಅದೇ ತಮಿಳುನಾಡು, ಕೇರಳದಲ್ಲಿ ಈ ರೀತಿಯಾದರೇ ಕರ್ನಾಟಕದ ಜನ ಮತ್ತು ಕನ್ನಡ ಸ್ಟಾರ್ ಗಳು ದೊಡ್ಡಮಟ್ಟದಲ್ಲಿ ಪ್ರತಿಕ್ರಿಯಿಸುತ್ತಾರೆ.
ಹೀಗಿರುವಾಗ, ತೆಲುಗು ಚಿತ್ರರಂಗದ ಬರ್ನಿಂಗ್ ಸ್ಟಾರ್ ಸಂಪೂರ್ಣೇಶ್ ಬಾಬು, ಉತ್ತರ ಕರ್ನಾಟಕದ ಜನತೆಗೆ ಜೊತೆಯಾಗಿದ್ದಾರೆ. 2 ಲಕ್ಷ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಯಾರಿದು ಬರ್ನಿಂಗ್ ಸ್ಟಾರ್?

ದೊಡ್ಡವರ ಮಧ್ಯೆ ಮಾನವೀಯತೆ ಮರೆದ ನಟ
ತೆಲುಗು ಮತ್ತು ತಮಿಳು ಇಂಡಸ್ಟ್ರಿ ಕರ್ನಾಟಕಕ್ಕೆ ನೆರೆ ರಾಜ್ಯ. ಆದರೆ, ಇದುವರೆಗೂ ಯಾರೊಬ್ಬರು ಉತ್ತರ ಕರ್ನಾಟಕದ ಪ್ರವಾಹಕ್ಕೆ ಸಂಬಂಧಪಟ್ಟಂತೆ ನೆರವು ನೀಡಿಲ್ಲ. ನೆರವು ಬಿಡಿ, ಪ್ರತಿಕ್ರಿಯೆ ಕೂಡ ಕೊಟ್ಟಿಲ್ಲ. ಆದ್ರೆ, ತೆಲುಗು ಇಂಡಸ್ಟ್ರಿಯಲ್ಲಿ ಸಣ್ಣ ಕಲಾವಿದ ಎನಿಸಿಕೊಂಡಿರುವ ಸಂಪೂರ್ಣೇಶ್ ಬಾಬು 2 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.

ಕನ್ನಡದಲ್ಲೇ ಟ್ವೀಟ್ ಮಾಡಿ ನೆರವು
ಉತ್ತರ ಕರ್ನಾಟಕದ ಪ್ರವಾಹದ ಸುದ್ದಿ ನನ್ನ ಮನ ಕಲಕಿಬಿಟ್ಟಿತು, ಕನ್ನಡದ ಜನ ತೆಲುಗು ಚಿತ್ರಗಳನ್ನು ದಶಾಬ್ದಗಳ ಕಾಲದಿಂದ ಆದರಿಸುತ್ತಾ ಬಂದಿದ್ದಾರೆ. ನನ್ನನ್ನು ಸಹ ''ಹೃದಯಕಾಲೇಯಂ'' ಚಿತ್ರದಿಂದ ಬಹಳ ಮೆಚ್ಚಿದ್ದೀರಿ. ಅದಕ್ಕೆ ನಾನು ಚಿರಋಣಿ, ಇತ್ತೀಚಿನ ಪ್ರವಾಹದ ಫೋಟೋಗಳನ್ನ ಮತ್ತು ಆ ಪ್ರಾಂತ್ಯದ ಜನರ ನೋವನ್ನ ನೋಡಿ ನನಗೆ ತುಂಬಾ ದುಃಖ ಉಂಟಾಗಿದೆ. ಈಗ ತೆಲುಗು ಚಿತ್ರೋಧ್ಯಮ ಕನ್ನಡದ ಪ್ರಜೆಗಳಿಗೆ ಸಹಾಯ ಮಾಡುವ ಸಮಯ ಬಂದಿದೆ. ನನ್ನ ಅಳಿಲು ಸೇವೆಯಾಗಿ 2 ಲಕ್ಷ ರೂ ನೆರವು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಜೈ ಹಿಂದ್'' ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡಿಗರಿಂದ ಬಾಬುಗೆ ಧನ್ಯವಾದ
''ಕರ್ನಾಟಕದಲ್ಲಿ ನೂರಾರು ಕೋಟಿ ಕೊಳ್ಳೆ ಹೊಡೆಯೋ ತೆಲುಗು ನಟರು ಕೈ ಕಟ್ಟಿ ಕುಳಿತಿದ್ದಾರೆ. ಇಲ್ಲೊಬ್ಬ ಸಣ್ಣ ನಟ ತನ್ನ ಸ್ವಂತ ದುಡ್ಡಿನಲ್ಲಿ ಸಹಾಯ ಮಾಡಿದ್ದಾನೆ. ಬೆಳ್ ಬೆಳಿಗ್ಗೆ ತೆಲುಗು ತಮಿಳು ಚಿತ್ರ ನೋಡೋಕೆ ಓಡಿ ಹೋಗೋ ಕನ್ನಡಿಗರೇ, ನೀವು ನೋಡೋ ಆ ತೆಲುಗು ಚಿತ್ರ ನಟರು ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುವುದಿಲ್ಲ'' ಎಂದು ಕನ್ನಡಿಗರು ಕಿಡಿ ಕಾರುತ್ತಿದ್ದಾರೆ.

ಬರ್ನಿಂಗ್ ಸ್ಟಾರ್ ಎಂದೇ ಫೇಮಸ್
ಸಂಪೂರ್ಣೇಶ್ ಬಾಬು ಅಂದ್ರೆ ತೆಲುಗು ಇಂಡಸ್ಟ್ರಿಯಲ್ಲಿ ವಿಶೇಷವಾದ ಸ್ಥಾನ ಇದೆ. ಇವರಿಗೆ ವಿಶೇಷವಾದ ಅಭಿಮಾನಿ ಬಳಗ ಇದೆ. ಔಟ್ ಅಂಡ್ ಔಟ್ ಕಾಮಿಡಿ ಜಾನರ್ ಸಿನಿಮಾಗಳನ್ನ ಮಾಡುವ ಇವರನ್ನ ಬರ್ನಿಂಗ್ ಸ್ಟಾರ್ ಎಂದು ಕೂಡ ಕರೆಯುತ್ತಾರೆ. ಹೃದಯಕಾಲೇಯಂ ಎಂಬ ಸಿನಿಮಾ ಮೂಲಕ ಇಂಡಸ್ಟ್ರಿ ಪ್ರವೇಶಿಸಿದ ಬಾಬು ಹಲವು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಸದ್ಯ 'ಕೊಬ್ಬರಿ ಮಟ್ಟ' ಎಂಬ ಸಿನಿಮಾ ತೆರೆಕಂಡಿದೆ.


Click it and Unblock the Notifications











