For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಅಬ್ಬಾ..! ದುನಿಯಾ ವಿಜಯ್ ಕಂದನ ಕಸರತ್ತು ನೋಡಿ

  By Pavithra
  |
  ಕುಸ್ತಿಗಾಗಿ ಅಪ್ಪನನ್ನೇ ಮೀರಿಸುವಂತಿದೆ ಮಗನ ಕಸರತ್ತು..!!! | Filmibeat Kannada

  ಕನ್ನಡ ಸಿನಿಮಾರಂಗದ ಕರಿಚಿರತೆ ದುನಿಯಾ ವಿಜಿ ಯಾವುದೇ ಪಾತ್ರಕ್ಕಾದರೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿ ಸದಾ ಮುಂದಿರುತ್ತಾರೆ. ಪ್ರತಿ ಸಿನಿಮಾಗಾಗಿ ಕೆಲ ಸಮಯ ಮೀಸಲಿಡುತ್ತಾರೆ.

  ಅದಕ್ಕಾಗಿಯೇ ದುನಿಯಾ ವಿಜಿ ಹೀರೋ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅತ್ಯುತ್ತಮ ನಟ ಎನ್ನಿಸಿಕೊಂಡಿರುವುದು. 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದ ನಂತರ ದುನಿಯಾ ವಿಜಿ ತಮ್ಮ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ.

  ದುನಿಯಾ ವಿಜಿ ಜೊತೆ ಅಖಾಡಕ್ಕೆ ಇಳಿಯಲು 'ಸಾಮ್ರಾಟ್' ಸಿದ್ಧ ದುನಿಯಾ ವಿಜಿ ಜೊತೆ ಅಖಾಡಕ್ಕೆ ಇಳಿಯಲು 'ಸಾಮ್ರಾಟ್' ಸಿದ್ಧ

  ವಿಜಯ್ ಅಭಿನಯದ ಮುಂದಿನ ಚಿತ್ರ 'ಕುಸ್ತಿ'ಗಾಗಿ ತಾವು ತಯಾರಾಗುವುದಕ್ಕಿಂತಲೂ ತಮ್ಮ ಮಗ ಸಾಮ್ರಾಟ್ ರನ್ನ ಚೆನ್ನಾಗಿ ರೆಡಿ ಮಾಡಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಕೊಟ್ಟಿದ್ದಾರೆ. ಹೌದು ದುನಿಯಾ ವಿಜಿ ಅವರನ್ನೇ ಮೀರಿಸುವಂತೆ ಮಗ ಸಾಮ್ರಾಟ್ ತಯಾರಾಗಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

  ವಿಜಿ ಹಾದಿಯಲ್ಲೇ ಮಗ ಸಾಮ್ರಾಟ್

  ವಿಜಿ ಹಾದಿಯಲ್ಲೇ ಮಗ ಸಾಮ್ರಾಟ್

  ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸಿನಿಮಾರಂಗಕ್ಕೂ ಬರುವ ಮುನ್ನ ಸಾಮ್ರಾಟ್ ತಯಾರಿ ನೋಡುತ್ತಿದ್ದರೆ ಎಂಥವರಿಗೂ ಆಶ್ಚರ್ಯ ಆಗುತ್ತಿದೆ.

  ನಾಲ್ಕು ತಿಂಗಳಿಂದ ತಯಾರಿ

  ನಾಲ್ಕು ತಿಂಗಳಿಂದ ತಯಾರಿ

  ಕಳೆದ ನಾಲ್ಕು ತಿಂಗಳಿಂದ ಸಾಮ್ರಾಟ್ ವರ್ಕ್ ಔಟ್, ಜಿಮ್ಯಾಸ್ಟಿಕ್, ಕುಸ್ತಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿ ಬೇಸಿಗೆ ರಜೆಯ ಸಂಪೂರ್ಣ ಸಮಯ ಇದಕ್ಕಾಗಿಯೇ ಮೀಸಲಿಟ್ಟಿದ್ದಾರೆ.

  ಉತ್ತಮ ಟ್ರೈನರ್ ಗಳಿಂದ ತರಬೇತಿ

  ಉತ್ತಮ ಟ್ರೈನರ್ ಗಳಿಂದ ತರಬೇತಿ

  ಸಾಮ್ರಾಟ್ ಗೆ ನುರಿತ ಟ್ರೈನರ್ ಗಳಿಂದ ತರಬೇತಿ ಕೊಡಿಸಲಾಗುತ್ತಿದೆ. ಇಂಟ್ರನ್ಯಾಷನಲ್ ಲೆವೆಲ್ ನಲ್ಲಿ ಹೆಸರು ಮಾಡಿರುವ ಬಾಡಿ ಬಿಲ್ಡರ್ ಪ್ರಸಾದ್ ಸಾಮ್ರಾಟ್ ಫಿಟ್ ನೆಸ್ ನೋಡಿಕೊಳ್ಳುತ್ತಾರೆ. ಲೋಕೇಶ್ ಜಿಮ್ಯಾಸ್ಟಿಕ್ ಟ್ರೈನಿಂಗ್ ಮಾಡಿಸುತ್ತಿದ್ದಾರೆ. ದಾವಣಗೆರೆ ಮೂಲದ ಕಾರ್ತಿಕ್ ಕಾಟೆ, ಅಪ್ಪಾಸಿ ತೇರದಾಳ್ , ಬೀರೇಶ್ ಕುಸ್ತಿ ತರಬೇತಿ ಕೊಡುತ್ತಿದ್ದಾರೆ.

  ದಿನವೂ ತಪ್ಪುವುದಿಲ್ಲ ತರಬೇತಿ

  ದಿನವೂ ತಪ್ಪುವುದಿಲ್ಲ ತರಬೇತಿ

  ಬೆಳಗ್ಗೆ ಆರು ಗಂಟೆಯಿಂದ ಎರಡು ತಾಸು ತರಬೇತಿ ಪಡೆಯುವ ಸಾಮ್ರಾಟ್ ಸಂಜೆ ನಾಲ್ಕು ಗಂಟೆಗೆ ಮತ್ತೆ ವರ್ಕ್ ಔಟ್ ಸ್ಟಾರ್ಟ್ ಮಾಡುತ್ತಾರೆ. ಇದು ಪ್ರತಿ ನಿತ್ಯವೂ ನಡೆಯುತ್ತದೆ. ಇನ್ನು ಸುಮಾರು ಎರಡು ತಿಂಗಳುಗಳ ಕಾಲ ಕಠಿಣ ಪರಿಶ್ರಮ ಹಾಕಿದ ಮೇಲೆ ಸಾಮ್ರಾಟ್ ಬೆಳ್ಳಿ ತೆರೆ ಮೇಲೆ ಮಿಂಚಲು ಸಜ್ಜಾಗುತ್ತಾರೆ.

  ನೋವಿನಲ್ಲೂ ಖುಷಿ ಪಡೆಯೋ ವಿಜಯ್

  ನೋವಿನಲ್ಲೂ ಖುಷಿ ಪಡೆಯೋ ವಿಜಯ್

  ಸಾಮಾನ್ಯವಾಗಿ ಎಲ್ಲಾ ಮಕ್ಕಳು ಬೆಸಿಗೆ ರಜೆಯನ್ನು ಎಂಜಾಯ್ ಮಾಡುತ್ತಿರುವಾಗ ತಮ್ಮ ಮಗ ಮಾತ್ರ ಕಷ್ಟ ಪಡುವುದನ್ನ ನೋಡಿದಾಗ ದುನಿಯಾ ವಿಜಯ್ ಅವರಿಗೆ ಬೇಸರವಾಗುತ್ತಂತೆ. ಆದರೆ ತಮ್ಮ ಮಗ ಮುಂದಿನ ದಿನಗಳಲ್ಲಿ ಅವನದ್ದೇ ಹೆಸರಿನಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಿಂದ ಇಷ್ಟೆಲ್ಲಾ ಶ್ರಮ ಹಾಗೂ ಜವಾಬ್ದಾರಿ ವಹಿಸುತ್ತಿದ್ದಾರೆ ವಿಜಯ್.

  English summary
  Samrat Vijay prepration video for upcoming movie Kusthi. samraat workout daily four hours in gym. Duniya Vijay and samraat acting in Kusthi movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X