twitter
    For Quick Alerts
    ALLOW NOTIFICATIONS  
    For Daily Alerts

    ಸಂಯುಕ್ತ ಹೆಗ್ಡೆ ಸಿನಿಮಾ ಮೇಲೆ ರಜನಿಕಾಂತ್ ಅಭಿಮಾನಿಗಳ ಆಕ್ರೋಶ

    |

    ನಟಿ ಸಂಯುಕ್ತ ಹೆಗ್ಡೆ ಕನ್ನಡದಲ್ಲಿ ಸಾಕಷ್ಟು ಕಿರಿಕ್ ಗಳನ್ನು ಮಾಡಿಕೊಂಡು ಈಗ ತಮಿಳಿನತ್ತ ಪ್ರಯಾಣ ಬೆಳೆಸಿದ್ದಾರೆ. 'ಕೋಮಾಲಿ' ಎಂಬ ಸಿನಿಮಾದಲ್ಲಿ ಸಂಯುಕ್ತ ನಟಿಸಿದ್ದಾರೆ. ಇದು ಅವರ ಎರಡನೇ ತಮಿಳು ಸಿನಿಮಾವಾಗಿದೆ. ಆದರೆ, ಈ ಸಿನಿಮಾ ಇದೀಗ ದೊಡ್ಡ ವಿವಾದ ಹುಟ್ಟುಹಾಕಿದೆ.

    ಮತ್ತೆ ಶಾಲೆಗೆ ಹೊರಟ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಮತ್ತೆ ಶಾಲೆಗೆ ಹೊರಟ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ

    ಕಾಲಿವುಡ್ ನಲ್ಲಿ 'ಕೋಮಾಲಿ' ಸಿನಿಮಾ ರಜನಿಕಾಂತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಿನಿಮಾದ ಒಂದು ದೃಶ್ಯದ ವಿರುದ್ಧ ರಜನಿಕಾಂತ್ ಅಭಿಮಾನಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಆ ದೃಶ್ಯವನ್ನು ತೆಗೆಯಲು ಚಿತ್ರತಂಡ ಒಪ್ಪಿಕೊಂಡಿದೆ.

    ಟ್ರೇಲರ್ ನಲ್ಲಿ ರಜನಿಕಾಂತ್ ವಿಡಿಯೋ

    ಟ್ರೇಲರ್ ನಲ್ಲಿ ರಜನಿಕಾಂತ್ ವಿಡಿಯೋ

    'ಕೋಮಾಲಿ' ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಜಯಂ ರವಿ, ಕಾಜಲ್ ಅಗರ್ವಾಲ್ ಹಾಗೂ ಕನ್ನಡದ ಸಂಯುಕ್ತ ಹೆಗ್ಡೆ ನಟಿಸಿದ್ದಾರೆ. ಚಿತ್ರದ ಟ್ರೇಲರ್ ನಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಮಾಡಿರುವ ವಿಡಿಯೋವನ್ನು ಬಳಕೆ ಮಾಡಿದ್ದಾರೆ. ಆದರೆ, ಈ ವಿಡಿಯೋದಲ್ಲಿ ರಜನಿಕಾಂತ್ ವ್ಯಂಗ್ಯ ಮಾಡಲಾಗಿದೆ ಎಂದು ಚಿತ್ರತಂಡ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    'ಕೋಮಾಲಿ' ಚಿತ್ರದ ಸನ್ನಿವೇಶ ಹೀಗಿದೆ

    'ಕೋಮಾಲಿ' ಚಿತ್ರದ ಸನ್ನಿವೇಶ ಹೀಗಿದೆ

    'ಕೋಮಾಲಿ' ಚಿತ್ರದ ನಾಯಕ ಕೋಮಾದಿಂದ 16 ವರ್ಷಗಳ ಬಳಿಕ ಏಳುತ್ತಾನೆ. ಆಗ ಏನೆಲ್ಲ ಆಗುತ್ತದೆ, ಸಮಾಜದ ಬದಲಾವಣೆಯನ್ನು ಆತ ಹೇಗೆ ಸ್ವೀಕರಿಸುತ್ತಾನೆ ಎನ್ನುವುದನ್ನು ಹಾಸ್ಯ ರೂಪದಲ್ಲಿ ಹೇಳಲಾಗಿದೆ. ಈ ರೀತಿ ಕೋಮಾದಿಂದ ಎದ್ದ ನಾಯಕ 'ಈಗ ಯಾವ ವರ್ಷ' ಎಂದು ಕೇಳುತ್ತಾನೆ. ಆಗ ರಜನಿಕಾಂತ್ ರಾಜಕೀಯಕ್ಕೆ ಬಂದ ವಿಡಿಯೋ ಪ್ಲೇ ಮಾಡಿ 2016 ಎಂದು ಹೇಳಲಾಗುತ್ತದೆ. ಅದನ್ನು ನೋಡಿದ ನಾಯಕ 'ನಾನು ಈ ಮಾತನ್ನು 1996ರಲ್ಲಿಯೇ ಕೇಳಿದ್ದೆ.' ಎಂದು ಹೇಳುತ್ತಾನೆ. ವಿವಾದ ಶುರುವಾಗಲು ಇದಿಷ್ಟೇ ಕಾರಣವಾಗಿದೆ.

    ವಿದೇಶಿ ಯುವಕನ ಜೊತೆ ನಟಿ ಸಂಯುಕ್ತ ಹೆಗ್ಡೆ ಲವ್ವಿ ಡವ್ವಿ? ವಿದೇಶಿ ಯುವಕನ ಜೊತೆ ನಟಿ ಸಂಯುಕ್ತ ಹೆಗ್ಡೆ ಲವ್ವಿ ಡವ್ವಿ?

    ಸ್ಟೈಲ್ ಕಿಂಗ್ ಫ್ಯಾನ್ಸ್ ಅಸಮಾಧಾನ

    ಸ್ಟೈಲ್ ಕಿಂಗ್ ಫ್ಯಾನ್ಸ್ ಅಸಮಾಧಾನ

    ರಜನಿಕಾಂತ್ ರಾಜಕೀಯ ಪ್ರವೇಶ ವಿಡಿಯೋವನ್ನು ಬಳಸಿರುವ ಶೈಲಿ ಅಭಿಮಾನಿಗಳಿಗೆ ಇಷ್ಟ ಆಗಿಲಿಲ್ಲ. ಹೀಗಾಗಿ #BoycottComali ಎಂಬ ಹ್ಯಾಶ್ ಟ್ಯಾಗ್ ಬಳಸಿ ಸಿನಿಮಾವನ್ನು ದೂರ ತಳ್ಳಬೇಕು ಎನ್ನುವ ನಿರ್ಧಾರ ಮಾಡಿದ್ದರು. ಆದರೆ, ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚಿತ್ರತಂಡ ಸಿನಿಮಾದಿಂದ ರಜನಿಕಾಂತ್ ದೃಶ್ಯವನ್ನು ತೆಗೆಯಲು ಮುಂದಾಗಿದೆ.

    ಕಮಲ್ ಹಾಸನ್ ಬೆಂಬಲ

    ಕಮಲ್ ಹಾಸನ್ ಬೆಂಬಲ

    ಈ ಘಟನೆಯಲ್ಲಿ ನಟ ಕಮಲ್ ಹಾಸನ್ ತಮ್ಮ ಸ್ನೇಹಿತ ರಜನಿಕಾಂತ್ ಗೆ ಬೆಂಬಲ ನೀಡಿದ್ದಾರೆ. 'ಕೋಮಾಲಿ' ಸಿನಿಮಾದ ಟ್ರೇಲರ್ ನಲ್ಲಿ ಈ ರೀತಿಯಾಗಿ ರಜನಿಕಾಂತ್ ವಿಡಿಯೋವನ್ನು ಬಳಕೆ ಮಾಡಬಾರದಿತ್ತು ಎಂದಿದ್ದಾರೆ. ನಿರ್ದೇಶಕ ರಂಗನಾಥನ್ ಮೊದಲ ಸಿನಿಮಾ ಇದಾಗಿದ್ದು, ಸೂಪರ್ ಸ್ಟಾರ್ ಅಭಿಮಾನಿಗಳ ವಿರೋಧ ಕಟ್ಟಿಕೊಳ್ಳಲು ಇಷ್ಟ ಪಟ್ಟಿಲ್ಲ. ಹೀಗಾಗಿ ಈ ಗಲಾಟೆಯನ್ನು ಇಲ್ಲಿಗೆ ಅಂತ್ಯಗೊಳಿಸಿದ್ದಾರೆ.

    English summary
    Actress Samyukta Hegde's 'Comali' tamil movie controversy. rajinikanth fans not happy with the trailer.
    Tuesday, August 6, 2019, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X