ಐಪಿಎಸ್ ಆಫೀಸರ್ ಆದ ಸಂಯುಕ್ತಾ ಹೊರನಾಡು
Recommended Video

'ಲೈಫು ಇಷ್ಟೇನೇ', 'ಒಗ್ಗರಣೆ' ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಸ್ಸು ಕದ್ದಿರುವ ನಟಿ ಸಂಯುಕ್ತ ಹೊರನಾಡು. ಆಯ್ದ ಚಿತ್ರಗಳಲ್ಲಿ ಮಾತ್ರ ಅಭಿನಯ ಮಾಡುತ್ತಾ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರು ನಟಿ ಈಗ ಐಪಿಎಸ್ ಆಫೀಸರ್ ಆಗಿದ್ದಾರೆ.
ಸಂಯುಕ್ತ ಹೊರನಾಡು 'ಮೈಸೂರು ಮಸಾಲ' ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಚಿತ್ರದಲ್ಲಿ ಐಪಿಎಸ್ ಆಫೀಸರ್ ಪಾತ್ರವನ್ನು ನಿರ್ವಹಿಸುತ್ತಿದ್ದು ಅದಕ್ಕೆ ಬೇಕಿರುವ ತಯಾರಿಯನ್ನು ಮಾಡಿಕೊಳ್ಳುವಲ್ಲಿ ಒಗ್ಗರಣೆಯ ಬೆಡಗಿ ಬ್ಯುಸಿ ಆಗಿದ್ದಾರೆ.
ತೆರೆ ಮೇಲೆ ಐಪಿಎಸ್ ಆಫೀಸರ್ ಆಗಲು ಬೇಕಿರುವ ತಯಾರಿಗಾಗಿ ಸಂಯುಕ್ತ ಮತ್ತು ಸಿನಿಮಾ ನಿರ್ದೇಶಕರು ಐಪಿಎಸ್ ಆಫೀಸರ್ ಡಿ ರೂಪ ಅವರನ್ನು ಭೇಟಿ ಮಾಡಿದ್ದಾರೆ. ಅವರ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಕುಳಿತು ಚರ್ಚೆ ಮಾಡಿದ್ದಾರೆ. ತಮ್ಮ ಹೊಸ ಸಿನಿಮಾ ಬಗ್ಗೆ ಸಂಯುಕ್ತ ಟ್ವಿಟ್ಟರ್ ನಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾರೆ.

'ಮೈಸೂರು ಮಸಾಲ' ಟೈಟಲ್ ಕ್ಯಾಚಿ ಆಗಿದ್ದು ಚಿತ್ರದ ಬಗ್ಗೆ ಮಾತ್ರ ಯಾವುದೇ ಮಾಹಿತಿಯನ್ನು ನೀಡಿಲ್ಲ ನಟಿ ಸಂಯುಕ್ತ. ದಯವಿಟ್ಟು ಗಮನಿಸಿ ಚಿತ್ರದ ನಂತರ ಯಾವಿದೇ ಸಿನಿಮಾಗಳಲ್ಲಿ ಅಭಿನಯಿಸದ ಸಂಯುಕ್ತ ಸದ್ಯ 'ಮೈಸೂರು ಮಸಾಲ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











