ಮೊದಲ ಗುರುವನ್ನು ಕಳೆದುಕೊಂಡ ನೋವಿನಲ್ಲಿ ಸಂಯುಕ್ತ
ಕನ್ನಡ ಸಾಹಿತ್ಯ ಲೋಕದ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಇಂದು (ಜೂನ್ 10) ಬೆಳಗ್ಗೆ ವಿಧಿವಶರಾಗಿದ್ದಾರೆ. ಕಾರ್ನಾಡರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಟಿ ಸಂಯುಕ್ತ ಹೊರನಾಡು ಗಿರೀಶ್ ಕಾರ್ನಾಡ್ ರನ್ನು ಕಳೆದುಕೊಂಡ ನೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಂಯುಕ್ತ ಹೊರನಾಡು ಅವರ ಮೊದಲ ಗುರು ಗಿರೀಶ್ ಕಾರ್ನಾಡ್ ಆಗಿದ್ದು, ಅವರ ಬದುಕಿನ ಪ್ರಮುಖ ಘಟ್ಟದಲ್ಲಿ ಕಾರ್ನಾಡ್ ಇದ್ದರಂತೆ.
ಸಂಯುಕ್ತ ನಟಿಸಿದ್ದ ಮೊದಲ ಸಿನಿಮಾ, ಮೊದಲ ನಾಟಕ, ನಟನೆಯ ಕೋರ್ಸ್ ಎಲ್ಲವೂ ಶುರು ಆಗಿದ್ದು ಗಿರೀಶ್ ಕಾರ್ನಾಡ್ ಮೂಲಕವೇ ಅಂತೆ. ಹೀಗಾಗಿ ಕಾರ್ನಾಡರನ್ನು ಸಂಯುಕ್ತ ಮೊದಲ ಗುರುವಾಗಿ ಕಾಣುತ್ತಿದ್ದರು.

ಕಾರ್ನಾಡರ ನಿಧನರಾದ ವಿಷಯ ತಿಳಿದು ದುಃಖದಲ್ಲಿ ಇರುವ ಸಂಯುಕ್ತ ''ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಮೋದಿರಿಂದ ಹಿಡಿದು, ನಟ ಕಮಲ್ ಹಾಸನ್, ಶಿವರಾಜ್ ಕುಮಾರ್, ಸುಮಲತಾ ಅಂಬರೀಶ್ ಹೀಗೆ ಅನೇಕರು ಕಾರ್ನಾಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಕೆಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಇಂದು ಬೆಳಗ್ಗೆ ಬೆಂಗಳೂರಿನ ಲ್ಯಾವಲ್ಲೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


Click it and Unblock the Notifications











