ಬೆಂಕಿ, ಗಾಳಿ, ನೀರು, ಭೂಮಿಯನ್ನ ಬಿಂಬಿಸಿದ ಸಂಯುಕ್ತ ಹೊರನಾಡು

By Pavithra

Recommended Video

ಸಂಯುಕ್ತ ಹೊಸ ಲುಕ್ ನೋಡಿ ಶಾಕ್ ಆಗ್ತೀರಾ | FIlmibeat Kannada

ಕೆಲ ಕಲಾವಿದರು ತಮ್ಮನ್ನ ಸಿನಿಮಾರಂಗಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳದೆ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಆಗಾಗ ಕಾಣಿಸಿಕೊಳ್ಳುತ್ತಾರೆ. ಅಭಿನಯವನ್ನ ವೃತ್ತಿಯನ್ನಾಗಿ ಮಾಡಿಕೊಂಡಿದ್ದರೂ ಕೂಡ ತಮ್ಮ ಹವ್ಯಾಸಗಳನ್ನ, ಸಮಾಜ ಹಾಗೂ ಪರಿಸರದ ಮೇಲಿನ ಕಾಳಜಿಯನ್ನ ಪ್ರದರ್ಶನ ಮಾಡುತ್ತಲೇ ಇರುತ್ತಾರೆ. ಈ ಸಾಲಿನಲ್ಲಿ ನಿಲ್ಲುವ ನಟಿ ಸಂಯುಕ್ತ ಹೊರನಾಡು.

ಅಭಿನಯವೂ ಸೇರಿದಂತೆ ಸದಾ ಒಂದಲ್ಲ ಒಂದು ಆಸಕ್ತಿ ಹುಟ್ಟಿಸುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದ್ದರಿಂದಲೇ ಸಂಯುಕ್ತ ಅವರಿಗೆ ಎಲ್ಲಾ ವರ್ಗದ ಅಭಿಮಾನಿಗಳಿದ್ದಾರೆ. ಇತ್ತೀಚಿಗಷ್ಟೆ ತಮ್ಮ ಮುದ್ದಿನ ನಾಯಿಮರಿ ಗುಂಡನಿಗೆ ಆರ್ ಸಿ ಬಿ ತಂಡದ ಬಟ್ಟೆ ಹಾಕಿಸಿ ಫೋಟೋ ಶೂಟ್ ಮಾಡಿಸಿದ್ದ ಸಂಯುಕ್ತ ಈಗ ತಮ್ಮದೇ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.

ಅಷ್ಟಕ್ಕೂ ನಟಿ ಸಂಯುಕ್ತ ಹೊರನಾಡು ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿರುವುದು ಯಾವುದೋ ಸಿನಿಮಾಗಾಗಿ ಅಲ್ಲ. ಜಾಗೃತಿ ಮೂಡಿಸಲು. ವಿಶ್ವ ಭೂಮಿ ತಿಂಗಳನ್ನ ತನ್ನದೇ ಸ್ಟೈಲ್ ನಲ್ಲಿ ಆಚರಣೆ ಮಾಡುತ್ತಿದ್ದಾರೆ. ಹಾಗಾದರೆ ಸಂಯುಕ್ತ ಮಾಡಿಸಿರುವ ಫೋಟೋ ಶೂಟ್ ನಲ್ಲಿರುವ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ.

ವಿಶ್ವ ಭೂಮಿ ತಿಂಗಳಿಗೆ ಫೋಟೋ ಶೂಟ್

ವಿಶ್ವ ಭೂಮಿ ತಿಂಗಳಿಗೆ ಫೋಟೋ ಶೂಟ್

'ಲೈಫು ಇಷ್ಟೇನೇ', 'ಒಗ್ಗರಣೆ' ಸಿನಿಮಾಗಳಲ್ಲಿ ಅದ್ಬುತವಾಗಿ ನಟಿಸಿದ ಪ್ರೇಕ್ಷಕರ ಮನಸ್ಸು ಗೆದ್ದ ನಟಿ ಸಂಯುಕ್ತ ಹೊರನಾಡು ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಹೆಣ್ಣು ಮತ್ತು ಭೂಮಿಯನ್ನ ಹೋಲಿಕೆಯ ಪರಿಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

ಬೆಂಕಿ ಮತ್ತು ಹೆಣ್ಣು

ಬೆಂಕಿ ಮತ್ತು ಹೆಣ್ಣು

ಬೆಂಕಿಯನ್ನು ಬಿಂಬಿಸುವ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಸಂಯುಕ್ತ ಕೆಂಪು ಬಣ್ಣದ ಬಟ್ಟೆ ಧರಿಸಿ ಫೋಟೋಸ್ ತೆಗಿಸಿಕೊಂಡಿದ್ದಾರೆ. ಹಿಂಬಂದಿಯಲ್ಲಿ ಅಗ್ನಿಯ ಜ್ವಾಲೆ ಇದ್ದು ಅದರ ಮುಂದೆಯೇ ಶೂಟ್ ಮಾಡಲಾಗಿದೆ. ಹೆಣ್ಣು ಒಂದು ಅದ್ಬುತ ಶಕ್ತಿ ಅವಳಲ್ಲಿ ಯಾವಾಗಲೂ ಇರುತ್ತದೆ ಎನ್ನುವುದು ಈ ಫೋಟೋ ಬಿಂಬಿಸುತ್ತದೆ.

ನದಿಯ ತೀರದಲ್ಲಿ ಶೂಟ್

ನದಿಯ ತೀರದಲ್ಲಿ ಶೂಟ್

ಬೆಂಕಿಯ ನಂತರ ನದಿಯ ತಪ್ಪಲಿನಲ್ಲಿಯೂ ಫೋಟೋ ಶೂಟ್ ಮಾಡಲಾಗಿದ್ದು ತಿಳಿ ನೀಲಿ ಬಣ್ಣದ ಕಾಸ್ಟ್ಯೂಮ್ಸ್ ನಲ್ಲಿ ಸಂಯುಕ್ತ ಕಾಣಿಸಿಕೊಂಡಿದ್ದಾರೆ.

ಭೂಮಿಯ ಪರಿಕಲ್ಪನೆಯಲ್ಲಿ ಸಂಯುಕ್ತ

ಭೂಮಿಯ ಪರಿಕಲ್ಪನೆಯಲ್ಲಿ ಸಂಯುಕ್ತ

ಹೆಣ್ಣು ಮಕ್ಕಳನ್ನು ಭೂಮಿಕೆ ಹೋಲಿಕೆ ಮಾಡಲಾಗುತ್ತೆ. ಅದೇ ರೀತಿಯಲ್ಲಿ ಇಲ್ಲಿಯೂ ಅದೇ ಪರಿಕಲ್ಪನೆಯಲ್ಲಿ ಶೂಟ್ ಮಾಡಲಾಗಿದೆ. ಸುತ್ತಲು ಹಸಿರು ಇರುವ ವಾತಾವರಣದಲ್ಲಿ ಸಂಯುಕ್ತ ಅವರ ಭೂಮಿ ರೂಪದ ಲುಕ್ ಅನ್ನು ಸೆರೆ ಹಿಡಿಯಲಾಗಿದೆ.

ಸಂಯುಕ್ತ ಪರಿಕಲ್ಪನೆಯಲ್ಲಿ ಶೂಟ್

ಸಂಯುಕ್ತ ಪರಿಕಲ್ಪನೆಯಲ್ಲಿ ಶೂಟ್

ಭೂಮಿ, ನೀರು, ಗಾಳಿ ಹಾಗೂ ಅಗ್ನಿ ನಾಲ್ಕು ವಿಚಾರಗಳನ್ನ ಇಟ್ಟುಕೊಂಡು ಶೂಟ್ ಮಾಡಲಾಗಿದೆ. ಬಿಂದ್ಯಾ ಕಣ್ಣಪ್ಪ ಸಂಯುಕ್ತ ಫೋಟೋಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸುಚೇತಾ ಪರಿಕಲ್ಪನೆಗೆ ತಕ್ಕಂತ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದಾರೆ.

More from Filmibeat

English summary
Kannada actress samyukta hornad celebrates the World Earth month. The actress has a new type of photo shoot for World Earth month, photography series, focuses on that trait, be it the fluidity of water, or the warmth of the fire
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X