For Quick Alerts
  ALLOW NOTIFICATIONS  
  For Daily Alerts

  ಡ್ಯಾನಿಶ್ ಸೇಠ್ ಚಿತ್ರಕ್ಕೆ ಜೊತೆಯಾದ ನಟಿ ಸಂಯುಕ್ತಾ ಹೊರನಾಡು

  |

  ಕನ್ನಡ ನಟ ಡ್ಯಾನಿಶ್ ಸೇಠ್ ಅವರ ಹೊಸ ಚಿತ್ರಕ್ಕೆ ಸಂಯುಕ್ತಾ ಹೊರನಾಡು ನಾಯಕಿಯಾಗಿ ನಟಿಸಲಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಲಿರುವ 'ಒನ್ ಕಟ್ ಟು ಕಟ್' ಚಿತ್ರದಲ್ಲಿ ಸಂಯುಕ್ತಾ ಕಾಣಿಸಿಕೊಳ್ಳಲಿದ್ದಾರೆ.

  ಇತ್ತೀಚಿಗಷ್ಟೆ 'ಒನ್ ಕಟ್ ಟು ಕಟ್' ಚಿತ್ರ ಸ್ಕ್ರಿಪ್ಟ್ ಪೂಜೆ ಮಾಡುವ ಮೂಲಕ ಸಿನಿಮಾ ಆರಂಭಿಸಿದೆ. ಈ ವೇಳೆ ಚಿತ್ರತಂಡವನ್ನು ಭೇಟಿ ಮಾಡಿದ ನಟ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ದಂಪತಿ ಶುಭಕೋರಿದರು.

  ಪಿಆರ್‌ಕೆ ಸಂಸ್ಥೆ ಜೊತೆ ಹೊಸ ಸಿನಿಮಾ ಆರಂಭಿಸಿದ ಡ್ಯಾನಿಶ್ ಸೇಠ್ಪಿಆರ್‌ಕೆ ಸಂಸ್ಥೆ ಜೊತೆ ಹೊಸ ಸಿನಿಮಾ ಆರಂಭಿಸಿದ ಡ್ಯಾನಿಶ್ ಸೇಠ್

  ಲಾಕ್‌ಡೌನ್ ಸಮಯದಲ್ಲಿ 'ಫ್ರೆಂಚ್ ಬಿರಿಯಾನಿ' ಉಣಬಡಿಸಿದ ಡ್ಯಾನಿಶ್ ಸೇಠ್ ಈಗ ಗೋಪಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನು ನಕ್ಕು ನಗಿಸಲು ಬರ್ತಿದ್ದಾರೆ. ಲವ್, ಕಾಮಿಡಿ ಹಾಗೂ ಸಾಮಾಜಿಕ ಸಂದೇಶ ಸಾರುವಂತಹ ಕಥೆ ಹೊಂದಿರುವ ಈ ಚಿತ್ರ ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್ ಆಗಿರಲಿದೆಯಂತೆ. ವಂಸಿಧರ್ ಭೋಗರಾಜು ನಿರ್ದೇಶನ ಮಾಡ್ತಿದ್ದಾರೆ.

  ಸಂಯುಕ್ತಾ ಹೊರನಾಡು ಈಗಾಗಲೇ ಒನ್ ಕಟ್ ಟು ಕಟ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಮೊದಲ ದಿನ ನಟ ಪುನೀತ್ ರಾಜ್ ಕುಮಾರ್ ಸಹ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪುನೀತ್ ಜೊತೆಗಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ ಸಂಯುಕ್ತಾ.

  ಡ್ಯಾನಿಶ್ ಸೇಠ್, ಸಂಯುಕ್ತಾ ಹೊರನಾಡು ಜೊತೆ ಪ್ರಕಾಶ್ ಬೆಳವಾಡಿ, ಸಂಪತ್ ಮೈತ್ರೇಯ, ಮತ್ತು ರೂಪಾ ರಾಯಪ್ಪ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.

  Samyukta Hornad is set to star opposite Danish Sait in One Cut Two Cut Movie
  ವಿದೇಶದಲ್ಲಿ KGF 2 ಗೆ ಎದುರಾಯ್ತು ಅಡ್ಡಿ | Filmibeat Kannada

  ಅಂದ್ಹಾಗೆ, 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಸಂಯುಕ್ತಾ ಹೊರನಾಡು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮೈಸೂರು ಮಸಲಾ, ಅರಿಷಡ್ವರ್ಗ, ತಮಿಳಿನ ರೆಡ್ ರಮ್ ಅಂತಹ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Kannada actress Samyukta Hornad is set to star opposite Danish Sait in One Cut Two Cut Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X