»   » ಕಾಮಿಡಿ ಕಿಲಾಡಿ ಶಿವರಾಜ್ ಹೆಂಡತಿ ಆದ ಸಂಯುಕ್ತ ಹೊರನಾಡು!

ಕಾಮಿಡಿ ಕಿಲಾಡಿ ಶಿವರಾಜ್ ಹೆಂಡತಿ ಆದ ಸಂಯುಕ್ತ ಹೊರನಾಡು!

Posted By:
Subscribe to Filmibeat Kannada
samyukta Hornad to play shivaraj kr pete wife in her next movie | Filmibeat Kannada

ಶೀರ್ಷಿಕೆ ಓದಿದ ತಕ್ಷಣ ಏನೇನೋ ಕಲ್ಪನೆ ಮಾಡಿಕೊಳ್ಳುವ ಮುನ್ನ ಇದು ರೀಲ್ ಸಮಾಚಾರ ಅನ್ನೋದು ನಿಮ್ಮ ಗಮನದಲ್ಲಿ ಇರಲಿ..

'ಜೀ ಕನ್ನಡ' ವಾಹಿನಿಯ 'ಕಾಮಿಡಿ ಕಿಲಾಡಿ'ಗಳು ಕಾರ್ಯಕ್ರಮದ ವಿಜೇತರಾಗಿದ್ದ ಶಿವರಾಜ್ ಕೆ.ಆರ್.ಪೇಟೆ ಈಗ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಹೆಂಡತಿಯ ಪಾತ್ರದಲ್ಲಿ ನಟಿ ಸಂಯುಕ್ತ ಹೊರನಾಡು ಕಾಣಿಸಿಕೊಳ್ಳುತ್ತಿದ್ದಾರೆ.

Samyukta Hornad to play Shivaraj KR Pete wife in her next movie

'ಕಾಫಿ ತೋಟ' ಚಿತ್ರದ ನಂತರ ಸಂಯುಕ್ತ ಈಗ ಈ ಚಿತ್ರ ಮಾಡುತ್ತಿದ್ದಾರೆ. 'ನಾನು ಮತ್ತು ಗುಂಡ' ಎಂದು ಚಿತ್ರಕ್ಕೆ ಹೆಸರು ಇಟ್ಟಿದ್ದು, ಚಿತ್ರದ ಕಥೆ ಒಂದು ನಾಯಿಯ ಸುತ್ತ ನಡೆಯುತ್ತದೆಯಂತೆ. ಆ ನಾಯಿಯ ಹೆಸರು ಗುಂಡ ಆಗಿದ್ದು, ಅದೇ ಚಿತ್ರದ ಟೈಟಲ್ ಆಗಿದೆ. ವಿಶೇಷ ಅಂದರೆ, ನಿಜ ಜೀವನದಲ್ಲಿ ಶ್ವಾನಪ್ರಿಯೆಯಾಗಿರುವ ಸಂಯುಕ್ತ, ಚಿತ್ರದಲ್ಲಿಯೂ ಅದೇ ರೀತಿಯ ಪಾತ್ರ ಮಾಡುತ್ತಿದ್ದಾರೆ.

Samyukta Hornad to play Shivaraj KR Pete wife in her next movie

ಪ್ರಾಣಿ ಪ್ರೀತಿ ಮನುಷ್ಯರನ್ನು ಯಾವ ರೀತಿ ಬದಲಿಸುತ್ತದೆ ಎಂಬುದು ಚಿತ್ರದ ಕಥಾ ವಸ್ತುವಾಗಿದೆ. ಇಲ್ಲಿ ಶಿವರಾಜ್ ಮತ್ತು ಸಂಯುಕ್ತ ದಂಪತಿಗಳಾಗಿ ತೆರೆ ಹಂಚಿಕೊಂಡಿದ್ದಾರೆ. ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರಘು ಹಾಸನ್ ಎಂಬುವವರು ನಿರ್ಮಾಣ ಮಾಡಿದ್ದಾರೆ.

English summary
Samyukta Hornad to play 'Comedy Khiladigalu' Shivaraj KR Pete wife role in her next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada