ಟ್ರೋಲ್ ಹುಡುಗರ ಡಾರ್ಲಿಂಗ್ ಸಂಯುಕ್ತಾ ಹೊಸ ವರಸೆ
Recommended Video

ಸಂಯಕ್ತ ಹೆಗಡೆ ಅಂದರೆ ಸಾಕು ಸಿನಿಮಾ ಅಭಿಮಾನಿಗಳು ಆ ಕಿರಿಕ್ ಹುಡ್ಗಿನಾ ಅಂತಾರೆ ಅಷ್ಟರ ಮಟ್ಟಿಗೆ ಸಂಯುಕ್ತ ಕಿರಿಕ್ ಅಂತಾನೇ ಪ್ರಖ್ಯಾತಿ ಪಡೆದುಕೊಂಡು ಬಿಟ್ಟಿದ್ದಾರೆ.
ಒಂದಾದ ನಂತರ ಒಂದರಂತೆ ಎಡವಟ್ಟು ಮಾಡಿಕೊಳ್ಳುತ್ತಲೇ ಇರುವ ಸಂಯುಕ್ತ ಹೆಗ್ಡೆ ಟ್ರೋಲ್ ಹುಡುಗರ ಪಾಲಿಗೆ ಹಬ್ಬದೂಟ ಆಗಿ ಹೋಗಿದ್ದಾರೆ. ಬಿಗ್ ಬಾಸ್ ಗಲಾಟೆ, ಚಿತ್ರ-ವಿಚಿತ್ರ ಭಂಗಿಯ ಫೋಟೋಗಳು ಅದೆಲ್ಲವೂ ಸಾಲದು ಎಂದು ಸೊಂಟ ಬಳಕಿಸುತ್ತಾ ಡ್ಯಾನ್ಸ್ ಇವೆಲ್ಲವೂ ಟ್ರೋಲ್ ಮಾಡುವವರಿಗೆ ಮತ್ತಷ್ಟು ಖುಷಿ ಕೊಟ್ಟಿದೆ.
ಆದರೆ ಇದಕ್ಕೆಲ್ಲ ತಲೆಯೇ ಕೆಡೆಸಿಕೊಳ್ಳದ ಸಂಯುಕ್ತ ತಾನು ಅಂದುಕೊಂಡಿದ್ದನ್ನು ಮಾಡುತ್ತಲೇ ಬರುತ್ತಿದ್ದಾರೆ. ಸದ್ಯ ಕಿರಿಕ್ ಹುಡ್ಗಿ ಸಂಯುಕ್ತ ಹೆಗ್ಡೆ ತಮ್ಮ ಹೊಸ ಫೋಟೋ ಶೂಟ್ ನಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಹೇಗಿದೆ ಸಂಯುಕ್ತ ಹೊಸ ಫೋಟೋಶೂಟ್ ಅದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಹಾಟ್ ಫೋಟೋ ಶೂಟ್ ನಲ್ಲಿ ಸಂಯುಕ್ತಾ
ನಟಿ ಸಂಯುಕ್ತ ಹೆಡ್ಗೆ ಸದ್ಯ ಸದಾ ಸುದ್ದಿಲ್ಲಿರುವ ನಟಿ. ಅಭಿನಯಿಸಿದ್ದು ಎರಡೇ ಚಿತ್ರವಾದರೂ ಸಾಮಾಜಿಕಾ ಜಾಲತಾಣದಲ್ಲಿ ಮಾತ್ರ ಆಗಾಗ ಟ್ರೋಲ್ ಪೇಜ್ ಗಳಿಂದ ವೈರಲ್ ಆಗುತ್ತಲೇ ಇರುತ್ತಾರೆ. ಸದ್ಯ ಜನರು ಸಂಯುಕ್ತರನ್ನ ನೆನಪಿಸಿಕೊಳ್ಳುತ್ತಿರುವುದು ಅವರ ಹಾಟ್ ಲುಕ್ ಫೋಟೋಶೂಟ್ ನಿಂದ.

ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳು
ಸಂಯುಕ್ತಾ ಹೆಡ್ಗೆ ಇತ್ತೀಚಿಗಷ್ಟೆ ಮಾಡಿಸಿಕೊಂಡಿರುವ ಫೋಟೋಶೂಟ್ ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಎಂದು ಕಾಣಿಸಿಕೊಳ್ಳದ ಲುಕ್ ನಲ್ಲಿ ಸಂಯುಕ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಟ್ರೋಲ್ ಗಳಿಗೆ ಹೆದರಿದ್ರಾ ಸಂಯುಕ್ತಾ?
ಎಷ್ಟೇ ಟ್ರೋಲ್ ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಂಯುಕ್ತಾ ಈ ಬಾರಿ ಟ್ರೀಲ್ ಪೇಜ್ ನವರಿಗೆ ಅಂಜಿದ್ರಾ ಅನ್ನೋ ಅನುಮಾನಗಳು ಬರುತ್ತಿವೆ. ಯಾಕೆಂದರೆ ಹೊಸ ಫೋಟೋ ಸೂಟ್ ನ ಫೋಟೋಗಳನ್ನ ಸಂಯುಕ್ತ ತಮ್ಮ ಇನ್‌ಸ್ಟಾ ಗ್ರಾಂ ಹಾಗೂ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಲ್ಲ.

ಸಿನಿಮಾಗಳಿಂದ ದೂರ ಉಳಿದ ಸಂಯುಕ್ತಾ
ಸದ್ಯ ಸಂಯುಕ್ತಾ ಹೆಡ್ಗೆ ಕೇವಲ ಒಂದು ಚಿತ್ರದಲ್ಲಿ ಮಾತ್ರ ಅಭಿನಯ ಮಾಡುತ್ತಿದ್ದು ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಆದರೆ ಗಾಂಧಿನಗರದ ಮಾತಿನ ಪ್ರಕಾರ ಚಿತ್ರರಂಗವೇ ಅವರನ್ನ ದೂರ ಇಟ್ಟಿದ್ಯಂತೆ.


Click it and Unblock the Notifications











