»   » ಕೊನೆಗೂ ಕಾಲಿವುಡ್ ಗೆ ಹಾರಿದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ

ಕೊನೆಗೂ ಕಾಲಿವುಡ್ ಗೆ ಹಾರಿದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ

Posted By:
Subscribe to Filmibeat Kannada

ನಟಿ ಸಂಯುಕ್ತ ಹೆಗ್ಡೆ ತಮ್ಮ ಕಿರಿಕ್ ವಿಷಯಗಳ ಮೂಲಕ ಸಖತ್ ಸುದ್ದಿ ಮಾಡುತ್ತಾ ಇರುತ್ತಾರೆ. ಈ ಹಿಂದೆ ತಮಿಳು ಸಿನಿಮಾಗಾಗಿ ಕನ್ನಡ ಚಿತ್ರವನ್ನು ಬಿಟ್ಟು ಸಂಯುಕ್ತ ದೊಡ್ಡ ವಿವಾದ ಸೃಷ್ಟಿಸಿದ್ದರು. ಆದರೆ ಈಗ ಆ ದೊಡ್ಡ ಅವಕಾಶ ಸಂಯುಕ್ತ ಕೈ ಸೇರಿದೆ.

ಕಿರಿಕ್ ಸಂಯುಕ್ತಾ ಬಟ್ಟೆ ನೋಡಿ ಕ್ಲಾಸ್ ತಗೊಂಡ ನೆಟ್ಟಿಗರು

ನಟ ಪ್ರಭುದೇವ ಜೊತೆ ಸಂಯುಕ್ತ ಸಿನಿಮಾ ಮಾಡುವುದು ಫೈನಲ್ ಆಗಿದೆಯಂತೆ. ಚಿತ್ರದ ಲೀಡ್ ರೋಲ್ ನಲ್ಲಿ ಸಂಯುಕ್ತ ಕಾಣಿಸಿಕೊಂಡಿದ್ದು, ಇದು ಅವರ ಮೊದಲ ತಮಿಳು ಸಿನಿಮಾ ಆಗಿದೆ. ಜೊತೆಗೆ ಪ್ರಭುದೇವ ಸಿನಿಮಾ ಆಗಿರುವುದರಿಂದ ಚಿತ್ರದಲ್ಲಿ ಭರ್ಜರಿ ಡ್ಯಾನ್ಸ್ ಇರಲಿದೆ.

Samyuktha Hegde bags film opposite Prabhudheva

ವಿಶೇಷ ಅಂದರೆ ಪ್ರದೀಪ್ ಎಂಬ 23 ವರ್ಷದ ಹುಡುಗ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಂಯುಕ್ತ 'ಕಾಲೇಜ್ ಕುಮಾರ್' ಚಿತ್ರದಲ್ಲಿ ಬ್ಯುಸಿ ಇದ್ದು, ನಂತರ ಕಾಲಿವುಡ್ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಅಂದಹಾಗೆ, ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಚಿತ್ರದ ಚಿತ್ರೀಕರಣ ಅಕ್ಟೋಬರ್ ನಲ್ಲಿ ಶುರು ಆಗಲಿದೆಯಂತೆ.

English summary
Kannada Actress Samyuktha Hegde bags film opposite Prabhudheva.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada