ವಿದೇಶಿ ಯುವಕನ ಜೊತೆ ನಟಿ ಸಂಯುಕ್ತ ಹೆಗ್ಡೆ ಲವ್ವಿ ಡವ್ವಿ?
Recommended Video
ಸ್ಯಾಂಡಲ್ ವುಡ್ ನ ನಟಿ ಸಂಯುಕ್ತ ಹೆಗ್ಡೆ ಸಿನಿಮಾಗಳಿಗಿಂತ ಹೆಚ್ಚು ವಿವಾದಗಳ ಮೂಲಕವೆ ಸದ್ದು ಮಾಡಿದವರು. 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತ ಆ ನಂತರ ರಿಯಾಲಿಟಿ ಶೋಗಳ ಮೂಲಕವೆ ಹೆಚ್ಚು ಗಮನ ಸೆಳೆದವರು.
ಆದ್ರೀಗ ಸಂಯುಕ್ತ ಯಾವ ಸಿನಿಮಾಗಳಲ್ಲಾಗಲಿ ಅಥವಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಾದ್ರೆ ಸಂಯುಕ್ತ ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ? ಎನ್ನುವ ಕುತೂಹಲ ಇದ್ದವರಿಗೆ, ಸಂಯುಕ್ತ ಕಡೆಯಿಂದ ಒಂದು ಅಚ್ಚರಿಕರ ಸುದ್ದಿ ಹೊರಬಿದ್ದಿದೆ. ಹೌದು ಕಿರಿಕ್ ಸುಂದರಿ ಈಗ ವಿದೇಶ ಯುವಕನ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇದಕ್ಕೆ ಕಾರಣವಾಗಿದ್ದು ವಿದೇಶದಲ್ಲಿ ಇಬ್ಬರು ಕೈ ಕೈ ಹಿಡಿದು ಓಡಾಡುತ್ತಿದ್ದಾರೆ.
ಸಂಯುಕ್ತ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ವಿದೇಶಿ ಯುವಕನ ಮನಗೆದ್ದಿರುವ ಸಂಯುಕ್ತ, ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಯುಕ್ತ ಮನಗೆದ್ದಿರುವ ಆ ಯುವಕ ಜರ್ಮನಿ ಮೂಲಕ ಕ್ರಿಸ್ ಸಾವರ್. ಇಬ್ಬರು ಜರ್ಮನಿಯ ಸುಂದರ ತಾಣಗಳಲ್ಲಿ ಸುತ್ತಾಡುತ್ತ ಮಸ್ತ್ ಮಜಾ ಮಾಡುತ್ತಿದ್ದಾರೆ.

ಇಬ್ಬರ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಂಯುಕ್ತ ಪ್ರೀತಿಯಲ್ಲಿ ಬಿದ್ದಿರುವುದು ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ, ಸಂಯುಕ್ತ ಮತ್ತು ಕ್ರಿಸ್ ನಡುವಿನ ಸಂಬಂಧ ಹೇಗಿದೆ ಎನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
"ನನ್ನನ್ನು ಎಲ್ಲರಿಗಿಂತ ಹೆಚ್ಚು ಕಾಡಿಸುವವನೇ ನೀನು. ನನ್ನನ್ನು ಇನ್ನಷ್ಟು ಕ್ರೇಝಿ ಆಗಿಸುತ್ತೀಯ. 5 ವರ್ಷದ ಮಕ್ಕಳಂತೆ ನಾವು ಜಗಳ ಮಾಡಿಕೊಂಡರೂ ಆ ಎಲ್ಲ ಕಿರಿಕಿರಿ ಕ್ಷಣಗಳನ್ನು ನಾನು ನಿನ್ನೊಂದಿಗೆ ಕಳೆಯಲು ಇಷ್ಟಪಡುತ್ತೇನೆ" ಎಂದು ಸಂಯುಕ್ತ ಹೇಳಿರುವ ಮಾತುಗಳು ಎಲ್ಲರ ಗಮನ ಸೆಳೆಯುತ್ತಿದೆ.
ಇಬ್ಬರು ತುಂಬಾ ಕ್ಲೋಸ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಈ ಕ್ರಿಸ್ ಸಾವರ್ ಯಾರು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ ಸಂಯುಕ್ತ. ಸಂಯುಕ್ತ 'ಕಾಲೇಜು ಕುಮಾರ' ಸಿನಿಮಾ ನಂತರ 'ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ' ಸಿನಿಮಾದಲ್ಲು ಅಭಿನಯಿಸಿದ್ದಾರೆ. ಇನ್ನು ಬಿಗ್ ಬಾಸ್ ಸೀಸನ್ 5, ಎಂ ಟಿವಿ ರೋಡೀಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿಗಳಿಸಿದ್ದಾರೆ.


Click it and Unblock the Notifications











