'ಕಿರಿಕ್' ಸಂಯುಕ್ತಾಗೆ ಸಿಕ್ಕೇ ಬಿಡ್ತು ತಮಿಳಿನಲ್ಲಿ ದೊಡ್ಡ ಅವಕಾಶ

Recommended Video

ಸಂಯುಕ್ತ ಲಕ್ ಬದಲಾಯ್ತು ನೋಡಿ..! | Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತಾ ಹೆಗ್ಡೆ ತಮಿಳು ಚಿತ್ರಕ್ಕಾಗಿ ಕನ್ನಡ ಸಿನಿಮಾಗಳಿಗೆ ಕೈಕೊಟ್ಟಿದ್ದಾರೆ ಎಂಬ ಸುದ್ದಿ ಈ ಹಿಂದೆಯೊಮ್ಮೆ ಕೇಳಿರ್ತೀರಾ. ಅಂದುಕೊಂಡಂತೆ ಆಗಿದ್ದರೇ ಇಷ್ಟೋತ್ತಿಗಾಲೇ ಸಂಯುಕ್ತಾ ತಮಿಳು ಚಿತ್ರದಲ್ಲಿ ನಟಿಸಿ, ಆ ಸಿನಿಮಾನೂ ಬಿಡುಗಡೆಯಾಗಬೇಕಿತ್ತು.

ಆದ್ರೆ, ಅದೇನ್ ಆಯ್ತೋ ಗೊತ್ತಿಲ್ಲ. ಸಂಯುಕ್ತಾ ಯಾವ ತಮಿಳು ಚಿತ್ರದಲ್ಲೂ ಅಭಿನಯಿಸಿಲಿಲ್ಲ. ಈಗ ಬ್ಯಾಕ್ ಟು ಬ್ಯಾಕ್ ತಮಿಳು ಪ್ರಾಜೆಕ್ಟ್ ಸಂಯುಕ್ತಾಗೆ ಸಿಗ್ತಿದೆ. ಮೊನ್ನೆಯಷ್ಟೇ 'ಪಪ್ಪಿ' ಸಿನಿಮಾದಲ್ಲಿ ನಾಯಕಿಯಾಗಿ ಚಾನ್ಸ್ ಪಡೆದುಕೊಂಡಿದ್ದ ಸಂಯುಕ್ತಾ, ಈಗ ತಮಿಳು ಸ್ಟಾರ್ ನಟನ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಅಂದ್ಹಾಗೆ, ಈ ಸಿನಿಮಾದಲ್ಲಿ ಸಂಯುಕ್ತಾಗೂ ಮುಂಚೆ ಮತ್ತೊಬ್ಬ ಸ್ಟಾರ್ ನಟಿ ನಾಯಕಿಯಾಗಿದ್ದಾರೆ. ಹಾಗಿದ್ರೆ, ಸಂಯುಕ್ತಾ ಯಾವ ಪಾತ್ರಕ್ಕೆ.? ಯಾರು ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು.? ಎಂಬ ಉಳಿದ ಮಾಹಿತಿಗಳು ಮುಂದಿದೆ. ಓದಿ....

ಜಯಂ ರವಿ ಜೊತೆ ಸಂಯುಕ್ತಾ

ಜಯಂ ರವಿ ಜೊತೆ ಸಂಯುಕ್ತಾ

ಜಯಂ ರವಿ ಅಭಿನಯಿಸುತ್ತಿರುವ ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನ್ ಮೆಂಟ್ ಕಥೆ ಇದಾಗಿದ್ದು, ಈ ಚಿತ್ರದಲ್ಲಿ ಸಂಯುಕ್ತಾ ಮುಖ್ಯಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ಈ ವಿಷ್ಯವನ್ನ ಖುದ್ದು ಸಂಯುಕ್ತಾ ಅವರೇ ಖಚಿತ ಪಡಿಸಿದ್ದಾರೆ.

ಇವರೇ ಹೀರೋಯಿನ್

ಇವರೇ ಹೀರೋಯಿನ್

ಜಯಂ ರವಿಯ ಈ ಚಿತ್ರಕ್ಕೆ ಬಹುಭಾಷಾ ನಟಿ ಕಾಜಲ್ ಅಗರ್ ವಲ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದು ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ. ಸಂಯುಕ್ತಾ ಕೂಡ ಚಿತ್ರದಲ್ಲಿ ಓರ್ವ ನಾಯಕಿಯೇ. ಈ ಚಿತ್ರವನ್ನ ಪ್ರದೀಪ್ ರಂಗನಾಥನ್ ನಿರ್ದೇಶನ ಮಾಡ್ತಿದ್ದಾರೆ.

'ಪಪ್ಪಿ' ಚಿತ್ರದಲ್ಲಿ ನಟನೆ

'ಪಪ್ಪಿ' ಚಿತ್ರದಲ್ಲಿ ನಟನೆ

ಅಂದ್ಹಾಗೆ, ಜಯಂ ರವಿ ಜೊತೆ ಅಭಿನಯಿಸಲಿರುವ ಸಿನಿಮಾ ಸಂಯುಕ್ತಾಗೆ ಎರಡನೇ ತಮಿಳು ಸಿನಿಮಾ. ಇದಕ್ಕೂ ಮುಂಚೆ ಪಪ್ಪಿ ಎಂಬ ಚಿತ್ರದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಇನ್ನು ಶೂಟಿಂಗ್ ಹಂತದಲ್ಲಿದೆ. ವಿಶೇಷ ಅಂದ್ರೆ, ಈ ಎರಡು ಚಿತ್ರಗಳಿಗೂ ಒಂದೇ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿದೆ.

ಬಹುಭಾಷಾ ನಟಿಯಾದ ಸಂಯುಕ್ತಾ

ಬಹುಭಾಷಾ ನಟಿಯಾದ ಸಂಯುಕ್ತಾ

ಹಾಗ್ನೋಡಿದ್ರೆ ಸಂಯುಕ್ತಾ ಹೆಗ್ಡೆ ಸಿನಿಮಾಗಿಂದ ಖಾಸಗಿ ವಿಷ್ಯಗಳಿಗೆ ಹೆಚ್ಚು ಸುದ್ದಿಯಾಗಿದ್ದರು. ಕಿರಿಕ್ ಪಾರ್ಟಿ ಆದ ನಂತರ 'ಕಾಲೇಜ್ ಕುಮಾರ' ಸಿನಿಮಾ ಮಾಡಿದ್ದು ಬಿಟ್ಟರೆ ಬೇರೆ ಯಾವ ಚಿತ್ರದಲ್ಲಿ ನಟಿಸಿಲಿಲ್ಲ. ಈ ಮಧ್ಯೆ ತೆಲುಗು ಭಾಷೆಯ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಮೂಲ ಪಾತ್ರವನ್ನೇ ಸಂಯುಕ್ತಾದಲ್ಲಿ ಅಭಿನಯಿಸಿದ್ದರು. ಅಲ್ಲಿಗೆ ತೆಲುಗು ಸಿನಿಲೋಕಕ್ಕೂ ಕಾಲಿಟ್ಟಿದ್ದರು. ಈಗ ತಮಿಳು ಇಂಡಸ್ಟ್ರಿಗೂ ಹೆಜ್ಜೆಯಿಟ್ಟರು.

More from Filmibeat

English summary
Jayam Ravi and Kajal Aggarwal are coming together for the first time for a film by debutant Pradeep Ranganathan. Now, we hear that popular Kannada actress Samyuktha Hegde has been roped in to play a key role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X