Just In
Don't Miss!
- News
ಮಾರ್ಚ್ 4ರಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ಸದ್ದು -ಗದ್ದಲ ಶುರು ಮಾಡಿದ ಸಂಯುಕ್ತ ಹೆಗಡೆ

ನಟಿ ಸಂಯುಕ್ತ ಹೆಗಡೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಅನ್ನೋದನ್ನ ಅವರ ಫೇಸ್ ಬುಕ್ ಹಾಗೂ ಇನ್‌ಸ್ಟಾಗ್ರಾಂ ನಲ್ಲಿ ನೋಡಿ ತಿಳಿದುಕೊಳ್ಳುವಂತಾಗಿದೆ.
ಸಂಯುಕ್ತ ಹೆಗಡೆ ಕೈನಲ್ಲಿ ಕನ್ನಡದ ಯಾವುದೇ ಸಿನಿಮಾಗಳು ಇಲ್ಲ. ಆದರೆ ತೆಲುಗಿನಲ್ಲಿ ಬಿಡುಗಡೆ ಆಗುತ್ತಿರುವ ಕನ್ನಡದ ಕಿರಿಕ್ ಪಾರ್ಟಿ ರಿಮೇಕ್ ಚಿತ್ರದಲ್ಲಿ ಇವರೇ ಎರಡನೇ ನಾಯಕಿ. ಚಿತ್ರದ ಟೀಸರ್ ಬಿಡುಗಡೆ ಆಗಿದೆ ಆದರೆ ಸಂಯುಕ್ತ ಬಗ್ಗೆ ಮಾತ್ರ ಸುದ್ದಿನೇ ಇಲ್ಲ.
ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಬಳಿಕ ಸಂಯುಕ್ತಾಗೆ ಈ ಗತಿ ಬಂತು!
ಈಗ ಸಂಯುಕ್ತ ಸುದ್ದಿ ಮಾಡುತ್ತಿರುವುದು ಟ್ರೋಲ್ ಪೇಜ್ ನಲ್ಲಿ ಮಾತ್ರ. ಶ್ರೀಲಂಕಾ ಸುತ್ತಿ ಬಂದಿರುವ ಈ ನಟಿಯ ಫೋಟೋಗಳು ಟ್ರೋಲ್ ಪೇಜ್ ಗಳಿಗೆ ಆಹಾರ ಆಗಿದೆ. ಅಷ್ಟೇ ಅಲ್ಲದೆ ಸಿನಿಮಾ ಪ್ರೇಕ್ಷಕರು ಸಂಯುಕ್ತ ಫೋಟೋ ನೋಡಿ ಸಖತ್ ಗರಂ ಆಗಿದ್ದಾರೆ. ಜನರಿಗೆ ಯಾಕೆ ಸಂಯುಕ್ತ ಕಂಡರೆ ಕೋಪ? ಭಾರಿ ಟ್ರೋಲ್ ಆಗುತ್ತಿರುವ ಫೋಟೊ ಯಾವುದು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಮತ್ತೆ ಟ್ರೋಲ್ ಆಗುತ್ತಿರುವ ನಟಿ
ಸಿನಿಮಾತಂಡಗಳ ಜೊತೆಯಲ್ಲಿ ಬಿಗ್ ಮನೆಯಲ್ಲಿ ಕಿರಿಕ್ ಮಾಡಿಕೊಂಡ ನಟಿ ಸಂಯುಕ್ತ ಹೆಗಡೆ ಟ್ರೋಲ್ ಪೇಜ್ ಗಳಲ್ಲಿ ಸುದ್ದಿ ಆಗುತ್ತಿದ್ದಾರೆ. ವಿಚಿತ್ರ ಭಂಗಿಗಳಲ್ಲಿ ಸಂಯುಕ್ತ ತೆಗೆದುಕೊಂಡಿರುವ ಫೋಟೋಗಳು ವೈರಲ್ ಆಗಿವೆ.

ವಿಚಿತ್ರವಾಗಿದೆ ಸಂಯುಕ್ತ ಫೋಟೋಗಳು
ಶ್ರೀಲಂಕಾ ಹಾಗೂ ಬೆಂಗಳೂರಿನಲ್ಲಿ ಸಂಯುಕ್ತ ತೆಗೆದುಕೊಂಡಿರುವ ಪೋಟೋಗಳು ಸಖತ್ ವೈರಲ್ ಆಗಿವೆ. ಟ್ರೋಲ್ ಪೇಜ್ ನವರು ರಸ್ತೆಯಿಂದ ಹಿಡಿದು ಮೋದಿ ಸಂದರ್ಶನದ ವರೆಗೂ ಸಂಯುಕ್ತ ಅವರ ಫೋಟೋಗಳನ್ನ ಹರಿದಾಡಿಸುತ್ತಿದ್ದಾರೆ.

ಶುರುವಾಗಿದೆ ಪರ-ವಿರೋಧ ಚರ್ಚೆ
ನಟ ಸಂಯುಕ್ತ ತುಂಡು ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಿನಿಮಾ ಪ್ರೇಕ್ಷಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಮಾಡ್ರನ್ ಬಟ್ಟೆಗಳನ್ನ ಧರಿಸಲಿ ಆದರೆ ಅಸಹ್ಯ ಹುಟ್ಟಿಸುವಂತ ಬಟ್ಟೆಗಳನ್ನ ಧರಿಸುವುದು ತಪ್ಪು ಎಂದು ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಬಿಂದಾಸ್ ಸಂಯುಕ್ತ ಹೆಗಡೆ
ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲಾ ಚರ್ಚೆಗಳು ಆಗುತ್ತಿದ್ದರು ಸಂಯುಕ್ತ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಯಾವುದೇ ಕಮೆಂಟ್ ಬಂದರು ಕೇರ್ ಮಾಡದೆ ಸುಮ್ಮನಿದ್ದಾರೆ.