ಬಿಕಿನಿ ತೊಟ್ಟು ಮತ್ತೆ ಹಾಟ್ ಅವತಾರ ತಾಳಿದ 'ಕಿರಿಕ್' ಹುಡುಗಿ ಸಂಯುಕ್ತಾ ಹೆಗ್ಡೆ
'ಕಿರಿಕ್ ಪಾರ್ಟಿ' ಸಿನಿಮಾದಿಂದ ಜನಪ್ರಿಯತೆ ಗಳಿಸಿದ ಸಂಯುಕ್ತಾ ಹೆಗ್ಡೆ ಆ ನಂತರ ತುಸು ಮಂಕಾದರು. ಈಗಲೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೂ, ಗಟ್ಟಿ ನೆಲೆ ನಿಲ್ಲಲು ಪ್ರಯತ್ನಗಳನ್ನು ಮುಂದುವರೆಸಿದ್ದಾರೆ.
ಸಂಯುಕ್ತಾ ತಮ್ಮ ನಟನೆಗಿಂತಲೂ ಹೆಚ್ಚಾಗಿ ತಮ್ಮ ಗ್ಲಾಮರಸ್ ಉಡುಪು ಹಾಗೂ ಬಿಂದಾಸ್ ಜೀವನ ಶೈಲಿಯಿಂದ ಸುದ್ದಿಯಲ್ಲಿದ್ದವರು. ಡೋಂಟ್ ಕೇರ್ ಆಟಿಟ್ಯೂಡ್‌ನಿಂದ ಹಲವು ಅಭಿಮಾನಿಗಳನ್ನು ಸಂಪಾದಿಸಿರುವ ಕಿರಿಕ್ ಬೆಡಗಿ ಸಂಯುಕ್ತಾ, ಅಷ್ಟೆ ಸಂಖ್ಯೆಯ ಟೀಕಾಕಾರರನ್ನೂ ಪಡೆದಿದ್ದಾರೆ.
'ನನ್ನ ಜೀವನ ನನ್ನಿಷ್ಟ' ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿರುವ ಸಂಯುಕ್ತಾ ಹೆಗಡೆ ಟ್ರೊಲ್‌ಗಳಿಗೆಲ್ಲ ಸೊಪ್ಪು ಹಾಕುವುದಿಲ್ಲ. ಅವರಿಗೆ ಇಷ್ಟವಾದ ಕಾರ್ಯವನ್ನು ಮಾಡುವುದು, ಅನಿಸಿದ್ದನ್ನು ಹೇಳುವುದೇ ಅವರ ಸ್ಟೈಲ್. ಇದೀಗ ನಟಿ ಸಂಯುಕ್ತಾ ಹೆಗ್ಡೆ ಬಿಕಿನಿ ಧರಿಸಿ ಫೋಟೊಕ್ಕೆ ಫೋಸ್ ನೀಡಿದ್ದಾರೆ. ಯಥಾವತ್ತು ಕೆಲವು ಟ್ರೋಲರ್‌ಗಳು ಅಸಭ್ಯ ಕಮೆಂಟ್‌ಗಳನ್ನು ಮಾಡಿದ್ದಾರಾದರೂ ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಸಂಯುಕ್ತಾ.
ಸಂಯುಕ್ತಾ ಹೆಗ್ಡೆ ಅಬುದಾಬಿಯಲ್ಲಿದ್ದು, ನೀಲಿ ಬಣ್ಣದ ಬಿಕಿನಿ ಧರಿಸಿ ಅಲ್ಲಿನ ವಿಶಾಲ ಸ್ವಿಮ್ಮಿಂಗ್ ಪೂಲ್ ಒಂದರ ದಂಡೆಯ ಮೇಲೆ ಕುಳಿತು ಕ್ಯಾಮೆರಾಕ್ಕೆ ಫೋಸ್ ನೀಡಿದ್ದಾರೆ ಸಂಯುಕ್ತಾ ಹೆಗ್ಡೆ. ತಮ್ಮ ದೇಹವನ್ನು ಕಡಿಮೆ ಆವರಿಸುವಂಥಹಾ ಬಿಕಿನಿಯನ್ನೇ ಆಯ್ದು ಧರಿಸಿದಂತಿದೆ ಸಂಯುಕ್ತಾ ಹೆಗಡೆ.

ಸಂಸ್ಕೃತಿ, ಸಭ್ಯತೆ ಪಾಠ ಮಾಡಿದ್ದಾರೆ ಕೆಲವರು
ತಮ್ಮ ಬಿಕಿನಿ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಸಂಯುಕ್ತಾ ಹೆಗ್ಡೆ, ನಟಿಯ ಹಾಟ್ ಚಿತ್ರಗಳನ್ನು ನೋಡಿ ಅಭಿಮಾನಿಗಳು ಹಲವು ನಾಟಿ ಕಮೆಂಟ್‌ಗಳನ್ನು ಹರಿ ಬಿಟ್ಟಿದ್ದಾರೆ. ಕೆಲವರು 'ಬುದ್ಧಿವಾದ' ಹೇಳುವ ಯತ್ನವನ್ನೂ ಮಾಡಿದ್ದಾರೆ. ಇನ್ನು ಕೆಲವರು ಸಂಸ್ಕೃತಿ, ಸಭ್ಯತೆಯ ಪಾಠ ಮಾಡಿದ್ದಾರೆ. ಆದರೆ ಹೆಚ್ಚಿನ ಮಂದಿ ಸಂಯುಕ್ತಾರ ಈ ಹಾಟ್ ಚಿತ್ರಗಳನ್ನು ಮೆಚ್ಚಿಕೊಂಡಿದ್ದಾರೆ.

ಉಡುಪಿನ ವಿಚಾರಕ್ಕೆ ಸಮಸ್ಯೆಗೆ ಸಿಲುಕಿದ್ದ ನಟಿ
ತಾವು ತೊಟ್ಟ ಉಡುಪಿನ ವಿಚಾರಕ್ಕೆ ಹಿಂದೊಮ್ಮೆ ಸಮಸ್ಯೆ ಎದುರಿಸಿದ್ದರು ನಟಿ ಸಂಯುಕ್ತಾ ಹೆಗ್ಡೆ. 2020 ರ ಸೆಪ್ಟೆಂಬರ್ ತಿಂಗಳಲ್ಲಿ ಗೆಳತಿಯರೊಟ್ಟಿಗೆ ಬೆಂಗಳೂರಿನ ಪಾರ್ಕ್ ಒಂದರಲ್ಲಿ ಸಂಯುಕ್ತಾ ಆಟವಾಡುತ್ತಿದ್ದಾಗ, ಸಂಯುಕ್ತಾ ಧರಿಸಿರುವ ಉಡುಪಿನ ಬಗ್ಗೆ ಕೆಲವರು ಆಕ್ಷೇಪಣೆ ಎತ್ತಿದ್ದರು. ಒಬ್ಬ ಹಿರಿಯ ಮಹಿಳೆಯಂತೂ ಸಂಯುಕ್ತಾರ ಗೆಳತಿಯ ಮೇಲೆ ಹಲ್ಲೆ ಮಾಡಿದ್ದರು. ಗುಂಪೊಂದು ಸೇರಿ ಸಂಯುಕ್ತಾ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಪಾರ್ಕ್‌ನ ಗೇಟಿಗೆ ಬೀಗ ಹಾಕಿ ಬಂಧಿಸಿದ್ದರು ಸಹ. ಅನೈತಿಕ ಪೊಲೀಸ್‌ಗಿರಿಗೆ ಸಂಯುಕ್ತಾ ಗುರಿಯಾಗಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದರು.

ಬೆಂಬಲ ಸೂಚಿಸಿದ್ದ ಖ್ಯಾತ ನಾಮರು
ಆ ಘಟನೆಯ ಬಳಿಕ ನಟಿ ರಮ್ಯಾ ಸೇರಿದಂತೆ ಹಲವು ಖ್ಯಾತನಾಮರು ಸಂಯುಕ್ತಾ ಹೆಗ್ಡೆ ಬೆಂಬಲಕ್ಕೆ ಆಗಮಿಸಿದರು. ಅಂತೆಯೇ ಸಂಯುಕ್ತಾ ಸಹ ಬಹು ಧೈರ್ಯದಿಂದ ಆ ಘಟನೆಯನ್ನು ಎದುರಿಸಿದ್ದರು. ಘಟನೆ ನಡೆದ ಸ್ಥಳದಿಂದ ಲೈವ್ ಮಾಡಿ ತಮ್ಮ ವಾದ ಮಂಡಿಸಿದ್ದರು. ಘಟನೆ ಬಳಿಕವೂ ತಮ್ಮ ಇಷ್ಟದ ಉಡುಗೆಯನ್ನು ತೊಡುವುದನ್ನು ಮುಂದುವರೆಸಿದರು ಸಂಯುಕ್ತಾ ಹೆಗ್ಡೆ.


Click it and Unblock the Notifications











