ತೆಲುಗಿನಲ್ಲಿ 'ಕಿರಿಕ್' ಮಾಡಲು ಹೊರಟ ಸಂಯುಕ್ತ ಹೆಗಡೆ

By Suneel

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರ 150 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಇತ್ತೀಚೆಗಷ್ಟೆ ಚಿತ್ರತಂಡ ಆಚರಿಸಿದೆ. ಈಗ ಈ ಚಿತ್ರದ ತೆಲುಗು ರಿಮೇಕ್ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು, ಈ ಬಗ್ಗೆ ಹೊಸ ಸುದ್ದಿಯೊಂದು ಕೇಳಿಬಂದಿದೆ.

'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕ ನಟನಾಗಿ ಅಭಿನಯಿಸಲಿದ್ದು, ರಾಜು ಸುಂದರಂ ಎಂಬುವವರು ಎಕೆ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಂತೋಷದ ವಿಷಯ ಏನಂದ್ರೆ ಈ ಚಿತ್ರದ ಆರ್ಯ ಪಾತ್ರಕ್ಕೆ 'ಕಿರಿಕ್ ಪಾರ್ಟಿ'ಯಲ್ಲಿ ಆರ್ಯ ಪಾತ್ರಧಾರಿಯಾಗಿ ನಟಿಸಿದ್ದ ಸಂಯುಕ್ತ ಹೆಗಡೆ ರವರನ್ನೇ ಚಿತ್ರತಂಡ ಆಯ್ಕೆ ಮಾಡಿದ್ದು, ಅವರನ್ನು ಅಪ್ರೋಚ್ ಮಾಡುತ್ತಿದೆಯಂತೆ.

Samyuktha Hegde to make her Tollywood debut in 'Kirik Party' remake film?

ಈಗಾಗಲೇ 'ಕಿರಿಕ್ ಪಾರ್ಟಿ' ಚಿತ್ರದ ತೆಲುಗು ರಿಮೇಕ್ ಚಿತ್ರತಂಡ ಸಂಯುಕ್ತ ಹೆಗಡೆ ಜೊತೆ ಒಮ್ಮೆ ಮಾತನಾಡಿದ್ದು, ಸಂಭಾವನೆ ಮತ್ತು ದಿನಾಂಕ ಎರಡರ ಬಗ್ಗೆ ಖಚಿತಪಡಿಸಿದೆಯಂತೆ. ಈ ಬಗ್ಗೆ ಸಂಯುಕ್ತ ಹೆಗಡೆ ಅಂತಿಮ ಅಭಿಪ್ರಾಯ ತಿಳಿಸಿದಲ್ಲಿ ಚಿತ್ರ ಸೆಟ್ಟೇರಲಿದೆಯಂತೆ. ಸಂಯುಕ್ತ ಹೆಗಡೆ ಒಂದು ವೇಳೆ ಈ ಚಿತ್ರದಲ್ಲಿ ನಟಿಸಿದರೆ ಇದು ಅವರ ತೆಲುಗಿನ ಮೊದಲ ಸಿನಿಮಾ ಆಗಲಿದೆ.

ಸದ್ಯದಲ್ಲಿ ಸಂಯುಕ್ತ ಹೆಗಡೆ ಕನ್ನಡದ 'ಕಾಲೇಜ್ ಕುಮಾರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರಕ್ಕೆ ಸಂತೋಷ್ ಎಂಬುವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ನಡುವೆ ಶ್ರೀನಾಗ್ ನಿರ್ದೇಶನದ ಇನ್ನೊಂದು ಕನ್ನಡ ಚಿತ್ರಕ್ಕೆ ಅಭಿನಯಿಸಲು ಓಕೆ ಎಂದಿದ್ದಾರೆ ಎಂಬುದು ತಿಳಿದಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

More from Filmibeat

English summary
The Telugu remake of Kirik Party, starring Nikhil Siddhartha, is all set to roll out soon. The film made under AK Entertainment will have choreographer-turned-director Raju Sundaram helming the project. Source said this team behind the Telugu remake has approached the actress Samyuktha Hegde to reprise the role of Arya, an electrical engineer, in their movie too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X