For Quick Alerts
  ALLOW NOTIFICATIONS  
  For Daily Alerts

  ಟ್ರಾಫಿಕ್ ಶುಲ್ಕ ಹೆಚ್ಚಳ ವಿರೋಧಿಸಿ ಸಂಯುಕ್ತಾ ಹೆಗ್ಡೆ ಟ್ವೀಟ್

  |

  ಕೇಂದ್ರ ಸರ್ಕಾರ ಹೊಸದಾಗಿ ಜಾರಿ ತಂದಿದ್ದ ಮೋಟಾರು ಕಾಯ್ದೆಗೆ ಹಲವು ರಾಜ್ಯಗಳಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಟಾಫ್ರಿಕ್ ಶುಲ್ಕ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಇದು ಹೊರೆಯಾಗಲಿದೆ ಎಂಬ ವಾದವಿದೆ. ಕೆಲವು ರಾಜ್ಯಗಳಲ್ಲಿ ಟ್ರಾಫಿಕ್ ಶುಲ್ಕದಲ್ಲಿ ಮತ್ತೆ ಇಳಿಕೆ ಮಾಡಲಾಗಿದೆ.

  ಈಗ ಸ್ಯಾಂಡಲ್ ವುಡ್ ನಟಿ ಸಂಯುಕ್ತಾ ಹೆಗ್ಡೆ ಟಾಫ್ರಿಕ್ ನಿಯಮದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಟ್ಯಾಗ್ ಮಾಡಿರುವ ಕಿರಿಕ್ ಹುಡುಗಿ ''ಮೊದಲು ಪೊಲೀಸರಲ್ಲಿ ಬದಲಾವಣೆ ತನ್ನಿ'' ಎಂದು ಸಲಹೆ ನೀಡಿದ್ದಾರೆ.

  ಟ್ರಾಫಿಕ್ ಶುಲ್ಕ ಹೆಚ್ಚಳ ಮಾಡಿದ್ದು ಕೇಂದ್ರ ಸರ್ಕಾರ, ಶಾಪ ಹಾಕಿದ್ದು ಈ ಚಿತ್ರಕ್ಕೆ.!ಟ್ರಾಫಿಕ್ ಶುಲ್ಕ ಹೆಚ್ಚಳ ಮಾಡಿದ್ದು ಕೇಂದ್ರ ಸರ್ಕಾರ, ಶಾಪ ಹಾಕಿದ್ದು ಈ ಚಿತ್ರಕ್ಕೆ.!

  ಹಾಗಾದ್ರೆ, ಹೊಸ ಟ್ರಾಫಿಕ್ ನಿಯಮದ ಬಗ್ಗೆ ನಟಿ ಸಂಯುಕ್ತಾ ಹೆಗ್ಡೆ ಮಾಡಿರುವ ಟ್ವೀಟ್ ನಲ್ಲಿ ಏನಿದೆ? ಅದಕ್ಕೆ ನೆಟ್ಟಿಗರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ? ಮುಂದೆ ಓದಿ....

  ಸಂಯುಕ್ತಾ ಹೆಗ್ಡೆ ಟ್ವೀಟ್ ನಲ್ಲಿ ಏನಿದೆ?

  ಸಂಯುಕ್ತಾ ಹೆಗ್ಡೆ ಟ್ವೀಟ್ ನಲ್ಲಿ ಏನಿದೆ?

  ''ಮೋದಿ ಅವರೇ, ಟ್ರಾಫಿಕ್ ಶುಲ್ಕ ಈಗ ಹೆಚ್ಚಾಗಿದೆ. ಆದರೆ ಪೊಲೀಸರು ಪಡೆದುಕೊಳ್ಳುವ ಲಂಚದಲ್ಲಿ ಬದಲಾವಣೆ ಆಗಿದೆ. 100 ರಿಂದ 500 ತಲುಪಿದೆ. ಶುಲ್ಕ ಪಾವತಿಸಲು ಜನರಿಗೆ ಆಯ್ಕೆ ಕೊಟ್ಟಾಗ ಸಹಜವಾಗಿ ಕಡಿಮೆ ಬೆಲೆಯನ್ನ ಆರಿಸಿಕೊಳ್ಳುತ್ತಾರೆ. ಇದು ನಿಜಕ್ಕೂ ಬೇಸರ ತರಿಸಿದೆ. ನಿಮ್ಮ ಕಾರ್ಮಿಕರು ನಿಯಮವನ್ನ ಪಾಲಿಸುತ್ತಿಲ್ಲ'' ಎಂದು ಸಂಯುಕ್ತಾ ಟ್ವೀಟ್ ಮಾಡಿದ್ದಾರೆ.

  ನಿಜವಾದ ಫೈನ್ ಕಟ್ಟಿದ್ರೆ ಅದರ ಬೆಲೆ ತಿಳಿಯುತ್ತೆ

  ನಿಜವಾದ ಫೈನ್ ಕಟ್ಟಿದ್ರೆ ಅದರ ಬೆಲೆ ತಿಳಿಯುತ್ತೆ

  ''ನಿಜವಾದ ಶುಲ್ಕ ಪಾವತಿಸಿದಾಗಲೇ ಜನರಿಗೆ ಅದರ ಮೌಲ್ಯ ಏನು ಎಂಬುದು ಗೊತ್ತಾಗುವುದು. ಆಗಲೇ ಟ್ರಾಫಿಕ್ ಶುಲ್ಕ ಎಷ್ಟು ದುಬಾರಿಯಾಗಿದೆ ಎಂಬ ಅರಿವು ಮೂಡುತ್ತೆ. ಅದರ ಬದಲು ಟ್ರಾಫಿಕ್ ನಿಯಮ ಪಾವತಿಸಲು ಮುಂದಾಗುತ್ತಾರೆ. ನಾವು ಯಾವಾಗಲೂ ಬೇರೆ ದೇಶದ ನಿಯಮಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತೇವೆ. ಬೇರೆ ದೇಶದಲ್ಲಿ ಫೈನ್ ಹೆಚ್ಚಿರುತ್ತೆ. ಅದೇ ರೀತಿ ಅವರ ಪೊಲೀಸರು ಲಂಚ ಪಡೆದುಕೊಳ್ಳಲ್ಲ'' ಎಂದಿದ್ದಾರೆ.

  ಸೋನು ಗೌಡ ವಿರೋಧಿಸಿದ್ದರು

  ಸೋನು ಗೌಡ ವಿರೋಧಿಸಿದ್ದರು

  ಟ್ರಾಫಿಕ್ ಶುಲ್ಕ ಹೆಚ್ಚಳದ ಬಗ್ಗೆ ಈ ಹಿಂದೆ ನಟಿ ಸೋನು ಗೌರ ಖಂಡಿಸಿದ್ದರು. ''ಹೆಚ್ಚು ಶುಲ್ಕ ಹಾಕುವ ಮೊದಲು ರಸ್ತೆಗಳನ್ನ ಸರಿ ಮಾಡಿ ಮುಖ್ಯಮಂತ್ರಿಗಳೇ...ಇದು ಜನರು ಕಷ್ಟಪಟ್ಟು ದುಡಿದ ದುಡ್ಡ. ಅದನ್ನ ಹಾಳುಮಾಡಬೇಡಿ'' ಎಂದು ಟೀಕಿಸಿದ್ದರು.

  ಟ್ರಾಫಿಕ್ ನಿಯಮದ ವಿರುದ್ಧ ಸಿಎಂಗೆ ಸೋನು ಗೌಡ ಸವಾಲ್ಟ್ರಾಫಿಕ್ ನಿಯಮದ ವಿರುದ್ಧ ಸಿಎಂಗೆ ಸೋನು ಗೌಡ ಸವಾಲ್

  ತಮಿಳು ಚಿತ್ರಗಳಲ್ಲಿ ಸಂಯುಕ್ತಾ ಬ್ಯುಸಿ

  ತಮಿಳು ಚಿತ್ರಗಳಲ್ಲಿ ಸಂಯುಕ್ತಾ ಬ್ಯುಸಿ

  ಸಂಯುಕ್ತಾ ಹೆಗಡೆ ನಟನೆ ತಮಿಳು ಸಿನಿಮಾ 'ಕೋಮಲಿ' ಬಿಡುಗಡೆಯಾಗಿತ್ತು. ಈಗ ಪಪ್ಪಿ ಮತ್ತು ಥೇಲ್ ಎಂಬ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎಂಟಿವಿ ರೋಡಿಸ್ 14 ರಲ್ಲಿ, ಬಿಗ್ ಬಾಸ್ ಕನ್ನಡ 5ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

  English summary
  Kannada actress Samyuktha Hegde has taken her twitter account and expressed her opinion about Traffic Rules.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X