ಕಾಲಿವುಡ್ ಬಳಿಕ ಈಗ ಟಾಲಿವುಡ್ ಗೆ ಕಾಲಿಟ್ಟ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ
'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ತಮ್ಮ ಕಿರಿಕ್ ವಿಷಯಗಳಿಗೆ ಸಖತ್ ಸದ್ದು ಮಾಡುತ್ತಿದ್ದರು. ಆದರೆ ಈಗ ಸಂಯುಕ್ತ ಕೈನಲ್ಲಿ ಇರುವ ಸಿನಿಮಾಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಇತ್ತೀಚಿಗಷ್ಟೆ ಕಾಲಿವುಡ್ ನಲ್ಲಿ ಪ್ರಭು ದೇವ ಜೊತೆ ಸಂಯುಕ್ತ ಸಿನಿಮಾ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಇತ್ತು. ಇದರ ಹಿಂದೆಯೇ ಈಗ ಟಾಲಿವುಡ್ ನಲ್ಲಿಯೂ ಸಂಯುಕ್ತ ನಟಿಸಲಿದ್ದಾರೆ. ವಿಶೇಷ ಅಂದರೆ ತೆಲುಗಿನಲ್ಲಿಯೂ ಸಂಯುಕ್ತ 'ಕಿರಿಕ್ ಪಾರ್ಟಿ' ಚಿತ್ರದಲ್ಲಿಯೇ ನಟಿಸುತ್ತಿದ್ದಾರೆ.

ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ತೆಲುಗು ಭಾಷೆಗೆ ರಿಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿಯೂ ಸಂಯುಕ್ತ ನಟಿಸುತ್ತಿದ್ದಾರೆ. ಆರ್ಯ ಪಾತ್ರವನ್ನು ಅಮೋಘವಾಗಿ ನಿರ್ವಹಿಸಿದ್ದ ಸಂಯುಕ್ತ ಮತ್ತೆ ಅದೇ ಪಾತ್ರದಲ್ಲಿ ಮಿಂಚುವುದಕ್ಕೆ ಸಜ್ಜಾಗಿದ್ದಾರೆ.
ಅಂದಹಾಗೆ, ತೆಲುಗು ನಟ ನಿಖಿಲ್ ಈ ಚಿತ್ರದಲ್ಲಿ ನಾಯಕನಾಗಿದ್ದಾರೆ. ಸೆಪ್ಟೆಂಬರ್ 10 ರಿಂದ ಈ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಹೈದರಾಬಾದ್ ನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ.
More from Filmibeat
English summary
Kannada Actress Samyuktha Hegde will play a lead role in 'Kirik Party' telugu remake movie.


Click it and Unblock the Notifications











