ಗೆಳತಿಯ ತುಟಿಗೆ ತುಟಿ ತಾಗಿಸಿದ ಕನ್ನಡ ನಟಿ; ಕಾಮೆಂಟ್ಸ್ ಮಾತ್ರ ಓದ್ಲೇಬೇಡಿ
ನಟಿ ಸಂಯುಕ್ತಾ ಹೆಗ್ಡೆ ಪದೇ ಪದೇ ಟ್ರೋಲ್ ಆಗುತ್ತಿರುತ್ತಾರೆ. ಆಕೆ ಹಾಕುವ ಪೋಸ್ಟ್‌ಗಳ ಬಗ್ಗೆ ಕೂಡ ನೆಟ್ಟಿಗರು ಏನೇನೊ ಕಾಮೆಂಟ್ ಮಾಡುತ್ತಾರೆ. ಇದೀಗ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಫೋಟೊ ವೈರಲ್ ಆಗುತ್ತಿದೆ.
ಗೆಳತಿಯ ತುಟಿಗೆ ತುಟಿ ಒತ್ತಿರುವಂತಹ ಫೋಟೊವನ್ನು ಸಂಯುಕ್ತಾ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್ ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ವ್ಯಂಗ್ಯವಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಸಂಯುಕ್ತಾ ಇಂತಹ ಕಾಮೆಂಟ್ಸ್‌ಗೆ ತಲೆ ಕೆಡಿಸಿಕೊಳ್ಳುವವರಲ್ಲ. ಈ ಹಿಂದೆ ಕೂಡ ಇದೇ ರೀತಿ ಆಕೆಯನ್ನು ಟ್ರೋಲ್ ಮಾಡುವ ಪ್ರಯತ್ನ ಮಾಡಿದ್ದರು. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ನಾನು ಇರುವುದೇ ಹೀಗೆ ಎಂದು ಆಕೆ ಸುಮ್ಮನಿದ್ದಾರೆ.

"ನನ್ನ ಆತ್ಮೀಯ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಬಗ್ಗೆ ಎಲ್ಲಾ ತಿಳಿದಿದ್ದರೂ ನನ್ನನ್ನು ಪ್ರೀತಿಸಿದವಳು. ನೀನೇ ನನಗೆ ಸಂಪೂರ್ಣ ಪ್ರಪಂಚ. ಶಾಲೆ ಮತ್ತು ಕಾಲೇಜಿನಲ್ಲಿ ನೃತ್ಯ ಮಾಡುವುದರಿಂದ ಹಿಡಿದು ನಿನ್ನನ್ನು ವಧುವಾಗಿ ನೋಡುವರೆಗೆ, ನಿರಂತರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನೀನು ನನ್ನ ಜೊತೆಗಿದ್ದೀಯ. ನಿನ್ನಂತ ಸ್ನೇಹಿತೆಯ್ನು ಪಡೆಯಲು ನಾನು ಅದೃಷ್ಟಶಾಲಿ. ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ" ಎಂದು ಸಂಯುಕ್ತಾ ಪೋಸ್ಟ್ ಮಾಡಿದ್ದಾರೆ.
ಇನ್ನು ತಮ್ಮ ಪೋಸ್ಟ್‌ಗೆ "ನೀನು ಚಡ್ಡಿ ದೋಸ್ತಿ ಕಣೋ ಕುಚಿಕು ಜೀವ ಕಿನ್ನ ಜಾಸ್ತಿ ಕಣೋ ಕುಚಿಕು" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ನೆಟ್ಟಿಗರು ಮನಬಂದಂತೆ ಕಾಮೆಂಟ್ ಮಾಡುತ್ತಿದ್ದಾರೆ. "ಚಡ್ಡಿ ದೋಸ್ತಿಯಾಗಲಿ ಅಥವಾ ಚಡ್ಡಿಯಿಲ್ಲದ ದೋಸ್ತ್ ಆಗಲಿ, ತುಟಿಗೆ ತುಟಿ ತಾಗಿಸುವುದು ಸಮಂಜಸವಲ್ಲ ಗೆಳತಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿರುವುದು ವೈರಲ್ ಆಗುತ್ತಿದೆ.
'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಸಂಯುಕ್ತಾ ಹೆಗ್ಡೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ಕಾಲೇಜ್ ಕುಮಾರ' ಸೇರಿ ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳಿನಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಆಕೆ ಒಂದು ತೆಲುಗು ಚಿತ್ರದಲ್ಲಿ ಕೂಡ ಮಿಂಚಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಬ್ರೇಕ್ ಮಾತ್ರ ಸಿಗಲಿಲ್ಲ. ಇನ್ನು ಸೋಶಿಯಲ್ ಮೀಡಿಯಾ ಟ್ರೋಲ್‌ಗಳಿಂದ ಪದೇ ಪದೆ ಸುದ್ದಿ ಆಗುತ್ತಾರೆ.
ಬೆಂಗಳೂರಿನಲ್ಲೇ ಓದಿ ಬೆಳೆದ ನಟಿ ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ್ಗೆ ಸ್ನೇಹಿತರ ಜೊತೆ ದೇಶ ವಿದೇಶದ ಪ್ರವಾಸ ಕೈಗೊಳ್ಳುತ್ತಾರೆ. ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯ ಕೆಲ ರಿಯಾಲಿಟಿ ಶೋಗಳಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್ ಕನ್ನಡ, ಎಂಟಿವಿ ರೋಡಿಸ್ ಹಾಗೂ ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಶೋಗಳಲ್ಲಿ ಸ್ಪರ್ಧಿಯಾಗಿದ್ದರು.


Click it and Unblock the Notifications











