»   » ಹೊಸ ಅತಿಥಿಗಳನ್ನ ಮನೆಗೆ ಕರೆತಂದ ಸಂಯುಕ್ತ ಹೊರನಾಡು

ಹೊಸ ಅತಿಥಿಗಳನ್ನ ಮನೆಗೆ ಕರೆತಂದ ಸಂಯುಕ್ತ ಹೊರನಾಡು

Posted By:
Subscribe to Filmibeat Kannada
ಹೊಸ ಅತಿಥಿಗಳನ್ನ ಮನೆಗೆ ಕರೆತಂದ ಸಂಯುಕ್ತ ಹೊರನಾಡು | Filmibeat Kannada

ಸಿನಿಮಾ ನಟ ನಟಿಯರಿಗೆ ಪ್ರಾಣಿಗಳ ಮೇಲೆ ಪ್ರೀತಿ ಕೊಂಚ ಹೆಚ್ಚಾಗಿಯೇ ಇರುತ್ತೆ. ವರ್ಷ ಪೂರ್ತಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರೂ ಕೂಡ ಅವರ ಜೊತೆಯಲ್ಲಿ ಕಾಲ ಕಳಿಯಲು ಮುದ್ದಾನ ನಾಯಿಯನ್ನ ಬಹುತೇಕ ಸ್ಟಾರ್ ಗಳು ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ. ಅದರಲ್ಲಿಯೂ ನಾಯಕಿಯರು ಪ್ರಾಣಿಗಳನ್ನ ಪ್ರೀತಿ ಮಾಡುವಲ್ಲಿ ಒಂದು ಹೆಜ್ಜೆ ಮುಂದೆ.

ಮೊದಲೆಲ್ಲಾ ಚಿತ್ರೀಕರಣಕ್ಕೆ ಹೋಗಾದ ತಮ್ಮ ಮುದ್ದು ಮರಿಗಳನ್ನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಆದರೆ ಕಾಲ ಬದಲಾದಂತೆ ತಮ್ಮ ಚಿತ್ರೀಕರಣದ ಸ್ಥಳಗಳಿಗೂ ಪೆಟ್ಸ್ ಗಳನ್ನ ಕರೆದೊಯ್ಯುತ್ತಾರೆ. ಚಿತ್ರೀಕರಣದ ಸಮಯದಲ್ಲಿ ತಮ್ಮ ಜೊತೆ ಜೊತೆಗೆ ಕ್ಯಾರವ್ಯಾನ್ ನಲ್ಲಿ ಅವುಗಳು ಕಾಲಕಳಿಯುತ್ತವೆ.

ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ದರ್ಬಾರ್ ಶುರು

ನಟಿ ಸಂಯುಕ್ತ ಹೊರನಾಡು ಪ್ರಾಣಿಪ್ರೇಮಿ ಎನ್ನುವುದು ಗೊತ್ತಿರುವ ವಿಚಾರ. ಈಗಾಗಲೇ ಸಾಕಷ್ಟು ಪ್ರಾಣಿಗಳನ್ನ ಸಲಹಿರುವ ಸಂಯುಕ್ತ ತಮ್ಮ ಮನೆಗೆ ಹೊಸ ಅತಿಥಿಗಳನ್ನು ಕರೆತಂದಿದ್ದಾರೆ. ಹಾಗಾದರೆ ಸಂಯುಕ್ತ ಮನೆಗೆ ಬಂದಿರುವ ಆ ಗೆಸ್ಟ್ ಗಳು ಯಾರು? ಹೇಗಿದ್ದಾರೆ ಅವರುಗಳು? ಅವರುಗಳನ್ನೇ ಸಂಯುಕ್ತ ಎಲ್ಲಿಂದ ಕರೆತಂದರು ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

ಹೊಸ ಅತಿಥಿಗಳನ್ನ ಕರೆತಂದ ಸಂಯುಕ್ತ

ನಟಿ ಸಂಯುಕ್ತ ಹೊರನಾಡು ಆಗಾಗ ವಿಶೇಷ ರೀತಿಯ ಕೆಲಸಗಳನ್ನ ಮಾಡುವ ಮೂಲಕ ಎಲ್ಲಾ ಕಲಾವಿದರ ಮಧ್ಯೆ ವಿಭಿನ್ನ ಎನ್ನಿಸುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಸಂಯುಕ್ತ ಪ್ರಾಣಿ ಪ್ರಿಯೆ. ಈಗಾಗಲೇ ಶ್ವಾನಗಳನ್ನ ಸಾಕಿಕೊಂಡಿರುವ ಸಂಯುಕ್ತ ತಮ್ಮ ಮನೆಗೆ ಎರಡು ಬೆಕ್ಕುಗಳನ್ನ ಕರೆತಂದಿದ್ದಾರೆ.

ಸಂಯುಕ್ತ ಜೊತೆ ಇವಾ-ನ್ಯೂಟನ್

ಸಂಯುಕ್ತ ತಮ್ಮ ಮನೆಗೆ ಮೂರು ವರ್ಷದ ಇವಾ ಹಾಗೂ ಎರಡು ವರ್ಷದ ನ್ಯೂಟನ್ ಎಂಬ ಹೆಸರಿನ ಬೆಕ್ಕುಗಳನ್ನ ಕರೆತಂದಿದ್ದಾರೆ. ಪರ್ಶಿಯನ್ ತಳಿಯ ಬೆಕ್ಕುಗಳು ಇದಾಗಿದ್ದು, ಕಪ್ಪು ಮತ್ತು ಕಂದು ಬಣ್ಣದ ಮಾರ್ಜಾಲಗಳಿಗೆ ನಟಿ ಸಂಯುಕ್ತ ಮನಸೋತಿದ್ದಾರೆ.

ಮಾರ್ಜಾಲದ ನೋಟಕ್ಕೆ ಫಿದಾ

ಪರ್ಶಿಯನ್ ಬೆಕ್ಕುಗಳು ದತ್ತು ಪಡೆಯಲು ಅವಕಾಶ ಇದೆ ಎಂದು ಟ್ವಿಟ್ಟರ್ ನಲ್ಲಿ ಪತ್ರಕರ್ತೆ ಫೋಟೊ ಸಮೇತ ಅಪ್ಲೋಡ್ ಮಾಡಿದ್ದರು ಅದನ್ನ ನೋಡಿದ ತಕ್ಷಣವೇ ಸಂಯುಕ್ತ ಮಾರ್ಜಾಲವನ್ನ ಮನೆಗೆ ಕರೆತರಲು ಮನಸ್ಸು ಮಾಡಿದ್ದರು.

ಪ್ರಾಣಿಪ್ರಿಯೆ ಸಂಯುಕ್ತ

ಸಂಯುಕ್ತ ಈಗಾಗಲೇ ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನ ಸಾಕಿಕೊಂಡಿದ್ದಾರೆ. ಅವರ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಅವುಗಳ ಹುಟ್ಟುಹಬ್ಬವನ್ನ ಆಚರಣೆ ಮಾಡಿರುವ ಹಾಗೂ ಪ್ರಾಣಿಗಳ ಬಗೆಗಿನ ಜಾಗೃತಿ ಕಾರ್ಯಕ್ರಮಕ್ಕಾಗಿ ತೆಗೆಸಿಕೊಂಡಿರುವ ಪೋಟೋಗಳನ್ನೂ ನೋಡಬಹುದಾಗಿದೆ.

ನಟಿಯರ ಜೊತೆ ಶ್ವಾನಗಳು

ಸಂಯುಕ್ತ ಮಾತ್ರವಲ್ಲದೆ ಹರಿಪ್ರಿಯಾ, ಪ್ರಿಯಾಮಣಿ, ಮಾನ್ವಿತಾ ಹರೀಶ್ ಹೀಗೆ ಸಾಕಷ್ಟು ಜನರ ಬಳಿ ಶ್ವಾನಗಳಿಗೆ. ಕೆಲವರು ಚಿತ್ರೀಕರಣದ ಸ್ಥಳಕ್ಕೂ ಅವರ ಮುದ್ದಿನ ನಾಯಿಗಳನ್ನ ಕರದೊಯ್ಯುತ್ತಾರೆ. ರಶ್ಮಿಕಾ ಅವರಿಗೆ ಪ್ರೇಮಿಗಳ ದಿನದಂದು ಬೆಕ್ಕಿನ ಮರಿಯನ್ನ ರಕ್ಷಿತ್ ಉಡುಗೊರೆಯಾಗಿ ನೀಡಿದ್ದರು.

English summary
Kannada actress Samyuktha Horanadu adopted two Persian cats, already Samyukta has two dogs in her home, samyukta is acted as a heroine in Jigarthanda, Coffee thota and Oggarane .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X