ಬೀದಿ ನಾಯಿಗಳಿಗೆ ತುತ್ತುಣಿಸಲು ಬೀದಿಗಿಳಿದ ಸಂಯುಕ್ತ ಹೊರನಾಡು
ಕೊರೊನಾ ದಿಂದಾಗಿ ಮನುಕುಲ ಸಂಕಷ್ಟಕ್ಕೆ ಸಿಲುಕಿದೆ. ದಿನಗೂಲಿ ನೌಕರರು ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
Recommended Video
ಕೊರೊನಾ ದಿಂದ ಮನುಷ್ಯರಷ್ಟೆ ಅಲ್ಲ ಪ್ರಾಣಿಗಳೂ ಸಹ ತೊಂದರೆಗೆ ಸಿಲುಕಿವೆ. ಬೀದಿ ನಾಯಿಗಳು ಆಹಾರವಿಲ್ಲದೆ ಪರಿತಪಿಸುತ್ತಿವೆ.
ಬೀದಿ ನಾಯಿಗಳ ಊಟಕ್ಕೆ ಮೂಲವಾಗಿದ್ದ ಹೋಟೆಲ್‌ಗಳು, ಮಾಂಸದಂಗಡಿಗಳು, ಸಂಘ-ಸಂಸ್ಥೆಗಳು ಎಲ್ಲವೂ ಬಂದ್ ಆಗಿವೆ. ಹೊಟ್ಟೆಗೆ ಕೂಳು ಇಲ್ಲದೆ ನಾಯಿಗಳು ಪರದಾಡುವಂತಾಗಿದೆ.
ಆದರೆ ಕೆಲವು ಪ್ರಾಣಿ ಪ್ರಿಯರು ಬೀದಿ ನಾಯಿಗಳಿಗೆ ಆಹಾರ ವ್ಯವಸ್ಥೆ ಮಾಡಲು ಕೊರೊನಾ ಭೀತಿಯ ನಡುವೆಯೂ ರಸ್ತೆಗೆ ಇಳಿದಿದ್ದಾರೆ. ಅದರಲ್ಲೊಬ್ಬರು ಕನ್ನಡದ ನಟಿ ಸಂಯುಕ್ತಾ ಹೊರನಾಡು.
ಪ್ರಾಣಿ ಪ್ರಿಯೆ ಸಂಯುಕ್ತಾ ಹೊರನಾಡು ಅವರು, ತಮ್ಮದೇ ಒಂದು ತಂಡ ಕಟ್ಟಿಕೊಂಡು ಬೆಂಗಳೂರಿನ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಸಮಾನ ಮನಸ್ಕ ತಂಡ ರಚಿಸಿಕೊಂಡಿರುವ ಸಂಯುಕ್ತ
60 ಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕರ ತಂಡ ರಚಿಸಿಕೊಂಡಿರುವ ಸಂಯುಕ್ತಾ ಹೆಗಡೆ 1800 ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಕಾರ್ಯ ಮಾಡಿದ್ದಾರೆ.

ಗುಣಮಟ್ಟದ ಆಹಾರ ನೀಡುತ್ತಿರುವ ತಂಡ
ನಾಯಿಗಳಿಗೆಂದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಪೌಷ್ಟಿಕಾಂಶಯುಕ್ತ ಆಹಾರವನ್ನೇ ಬೀದಿ ನಾಯಿಗಳಿಗೆ ಸಂಯುಕ್ತ ಹೊರನಾಡು ಮತ್ತು ತಂಡ ಒದಗಿಸುತ್ತಿದ್ದಾರೆ. ಇದಕ್ಕಾಗಿ ಸಂಯುಕ್ತ ಹೊರನಾಡು ಸೇರಿ ಹಲವರು ಹಣ ಹೂಡಿದ್ದಾರೆ.

ಶ್ವಾನ ಪ್ರಿಯೆ ಸಂಯುಕ್ತ ಹೊರನಾಡು
ಸಂಯುಕ್ತ ಹೊರನಾಡು ಅವರು ಶ್ವಾನ ಪ್ರಿಯೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶ್ವಾನಸಗಳೊಂದಿಗೆ ತಮ್ಮ ಹಲವು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಹಲವು ಶ್ವಾನಗಳನ್ನು ಅವರು ಸಾಕಿದ್ದಾರೆ ಸಹ.

ಐಂದ್ರಿತಾ ರೇ ಸಹ ಆಹಾರ ನೀಡುತ್ತಿದ್ದಾರೆ
ಮತ್ತೊಬ್ಬ ಶ್ವಾನ ಪ್ರಿಯೆ ನಟಿ ಐಂದ್ರಿತಾ ರೇ ಸಹ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಶ್ವಾನಗಳಿಗೆ ಆಹಾರ ನೀಡುತ್ತಿದ್ದ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.


Click it and Unblock the Notifications











