»   » ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಸಪ್ಪೆಯಾಗಿ ಕಂಡ ಸನಾ

ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಸಪ್ಪೆಯಾಗಿ ಕಂಡ ಸನಾ

Posted By:
Subscribe to Filmibeat Kannada

ಸಲ್ಮಾನ್ ಖಾನ್ ಆಪ್ತ ನಟಿ, ಬಾಲಿವುಡ್ ತಾರೆ, ರೂಪದರ್ಶಿ, ಡಾನ್ಸರ್ ಹಾಗೂ ಹಿಂದಿ ಬಿಗ್ ಬಾಸ್ ನ ಮೂರನೇ ಸ್ಥಾನ ವಿಜೇತೆ ಸನಾ ಖಾನ್ ಟೈಂ ಯಾಕೋ ಸರಿಯಾಗಿಲ್ಲ. ಕೂಲ್ ಸಖತ್ ಹಾಟ್ ಮಗ ಎಂಬ ಕನ್ನಡ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಭಿನಯಿಸಿದ್ದ ಈ ಬೆಡಗಿಗೆ ಸಕತ್ ಆಫರ್ ಸಿಕ್ಕಿತ್ತು. ಆದರೆ, ಸಲ್ಮಾನ್ ಖಾನ್ ಜೊತೆ ಮೆಂಟಲ್ ಅರ್ಧಕ್ಕೆ ನಿಂತಿದೆ. ಮಲೆಯಾಳಂ ಹಾಗೂ ತಮಿಳು ಎರಡರಲ್ಲೂ ತೆರೆ ಕಂಡ ಮಹತ್ವಾಕಾಂಕ್ಷಿಯ ಚಿತ್ರ ಫೇಲ್ ಆಗಿದೆ.

25 ವರ್ಷದ ಈ ಪ್ರತಿಭಾವಂತೆಗೆ ಬಿಗ್ ಬಾಸ್ 6 ರಿಯಾಲಿಟಿ ಶೋ ನಂತರ ಮಲೆಯಾಳಂ ಚಿತ್ರವೊಂದರಲ್ಲಿ ಆಫರ್ ಸಿಕ್ಕಿದೆ. ಸನಾ ಅಮ್ಮ ಕೂಡಾ ಮಲೆಯಾಳಿಯಾಗಿದ್ದು ಕಣ್ಣೂರು ಮೂಲದವರಾಗಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಸನಾಗೆ ಸಿಕ್ಕಿರುವುದು ಇತ್ತೀಚೆಗೆ ಡ್ರೀಲ್ ರೋಮ್ ಎಂದೇ ಪರಿಗಣಿಸಲ್ಪಟ್ಟಿರುವ ಸೆಕ್ಸ್ ಬಾಂಬ್ ಸ್ಕಿಲ್ ಸ್ಮಿತಾ ಪಾತ್ರ.

ಕನ್ನಡ ಚಿತ್ರರಂಗವಲ್ಲದೆ, ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಸನಾ, ಸಿಲಂಬಾಟ್ಟಂ ಚಿತ್ರದಲ್ಲಿ ಸಿಂಬು ಜೊತೆ ನಟಿಸಿ ITFA ಪ್ರಶಸ್ತಿ ಪಡೆದಿದ್ದಳು.ಆದರೆ, ಬಾಲಿವುಡ್ ಕರೆ ಬಂದಿದ್ದರಿಂದ ದಕ್ಷಿಣ ಭಾರತ ಚಿತ್ರರಂಗ ಮರೆತ ಸನಾ ಮತ್ತೆ ಸಿಲ್ಕ್ ಸ್ಮಿತಾ ಪಾತ್ರ ಸಿಕ್ಕಿದ ಖುಷಿಯಲ್ಲಿ ವಾಪಸ್ ಬಂದಿದ್ದಳು.

ತಮಿಳು-ಮಲೆಯಾಳಂನಲ್ಲಿ ಪ್ರದರ್ಶನವಾಗಿರುವ ಈ ಚಿತ್ರ ಸನಾಗೆ ಒಳ್ಳೆ ಮೈಲೇಜ್ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ, ನಿರೀಕ್ಷೆ ಟುಸ್ ಆಗಿದ್ದು, ಪ್ರೇಕ್ಷಕ, ಸನಾಳನ್ನು ಸಿಲ್ಕ್ ಪಾತ್ರದಲ್ಲಿ ಊಹಿಸಿಕೊಳ್ಳದೆ ಚಿತ್ರಕ್ಕೆ ಡಲ್ ಓಪನಿಂಗ್ ನೀಡಿದ್ದಾನೆ. ನಡಿಗಯಿನ್ ಡೈರಿ(ನಟಿಯ ಡೈರಿ) ಚಿತ್ರದ ಫ್ಲಾಪ್ ಸ್ಟೋರಿ, ಸನಾ ಖಾನ್ ದುರಾದೃಷ್ಟದ ಇನ್ನಷ್ಟು ವಿವರ ಇಲ್ಲಿದೆ.. ಓದಿ

ಸನಾ ಖಾನ್ ದುರಾದೃಷ್ಟ

ಸಿಲ್ಕ್ ಪಾತ್ರಕ್ಕೆ ವಿದ್ಯಾ ಬಾಲನ್ ಜೀವ ತುಂಬಿದ ನಂತರ ಸಾಲು ಸಾಲು ಸಿಲ್ಕ್ ಸ್ಮಿತಾ ಕುರಿತ ಚಿತ್ರಗಳು ಸೆಟ್ಟೇರಿದ್ದು ನಿಜ.

ಕನ್ನಡದಲ್ಲೂ ಸಿಲ್ಕ್ ಸ್ಮಿತಾ ಸಕತ್ ಹಾಟ್ ಎಂಬ ಹೆಸರಿನಲ್ಲಿ ಚಿತ್ರ ತೆರೆಗೆ ಬರಲಿದ್ದು, ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಮುಖ್ಯ ಪಾತ್ರದಲ್ಲಿದ್ದಾರೆ. ಆದರೆ, ಸನಾ ನಟಿಸುತ್ತಿರುವ ಮಲೆಯಾಳಂ ಚಿತ್ರ ಹಲವು ಬಗೆಯಿಂದ ಕುತೂಹಲ ಕೆರಳಿಸಿತ್ತು. ಸಿಲ್ಕ್ ಸ್ಮಿತಾ ಕುರಿತ ಚಿತ್ರದಲ್ಲಿ ಸನಾ ಮುಖ್ಯ ಪಾತ್ರಧಾರಿಯಾಗಿದ್ದಾರೆ

ಸನಾ ಖಾನ್ ದುರಾದೃಷ್ಟ

ಸನಾ ಖಾನ್ ಸಿಲ್ಕ್ ಸ್ಮಿತಾ ಪಾತ್ರಕ್ಕೆ ಹೋಲಿಕೆ ಮಾಡುವುದಿರಲಿ, ವಿದ್ಯಾ ಬಾಲನ್ ಅವರ ನಟನೆಗೂ ಸಮನಾಗಿ ಕಂಡು ಬಂದಿಲ್ಲ ಎಂದು ಓದುಗರು ಅಭಿಪ್ರಾಯಪಟ್ಟಿದ್ದಾರೆ. ಸನಾ ತನ್ನ ಮೈಮಾಟ ತೋರಿಸಿದ್ದು ಬಿಟ್ಟರೆ, ನಟಿಸಲು ಯತ್ನಿಸಿದ್ದಾರೆ ಎಂದು ವರದಿ ಬಂದಿದೆ.

ಸನಾ ಖಾನ್ ದುರಾದೃಷ್ಟ

ಹಿಂದಿಯಲ್ಲಿ ಸ್ಕಿಲ್ ಕುರಿತ ಚಿತ್ರ ಹಿಟ್ ಆಗಿದ್ದರಿಂದ ಈ ಚಿತ್ರದ ಮೇಲೆ ತುಂಬಾ ನಿರೀಕ್ಷೆಗಳಿತ್ತು. ಅದರಲ್ಲೂ ಮಲೆಯಾಳಂ ನಿರ್ದೇಶಕರಿಗೆ ಸಿಲ್ಕ್ ಸ್ಮಿತಾ ಕುರಿತ ಅನೇಕ ಗುಟ್ಟಿನ ಸಂಗತಿಗಳು ಗೊತ್ತಿತ್ತು ಆದರೆ, ಕಥೆ ನಿರೂಪಣೆ ಕೂಡಾ ಇಷ್ಟವಾಗಿಲ್ಲ ಎಂದು ಮತ್ತೊಬ್ಬ ವೀಕ್ಷಕ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಸನಾ ಖಾನ್ ದುರಾದೃಷ್ಟ

ಸಿಲ್ಕ್ ಸ್ಮಿತಾಳಿಗೆ ಮೊಟ್ಟ ಮೊದಲ ಬಾರಿಗೆ ಮಲೆಯಾಳಂ ಚಿತ್ರರಂಗದಲ್ಲಿ ಚಾನ್ಸ್ ಕೊಟ್ಟ ಚಿತ್ರಕಥೆಗಾರ ಅಂಟೋನಿ ಈಸ್ಟಮನ್ ಅವರು ಈ ಹೊಸ ಚಿತ್ರಕ್ಕೆ ಕಥೆ ಸಂಭಾಷಣೆ ಒದಗಿಸಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಸಿಲ್ಕ್ ಸ್ಮಿತಾಳ ಸಂಪೂರ್ಣ ಜೀವನ ಚರಿತ್ರೆ ಇದಾಗಲಿದೆ ಎನ್ನಲಾಗಿತ್ತು. ಸಿಲ್ಕ್ ಜೊತೆಗಿನ ಒಡನಾಟವನ್ನು ಅಂಟೋನಿ ಬಿಚ್ಚಿಡುತ್ತಾರೆ ಎಂಬ ನಿರೀಕ್ಷೆ ಸುಳ್ಳಾಗಿದೆ.

ಸನಾ ಖಾನ್ ದುರಾದೃಷ್ಟ

25 ವರ್ಷ ವಯಸ್ಸಿನ ಸನಾ ಐದು ಭಾಷೆಗಳಲ್ಲಿ 14ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾಳೆ. 50ಕ್ಕೂ ಅಧಿಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ

ಸನಾ ಖಾನ್ ದುರಾದೃಷ್ಟ

ಮಲೆಯಾಳಂ ಕ್ಲೈಮ್ಯಾಕ್ಸ್ ಎಂಬ ಹೆಸರಿನಲ್ಲಿ ತೆರೆಕಂಡ ಚಿತ್ರ ತಮಿಳಿನಲ್ಲಿ ನಡಿಗಿಯಿನ್ ಡೈರಿ ಅರ್ಥಾತ್ ನಟಿಯ ಡೈರಿ ಎಂಬ ಹೆಸರಿನಲ್ಲಿ ಡಬ್ ಆಗಿದೆ. ಕನ್ನಡದಲ್ಲಿ ಡಬ್ ಮಾಡಲು ಅವಕಾಶ ಇಲ್ಲದಿರುವುದರಿಂದ ತಮಿಳು, ಮಲೆಯಾಳಂ ಅಲ್ಲದೆ ತೆಲುಗು ಭಾಷೆಗೂ ಡಬ್ ಆಗುವ ಸಾಧ್ಯತೆಯಿದೆ

ಸನಾ ಖಾನ್ ದುರಾದೃಷ್ಟ

ಸಿಲ್ಕ್ ಸ್ಮಿತಾ ಜೀವನದ ಕೆಲವು ಹಸಿ ಬಿಸಿ ಸತ್ಯಗಳು, ಸ್ಕಿಲ್ ಸ್ಮಿತಾಳ ವೃತ್ತಿ ಜೀವನ ಹಾಗೂ ಜೀವನದ ಕೊನೆಗಾಲದ ಭಾಗದ ಮೇಲೆ 'ಕ್ಲೈಮ್ಯಾಕ್ಸ್' ಚಿತ್ರ ಹೆಚ್ಚಿನ ಬೆಳಕು ಚೆಲ್ಲಿದೆ. ಸಿಲ್ಕ್ ಸ್ಮಿತಾಳ ಕೊನೆಗಾಲದಲ್ಲಿ ಕೈ ಹಿಡಿದವರು, ಕೈ ಕೊಟ್ಟವರ ಕಥೆ ಇದರಲ್ಲಿದೆ.

ಆದರೆ, ಯಾವುದನ್ನೂ ಪ್ರೇಕ್ಷಕನ ಮನಸ್ಸಿಗೆ ನಾಟುವಂತೆ ಹೇಳುವಲ್ಲಿ ನಿರ್ದೇಶಕ ಅಂಟೋನಿ ವಿಫಲವಾಗಿದ್ದಾರೆ. ಸನಾ ಪಾತ್ರಕ್ಕೆ ತಕ್ಕ ನಟನೆ ಇದ್ದರೂ ಪರಕಾಯ ಪ್ರವೇಶ ಮಾಡಿಲ್ಲದಿರುವುದು ನೆಗಟಿವ್ ಅಂಶವಾಗಿದೆ.

ಸನಾ ಖಾನ್ ದುರಾದೃಷ್ಟ

ಕಿಡ್ನಾಪ್ ಕೇಸ್ ನಲ್ಲಿ ಕಂಗಾಲಾಗಿರುವ ಸನಾ ಖಾನ್ ಗೆ ಸಲ್ಮಾನ್ ಖಾನ್ ಬೆಂಬಲ ಸಿಕ್ಕಿದೆ. ಮೆಂಟಲ್ ಶೂಟಿಂಗ್ ಗೆ ತೊಂದರೆ ಏನಿಲ್ಲ ಎಂದು ಸಲ್ಮಾನ್ ಹೇಳಿದ್ದಾನೆ. ಬಾಲಿವುಡ್ ನಲ್ಲೇ ಬಹುತೇಕ ಕಾಲ ಕಳೆಯುವ ಸನಾಗೆ ಈ ಚಿತ್ರ ಗೆಲ್ಲುವುದು ಮುಖ್ಯವಾಗಿತ್ತು. ತಾನೊಬ್ಬ ನಟಿ ಎಂಬುದನ್ನು ನಿರೂಪಿಸಲು ಸಿಕ್ಕ ಒಳ್ಳೆ ಅವಕಾಶ ಹಾಳುಗೆಡವಿದ್ದಂತಾಗಿದೆ.

English summary
Bollywood actress Sana Khan taken up the Malayalam and Tamil version of Silk Smitha's biopic named Nadigayin Diary (Kollywood). But the saddest part of the story is that neither the film nor her performance won the hearts of the audience.
Please Wait while comments are loading...