For Quick Alerts
  ALLOW NOTIFICATIONS  
  For Daily Alerts

  8:20 ಹೆಲ್ತ್ ಬುಲೆಟಿನ್: ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ

  |

  ನಟ ಸಂಚಾರಿ ವಿಜಯ್ ಸ್ಥಿತಿ ಕುರಿತಂತೆ ಅಪೊಲೊ ಆಸ್ಪತ್ರೆಯು ರಾತ್ರಿ 8:20 ಕ್ಕೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ವಿಜಯ್‌ರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದ್ದಾರೆ.

  Sanchari Vijay ಬ್ರೈನ್ ಫೆಲ್ಯೂರ್ ಆಗಿದೆ ಡೆಡ್ ಆಗಿಲ್ಲ ಎಂದು ಡಾಕ್ಟರ್ ಸ್ಪಷ್ಟನೆ | Filmibeat Kannada

  ಮೆದುಳು ನಿಷ್ಕ್ರಿಯಗೊಂಡಿದೆಯೋ ಇಲ್ಲವೋ ಎಂದು ಗುರುತಿಸಲು ಮಾಡಲಾಗುವ ಅಪ್ನಿಯಾ ಪರೀಕ್ಷೆಯನ್ನು ರಾತ್ರಿ 7:50 ನಿಮಿಷಕ್ಕೆ ಮಾಡಿರುವುದಾಗಿ ವೈದ್ಯರು ಹೇಳಿದ್ದು ಯಾವುದೇ ಧನಾತ್ಮಕ ಅಂಶಗಳು ಪರೀಕ್ಷೆಯಲ್ಲಿ ಕಂಡು ಬಂದಿಲ್ಲವೆಂದು ಹೇಳಿದ್ದಾರೆ.

  ವಿಜಯ್‌ ನಮ್ಮ ಹಳ್ಳಿ ಹುಡ್ಗ, ಸರ್ಕಾರಿ ಗೌರವ ಸಿಗಬೇಕು: ವೈಎಸ್‌ವಿ ದತ್ತಾವಿಜಯ್‌ ನಮ್ಮ ಹಳ್ಳಿ ಹುಡ್ಗ, ಸರ್ಕಾರಿ ಗೌರವ ಸಿಗಬೇಕು: ವೈಎಸ್‌ವಿ ದತ್ತಾ

  ಮೆದುಳು ನಿಷ್ಕ್ರಿಯಗೊಂಡಿರವುದನ್ನು ವಿಜಯ್‌ ಕುಟುಂಬ ಸದಸ್ಯರಿಗೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಂದಿನ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

  'ಜೀವನ ಸಾರ್ಥಕತೆ' ತಂಡವು ಆಸ್ಪತ್ರೆ ತಲುಪಿದ್ದು, ಅಂಗಾಂಗಗಳನ್ನು ಸಂಗ್ರಹಿಸುವ ಕಾರ್ಯ ಪ್ರಾರಂಭ ಮಾಡಲಾಗುತ್ತದೆ. ನಂತರ ಅದನ್ನು ಅಪೊಲೋ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಅವಶ್ಯಕತೆ ಇದ್ದವರಿಗೆ ಬಳಸಲಾಗುತ್ತದೆ ಎಂದಿದ್ದಾರೆ ವೈದ್ಯರು.

  ಕಾನೂನಿನ ಪ್ರಕಾರ ಮೆದುಳು ನಿಷ್ಕ್ರಿಯನಾದ ವ್ಯಕ್ತಿಯನ್ನು ಮೃತ ಎಂದು ಪರಿಗಣಿಸಲಾಗುತ್ತದೆ.

  English summary
  Apollo hospital releases health bulletin of Sanchari Vijay on 8:20 pm and doctors declared Sanchari Vijay as brain dead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X