Don't Miss!
- Sports
IND vs NZ 3rd T20: ಶುಭ್ಮನ್ ಗಿಲ್ ಸ್ಫೋಟಕ ಶತಕ; ಕಿವೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಚಾರಿ ವಿಜಯ್ ಅಪಘಾತ ಪ್ರಕರಣ: ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ನವೀನ್ ಪೊಲೀಸರಿಗೆ ಹೇಳಿದ್ದೇನು?
ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯ್ ಗೆಳೆಯ ನವೀನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಪಘಾತ ವೇಳೆ ಬೈಕ್ ಓಡಿಸುತ್ತಿದ್ದ ನವೀನ್ ಆಸ್ಪತ್ರೆಯಿಂದ ಮನೆಗೆ ಮರಳುತ್ತಿದಂತೆ ಘಟನೆ ಬಗ್ಗೆ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಇಂಚಿಂಚು ಮಾಹಿತಿ ನೀಡಿರುವ ನವೀನ್, ಜೂನ್ 12ರ ರಾತ್ರಿ ಸ್ನೇಹಿತರ ಮನೆಯಲ್ಲಿ ಸಂಚಾರಿ ವಿಜಯ್ ಮತ್ತು ಟೀಂ ಸಭೆ ಸೇರಿದ್ದರು. ಕೊರೊನಾ ಕಿಟ್ ಮತ್ತು ಸಹಾಯ ಕುರಿತು ವಿಜಯ್ ಮತ್ತು ಸ್ನೇಹಿತರಿಂದ ಚರ್ಚೆ ಮಾಡಲಾಗುತ್ತಿತ್ತು. ಫುಡ್ ಕಿಟ್, ಮೆಡಿಸಿನ್ ಸೇರಿ ಕೈಲಾದ ಸಹಾಯ ಮಾಡಲು ಎಲ್ಲರೂ ನಿರ್ಧಾರಿಸಿದ್ದರು.
ಸಂಚಾರಿ
ವಿಜಯ್ಗೆ
ವಿಶೇಷ
ಗೌರವ
ನೀಡಿದ
ಅಮೆರಿಕಾ
ಚಿತ್ರಮಂದಿರ
ಚರ್ಚೆ ನಡೆಯುತ್ತಿದ್ದಂತೆ ನವೀನ್‌ಗೆ ಮನೆಯಿಂದ ಪತ್ನಿ ಫೋನ್‌ಕಾಲ್ ಮಾಡಿ ಮಾತ್ರೆ ತರಳಲು ಹೇಳಿದರು. ಬೈಕ್‌ನಲ್ಲಿ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗಿ ಮಾತ್ರೆ ತರಲು ನವೀನ್ ಹೊರಟರು. ಈ ವೇಳೆ ತಾನು ಬರುವುದಾಗಿ ಹೇಳಿ ವಿಜಯ್ ಬೈಕ್ ಏರಿದರು. ಇದೆಲ್ಲವೂ ಮನೆ ಹತ್ತಿರವೇ ಆದ್ದರಿಂದ ನವೀನ್ ಮತ್ತು ವಿಜಯ್ ಹೆಲ್ಮೆಟ್ ಧರಿಸಿಲ್ಲ.
ಮಾತ್ರೆಗಳನ್ನು ತಗೊಂಡು ವಾಪಸ್ ಬರಬೇಕಾದ್ರೆ ಬೈಕ್ ಅಪಘಾತವಾಗಿದೆ. ಸ್ಕಿಡ್ ಆಗಿ ಎಲೆಕ್ಟ್ರಿಕ್ ಪೋಲ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಸ್ಕಿಡ್ ಆಗಿದ್ದರಿಂದ ಬೈಕ್ ಬಿತ್ತು ಎಂದು ನವೀನ್ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಬಳಿಕ ಠಾಣಾ ಜಾಮೀನಿನ ಮೇಲೆ ಹೇಳಿಕೆ ಪಡೆದು ಜಯನಗರ ಟ್ರಾಫಿಕ್ ಪೊಲೀಸರು ನವೀನನ್ನು ಬಿಡುಗಡೆ ಮಾಡಿದ್ದಾರೆ.
Recommended Video
ಜೂನ್ 15ರಂದು ನಡೆದ ಅಪಘಾತದಲ್ಲಿ ವಿಜಯ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಮೆದುಳಿನ ಬಲ ಭಾಗ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿತ್ತು. ಬಳಿಕ ವಿಜಯ್ ಅಂಗಾಂಗಗಳನ್ನು ದಾನ ಮಾಡಲು ಕುಟುಂಬದವರು ನಿರ್ಧರಿಸಿ ಅಂಗಾಂಗ ದಾನ ಮಾಡಿದರು. ವಿಜಯ್ ಅಂತ್ಯಸಂಸ್ಕಾರ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ನೆರವೇರಿತು.