For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್ ಅಪಘಾತ ಪ್ರಕರಣ: ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ನವೀನ್ ಪೊಲೀಸರಿಗೆ ಹೇಳಿದ್ದೇನು?

  By ಫಿಲ್ಮಿ ಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯ್ ಗೆಳೆಯ ನವೀನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಪಘಾತ ವೇಳೆ ಬೈಕ್ ಓಡಿಸುತ್ತಿದ್ದ ನವೀನ್ ಆಸ್ಪತ್ರೆಯಿಂದ ಮನೆಗೆ ಮರಳುತ್ತಿದಂತೆ ಘಟನೆ ಬಗ್ಗೆ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

  ಘಟನೆ ಬಗ್ಗೆ ಇಂಚಿಂಚು ಮಾಹಿತಿ ನೀಡಿರುವ ನವೀನ್, ಜೂನ್ 12ರ ರಾತ್ರಿ ಸ್ನೇಹಿತರ ಮನೆಯಲ್ಲಿ ಸಂಚಾರಿ ವಿಜಯ್ ಮತ್ತು ಟೀಂ ಸಭೆ ಸೇರಿದ್ದರು. ಕೊರೊನಾ ಕಿಟ್ ಮತ್ತು ಸಹಾಯ ಕುರಿತು ವಿಜಯ್ ಮತ್ತು ಸ್ನೇಹಿತರಿಂದ ಚರ್ಚೆ ಮಾಡಲಾಗುತ್ತಿತ್ತು. ಫುಡ್ ಕಿಟ್, ಮೆಡಿಸಿನ್ ಸೇರಿ ಕೈಲಾದ ಸಹಾಯ ಮಾಡಲು ಎಲ್ಲರೂ ನಿರ್ಧಾರಿಸಿದ್ದರು.

  ಸಂಚಾರಿ ವಿಜಯ್‌ಗೆ ವಿಶೇಷ ಗೌರವ ನೀಡಿದ ಅಮೆರಿಕಾ ಚಿತ್ರಮಂದಿರಸಂಚಾರಿ ವಿಜಯ್‌ಗೆ ವಿಶೇಷ ಗೌರವ ನೀಡಿದ ಅಮೆರಿಕಾ ಚಿತ್ರಮಂದಿರ

  ಚರ್ಚೆ ನಡೆಯುತ್ತಿದ್ದಂತೆ ನವೀನ್‌ಗೆ ಮನೆಯಿಂದ ಪತ್ನಿ ಫೋನ್‌ಕಾಲ್ ಮಾಡಿ ಮಾತ್ರೆ ತರಳಲು ಹೇಳಿದರು. ಬೈಕ್‌ನಲ್ಲಿ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗಿ ಮಾತ್ರೆ ತರಲು ನವೀನ್ ಹೊರಟರು. ಈ ವೇಳೆ ತಾನು ಬರುವುದಾಗಿ ಹೇಳಿ ವಿಜಯ್ ಬೈಕ್ ಏರಿದರು. ಇದೆಲ್ಲವೂ ಮನೆ ಹತ್ತಿರವೇ ಆದ್ದರಿಂದ ನವೀನ್ ಮತ್ತು ವಿಜಯ್ ಹೆಲ್ಮೆಟ್ ಧರಿಸಿಲ್ಲ.

  ಮಾತ್ರೆಗಳನ್ನು ತಗೊಂಡು ವಾಪಸ್ ಬರಬೇಕಾದ್ರೆ ಬೈಕ್ ಅಪಘಾತವಾಗಿದೆ. ಸ್ಕಿಡ್ ಆಗಿ ಎಲೆಕ್ಟ್ರಿಕ್ ಪೋಲ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಸ್ಕಿಡ್ ಆಗಿದ್ದರಿಂದ ಬೈಕ್ ಬಿತ್ತು ಎಂದು ನವೀನ್ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಬಳಿಕ ಠಾಣಾ ಜಾಮೀನಿನ ಮೇಲೆ ಹೇಳಿಕೆ ಪಡೆದು ಜಯನಗರ‌ ಟ್ರಾಫಿಕ್ ಪೊಲೀಸರು ನವೀನನ್ನು ಬಿಡುಗಡೆ ಮಾಡಿದ್ದಾರೆ.

  ಘಟನೆ ಬಗ್ಗೆ ಸ್ಪಷ್ಟ ಪಡಿಸಿದ ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ | Jaggesh | Yathiraj | Filmibeat Kannada

  ಜೂನ್ 15ರಂದು ನಡೆದ ಅಪಘಾತದಲ್ಲಿ ವಿಜಯ್‌ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಮೆದುಳಿನ ಬಲ ಭಾಗ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿತ್ತು. ಬಳಿಕ ವಿಜಯ್ ಅಂಗಾಂಗಗಳನ್ನು ದಾನ ಮಾಡಲು ಕುಟುಂಬದವರು ನಿರ್ಧರಿಸಿ ಅಂಗಾಂಗ ದಾನ ಮಾಡಿದರು. ವಿಜಯ್ ಅಂತ್ಯಸಂಸ್ಕಾರ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ನೆರವೇರಿತು.

  English summary
  Sanchari Vijay accident: Naveen gives details to police after discharged from hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X