ಚಿಕ್ಕ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಅದ್ಭುತ ಕಲಾವಿದ; ವಿಜಯ್ ನಿಧನಕ್ಕೆ ದರ್ಶನ್ ಸಂತಾಪ
ನಟ ಸಂಚಾರಿ ವಿಜಯ್ ಹಠಾತ್ ನಿಧನ ಇಡೀ ಸ್ಯಾಂಡಲ್ ವುಡ್ ಗೆ ಆಘಾತತಂದಿದೆ. ಜೂನ್ 12ರಂದು ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ವಿಜಯ್ ತಲೆಗೆ ಬಲವಾದ ಏಟು ತಗುಲಿತ್ತು. ಬ್ರೈನ್ ಡೆಡ್ ಆಗಿದ್ದ ಪರಿಣಾಮ ವಿಜಯ್ ಬದುಕುವ ಸಾಧ್ಯತೆ ತೀರ ಕಡಿಮೆ ಎಂದು ವೈದ್ಯರು ತಿಳಿಸಿದ್ದರು. ಕುಟುಂಬದವರು ವಿಜಯ್ ಅವರ ಅಂಗಾಗ ದಾನ ಮಾಡಲು ನಿರ್ಧರಿಸಿದ ಹಿನ್ನಲೆ ನಿನ್ನೆ ಜೂನ್ 14ರಂದು ರಾತ್ರಿ ಅಂಗಾಗ ದಾನ ಮಾಡಿದ ಬಳಿಕ ವಿಜಯ್ ನಿಧನದ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
ಇಂದು ಬೆಳಗ್ಗೆ ಅಪೊಲೋ ಆಸ್ಪತ್ರೆಯಿಂದ ವಿಜಯ್ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು. ವಿಜಯ್ ನಿಧನಕ್ಕೆ ಇಡೀ ಸ್ಯಾಂಡಲ್ ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಜಯ್ ಡ್ರೈನ್ ಡೆಡ್ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಬಹುತೇಕರು ಸಂತಾಪ ಸೂಚಿಸಿ ಪೋಸ್ಟ್ ಗಳನ್ನು ಹಾಕಿಕೊಂಡಿದ್ದರು.
ಇದೀಗ ನಟ ದರ್ಶನ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದ ಅದ್ಭುತ ಕಲಾವಿದ ವಿಜಯ್ ಎಂದು ದರ್ಶನ್ ಹೇಳಿದ್ದಾರೆ.

Recommended Video
'ಚಿಕ್ಕ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಅದ್ಭುತ ಯುವ ಕಲಾವಿದ ಸಂಚಾರಿ ವಿಜಯ್ ಅವರು ಅಪಘಾತದಲ್ಲಿ ಅಸುನೀಗಿದ್ದಾರೆ ಎಂಬ ಸುದ್ದಿ ಆಘಾತ ಉಂಟುಮಾಡಿದೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ' ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











