For Quick Alerts
  ALLOW NOTIFICATIONS  
  For Daily Alerts

  Taledanda: ಅಣ್ಣಾವ್ರ ಹುಟ್ಟುಹಬ್ಬದಂದೇ ಸಂಚಾರಿ ವಿಜಯ್ 'ತಲೆದಂಡ': ಇಲ್ಲಿದೆ ಡಿಟೈಲ್ಸ್

  |

  ಅಣ್ಣಾವ್ರ ಅಭಿಮಾನಿಗಳಿಗೆ ಏಪ್ರಿಲ್ 24 ಹಬ್ಬವಿದ್ದಂತೆ. ಈ ದಿನ ಇಡೀ ಕರ್ನಾಟಕ ಡಾ.ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಹಬ್ಬದಂತೆಯೇ ಆಚರಣೆ ಮಾಡಲಾಗುತ್ತಿದೆ. ಇದೇ ದಿನ ದಿವಂಗತ ಸಂಚಾರಿ ವಿಜಯ್ ಅಭಿನಯದ ಸಿನಿಮಾದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಂಡಿದೆ ಚಿತ್ರತಂಡ.

  ದಿವಂಗತ ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಸಿನಿಮಾ ಏಪ್ರಿಲ್ 01ರಂದೇ ಬಿಡುಗಡೆಯಾಗಿತ್ತು. ಸಂಚಾರಿ ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಆದ್ರೀಗ ಚಿತ್ರತಂಡ ಮತ್ತೊಂದು ಅಣ್ಣಾವ್ರ ಹುಟ್ಟುಹಬ್ಬದಂದೇ ವಿಶೇಷ ಪ್ರದರ್ಶನವನ್ನು ಏರ್ಪಾಡು ಮಾಡಿದೆ.

  Taledanda: ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ತಲೆದಂಡ'ದಲ್ಲಿ ಪ್ರಕೃತಿಯ ನಾದ!Taledanda: ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ತಲೆದಂಡ'ದಲ್ಲಿ ಪ್ರಕೃತಿಯ ನಾದ!

  ಅಣ್ಣಾವ್ರ ಹುಟ್ಟುಹಬ್ಬದಂದೇ 'ತಲೆದಂಡ' ವಿಶೇಷ ಪ್ರದರ್ಶನ

  ಡಾ. ರಾಜ್‌ಕುಮಾರ್ ಹುಟ್ಟುಹಬ್ಬದೊಂದಿಗೆ ಸಂಚಾರಿ ವಿಜಯ್ ಕೊನೆಯ ಸಿನಿಮಾವನ್ನು ಸಂಭ್ರಮಿಸಲು ಚಿತ್ರತಂಡ ಅವರ ಅಭಿಮಾನಿಗಳಿಗೆ ವಿಶೇಷ ಅವಕಾಶ ನೀಡುತ್ತಿದೆ. ಪ್ರವೀಣ್ ಕೃಪಾಕರ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಮತ್ತೊಂದು ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  'ತಲೆದಂಡ' ಸಿನಿಮಾ ಪರಿಸರ. ಅದನ್ನು ಉಳಿಸಲು ಹೋರಾಡುವ ಮುಗ್ಧ ವ್ಯಕ್ತಿಯೊಬ್ಬನ ಕಥೆ. 'ತಲೆದಂಡ' ಸಿನಿಮಾದಲ್ಲಿ ಸಂಚಾರಿ ವಿಜಯ್ ವಿಶೇಷ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ವ್ಯಕ್ತಿಯಾಗಿ ಅಭಿನಯಿಸಿರುವ ಸಂಚಾರಿ ವಿಜಯ್ ಪರಿಸರ ಪ್ರೇಮಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಪ್ರಕೃತಿಯ ಪರ ಹೋರಾಟವೇ ಈ ಸಿನಿಮಾದ ಕತೆಯ ಜೀವಾಳ.

  Sanchari Vijay: ಸಂಚಾರಿ ವಿಜಯ್ 'ತಲೆದಂಡ' ನೆನಪಿಸಿದ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿSanchari Vijay: ಸಂಚಾರಿ ವಿಜಯ್ 'ತಲೆದಂಡ' ನೆನಪಿಸಿದ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ

  ಡಾ.ರಾಜ್ ಕುಮಾರ್ ಅಪ್ಪಟ ಅಭಿಮಾನಿ ಸಂಚಾರಿ ವಿಜಯ್

  ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಲವು ಅದ್ಬುತ ಸಿನಿಮಾಗಳಲ್ಲಿ ಮನೋಜ್ಞ ಅಭಿನಯವನ್ನು ನೀಡಿದ್ದಾರೆ. ವಿಜಯ್ ಒಬ್ಬ ನಟನಾಗಿ ಡಾ. ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಹೀಗಾಗಿ ಇದೇ ದಿನದಂದು 'ತಲೆದಂಡ' ಸಿನಿಮಾದ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಆಯೋಜನೆ ಮಾಡಿದೆ.

  Sanchari Vijay movie Taledanda Special Show On Dr.Rajkumar Birthday On April 24th

  ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕರ್ನಾಟಕಚಲನಚಿತ್ರ ಕಲಾವಿದರ ಸಂಘದಲ್ಲಿ ಈ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಈ ಸಿನಿಮಾ ನೋಡಲು ಟಿಕೆಟ್ ಅನ್ನು ಕಾಯ್ದಿರಿಸಲು ಅವಕಾಶ ನೀಡಿದ್ದು, 200 ರೂಪಾಯಿ ಟಿಕೆಟ್ ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಜೊತೆ ಮಂಗಳಾ ರಘು, ಬಿ ಸುರೇಶ್, ಮಂಡ್ಯ ರಮೇಶ್, ಪ್ರಶಾಂತ್ ನಟನ, ರಮೇಶ್ ಪಂಡಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  'ತಲೆದಂಡ' ಸಿನಿಮಾದಲ್ಲಿ 12 ಬಿಟ್ ಸಾಂಗ್ಸ್

  ಪ್ರವೀಣ್ ಕೃಪಾಕರ್ 'ತಲೆದಂಡ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಕೃತಿಯ ನಾದವನ್ನೇ ಬಳಸಿಕೊಂಡು ಹಾಡುಗಳನ್ನು ಹರಿಕಾವ್ಯ ರಚಿಸಿದ್ದಾರೆ. ಪ್ರಯೋಗಾತ್ಮಕ ಸಿನಿಮಾದಲ್ಲಿ 12 ಬಿಟ್ ಸಾಂಗ್‌ಗಳನ್ನು ಇಟ್ಟಿರುವುದು ಸಿನಿಮಾದ ಹೈಲೈಟ್. ಸಿನಿಮಾಗೆ ಪ್ರಕೃತಿ ಹೇಗೆ ಜೀವಾಳವೋ.. ಹಾಗೇ ಹಾಡುಗಳಿಗೆ ಪ್ರಕೃತಿ ಕೂಡ ಜೀವಾಳವಾಗಿದ್ದು, ಸಂಚಾರಿ ವಿಜಯ್ ಅಭಿನಯಕ್ಕೆ ತಕ್ಕ ಕಥೆ, ಕಥೆಗೆ ತಕ್ಕ ಸಂಗೀತ ಈ ಸಿನಿಮಾದಲ್ಲಿ ನೀಡಿಲಾಗಿದೆ.

  ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸಂಚಾರಿ ವಿಜಯ್ ಕೊನೆಯ ಸಿನಿಮಾ ಇದಾಗಿದ್ದು, ಸಿನಿಪ್ರಿಯರಿಗೆ ಮತ್ತೆ ಈ ವಿಶಿಷ್ಟ ಸಿನಿಮಾವನ್ನು ನೋಡಲು ಅವಕಾಶ ನೀಡಲಾಗಿದೆ. ಅಣ್ಣಾವ್ರ ಹುಟ್ಟುಹಬ್ಬ, ಸಂಚಾರಿ ವಿಜಯ್ ಸಿನಿಮಾ 'ತಲೆದಂಡ'. ಎರಡನ್ನೂ ಒಟ್ಟಿಗೆ ಸಂಭ್ರಮಿಸುವ ಅವಕಾಶ ಸಿಕ್ಕಿದ್ದು, ಸಿನಿಮಾಸಕ್ತರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂದು ಕಾದು ನೋಡಬೇಕಿದೆ.

  English summary
  Sanchari Vijay movie Taledanda Special Show On Dr.Rajkumar Birthday On April 24th. Know More,
  Saturday, April 16, 2022, 9:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X