For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್ ಅಂಗಾಂಗ ದಾನದಿಂದ ಏಳು ಜನಕ್ಕೆ ಹೊಸ ಜೀವನ

  |

  ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಸಂಚಾರಿ ವಿಜಯ್ ದೇಹದ ಅಂಗಾಂಗಗಳನ್ನು ದಾನ ಮಾಡಿರುವುದು ತಿಳಿರುವುದು ವಿಚಾರ. ಈಗಾಗಲೇ ಅಪೋಲೋ ಆಸ್ಪತ್ರೆಯಲ್ಲಿ ಅಂಗಾಂಗಳ ದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

  ಸಂಚಾರಿ ವಿಜಯ್ ಅಂಗಾಂಗ ದಾನದಿಂದ 7 ಜೀವಗಳಿಗೆ ಹೊಸಜೀವನ | Filmibeat Kannada

  ವೈದ್ಯರು ನೀಡಿರುವ ಮಾಹಿತಿ ಪ್ರಕಾರ ವಿಜಯ್ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್, ಹಾಗೂ ಹೃದಯ ವ್ಯಾಲ್ಸ್ ಪಡೆಯಲಾಗಿದೆ ಎಂದು ಜೀವ ಸಾರ್ಥಕತೆ ತಂಡದ ನೌಷಾದ್ ಪಾಷ ಹೇಳಿದ್ದಾರೆ. ವಿಜಯ್ ಅವರಿಂದು ಒಟ್ಟು ಏಳು ಜನರಿಗೆ ಹೊಸ ಜೀವನ ಸಿಗಲಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

  ಸಂಚಾರಿ ವಿಜಯ್ ನಿಧನಕ್ಕೆ ಕಣ್ಣೀರು ಹಾಕಿದ ಚಿತ್ರರಂಗಸಂಚಾರಿ ವಿಜಯ್ ನಿಧನಕ್ಕೆ ಕಣ್ಣೀರು ಹಾಕಿದ ಚಿತ್ರರಂಗ

  ಇಬ್ಬರಿಗೆ ತಲಾ ಒಂದೊಂದು ಕಣ್ಣು, ಇಬ್ಬರಿಗೆ ತಲಾ ಒಂದೊಂದು ಕಿಡ್ನಿ, ಲಿವರ್ ಒಬ್ಬರಿಗೆ ಹಾಗೂ ಹೃದಯ ವ್ಯಾಲ್ಸ್ ಇಬ್ಬರಿಗೆ ಹಾಕಬಹುದು ಎಂದು ಜೀವ ಸಾರ್ಥಕತೆ ತಂಡ ನೌಷಾದ್ ಪಾಷ ಮಾಧ್ಯಮಗಳಿಗೆ ತಿಳಿಸಿದರು.

  ರಾತ್ರಿ 9 ಗಂಟೆಗೆಯಿಂದ ದೇಹದ ಅಂಗಾಗ ದಾನದ ಪ್ರಕ್ರಿಯೆ ನಡೆದಿದ್ದು, ಮುಂಜಾನೆ 3.34ಕ್ಕೆ ಪೂರ್ಣಗೊಂಡಿದೆ. ಈ ಮೊದಲೇ ಅಂಗಾಂಗ ಕಸಿಗೂ ತಯಾರಿ ನಡೆಸಿದ್ದು, ವಿಜಯ್ ದೇಹದಿಂದ ತೆಗೆಯಲಾದ ಅಂಗಾಂಗಳನ್ನು ಇತರೆ ರೋಗಿಗಳಿಗೆ ಹಾಕುವ ಪ್ರಕ್ರಿಯೆ ಸಹ ನಡೆದಿದೆ ಎಂದು ತಿಳಿದು ಬಂದಿದೆ.

  ಅಪೋಲೋ ಆಸ್ಪತ್ರೆಯಲ್ಲಿಯೇ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಬೆಳಗ್ಗೆ 8 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಮಧ್ಯಾಹ್ನ 12 ಗಂಟೆ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ತೀರ್ಮಾನಿಸಿದೆ.

  English summary
  Actor Sanchari Vijay Organ Donation gives new lease of life to seven people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X