For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ದುಡಿದ ಸ್ವಾಭಿಮಾನಿಗೆ ಮುಪ್ಪಿನಲ್ಲಿ ಬೇಕಿದೆ ನೆರವು: ಸಂಚಾರಿ ವಿಜಯ್‌ ಮನವಿಗೆ ಓಗೊಡಿ

  |

  ಕನ್ನಡ ಚಿತ್ರರಂಗ ಇಂದು ಕೋಟ್ಯಂತರ ವ್ಯವಹಾರ ನಡೆಸುವ ಶ್ರೀಮಂತ ಉದ್ಯಮ ಆಗಿರುವುದರ ಹಿಂದೆ ಸಾವಿರಾರು ಮಂದಿಯ ಶ್ರಮವಿದೆ. ಎಷ್ಟೂ ಪ್ರತಿಭಾವಂತ ನಟ-ನಟಿಯರು, ನಿರ್ದೇಶಕರು, ತಂತ್ರಜ್ಞರು, ಕತೆಗಾರರು, ಸಂಭಾಷಣೆಕಾರರು ತಮ್ಮ ಪ್ರತಿಭೆ ಧಾರೆ ಎರೆದ ಕಾರಣ, ಕನ್ನಡ ಚಿತ್ರರಂಗ ನೆಲೆಯೂರಿದೆ.

  ಹೀಗೆ ಚಿತ್ರರಂಗಕ್ಕೆ ಅವಿರತ ಸೇವೆ ಮಾಡಿದ ಎಷ್ಟೋ ಹಿರಿ ಜೀವಗಳು ಇಂದಿಗೂ ಇವೆ. ಆದರೆ ಹೊಸ ಅಲೆಯ ಮೇಲೆ ತೇಲುತ್ತಿರುವ ಚಿತ್ರರಂಗದ ಹೊಸ ಮಂದಿಗೆ ಅವರ ಪರಿಚಯವಿಲ್ಲ. ಪರಿಚಯವಿದ್ದರೂ ಹಲವರಿಗೆ ಅವರ ಉಸಾಬರಿ ಬೇಕಿಲ್ಲ. ಅಂಥಹಾ ಹಿರಿಜೀವಗಳಲ್ಲಿ ಒಬ್ಬರು ಶ್ರೀರಂಗ.

  'ಜನುಮದ ಜೋಡಿ', 'ರಕ್ತ ಕಣ್ಣೀರು', 'ಆಕಾಶ್', 'ವೀರ ಕನ್ನಡಿಗ', 'ಅಪ್ಪಾಜಿ', 'ಇನ್ಸ್ಪೆಕ್ಟರ್ ವಿಕ್ರಮ್', 'ಗಂಡುಗಲಿ ಕುಮಾರ ರಾಮ', 'ಆಸೆಗೊಬ್ಬ ಮೀಸೆಗೊಬ್ಬ' 'ಅಪ್ಪು' 'ಅಭಿ' ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದ, 'ಅಂಜದ ಗಂಡು', 'ಕಿಂದರಿ ಜೋಗಿ', 'ಮುತ್ತೈದೆ ಭಾಗ್ಯ', 'ಅದೃಷ್ಟ ರೇಖೆ', 'ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ', 'ಶುಕ್ರ ದೆಶೆ', 'ಭೂಲೋಕದಲ್ಲಿ ಯಮರಾಜ' ಇನ್ನೂ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಚಿತ್ರಸಾಹಿತಿ 'ಶ್ರೀರಂಗ'.

  ಇಳಿವಯಸ್ಸಿನ ಶ್ರೀರಂಗ ಅವರು ತಮ್ಮ ಪತ್ನಿ ಹಾಗೂ ಮಗಳೊಟ್ಟಿಗೆ ಕೆ.ಆರ್.ಪುರಂ ನಲ್ಲಿ ಸಣ್ಣದೊಂದು ಮನೆಯಲ್ಲಿ ವಾಸವಿದ್ದಾರೆ. ಮಗಳು ಆರ್ಕೆಸ್ಟ್ರಾದಲ್ಲಿ ಹಾಡಿ ಅಪ್ಪ-ಅಮ್ಮನನ್ನು ಸಾಕುತ್ತಿದ್ದಾರೆ. ಮುಪ್ಪಿನಲ್ಲಿ ಕಷ್ಟವೇ ಬದುಕಾಗಿ ದಿನ ಕಳೆಯುತ್ತಿದ್ದಾರೆ ಒಂದು ಕಾಲದ ಖ್ಯಾತ ಚಿತ್ರಸಾಹಿತಿ ಶ್ರೀರಂಗ.

  ಶ್ರೀರಂಗರನ್ನು ಅಕಸ್ಮಾತ್ ಆಗಿ ಕಾರ್ಯಕ್ರಮವೊಂದರಲ್ಲಿ ನೋಡಿದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು, ಶ್ರೀರಂಗ ಅವರ ಈಗಿನ ಪರಿಸ್ಥಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಬರೆದಿದ್ದಾರೆ. ಜೊತೆಗೆ ಶ್ರೀರಂಗರಿಗೆ ಸಹಾಯದ ಅಗತ್ಯವೂ ಇರುವುದಾಗಿ ಹಾಗೂ ಉದಾರಮನಸ್ಸಿನವರು ಆರ್ಥಿಕ ನೆರವು ನೀಡಬೇಕೆಂದು ಮನವಿಯನ್ನೂ ಮಾಡಿದ್ದಾರೆ.

  ಯಾರಿಗಾದರೂ ಈ ಹಿರಿಯ ಜೀವಗಳಿಗೆ ನೆರವು ನೀಡ ಬಯಸುವ ಮನಸ್ಸಿದ್ದರೆ ನನ್ನನ್ನು ಸಂಪರ್ಕಿಸಿ. ಅವರ ಬ್ಯಾಂಕ್ ಖಾತೆಗೆ ನೀವೇ ನೇರವಾಗಿ ಹಣ ಹಾಕಬಹುದು ಎಂದು ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟಿದ್ದಾರೆ ಸಂಚಾರಿ ವಿಜಯ್. ಜೊತೆಗೆ ಅವರಿಗೆ ಇಷ್ಟು ದಿನ ನೆರವು ನೀಡುತ್ತಿದ್ದ ಗಿರೀಶ್ ಎಂಬುವರ ಮೊಬೈಲ್ ಸಂಖ್ಯೆ (98866-40906) ಸಹ ಹಾಕಿದ್ದಾರೆ.

  ಇದ್ದಕ್ಕಿದ್ದಂತೆ ಹೈದ್ರಾಬಾದ್ ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ | Filmibeat Kannada

  ಶ್ರೀರಂಗ ಅವರ ಬ್ಯಾಂಕ್ ಖಾತೆ ವಿವರ ಇಂತಿದೆ
  Name- sree ranga
  state bank of india
  Chandar layout branch
  Ifsc SBIN 0004051
  A/c no 64145797446

  English summary
  Actor Sanchari Vijay request people to help senior song and dialogue writer Sri Ranga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X