twitter
    For Quick Alerts
    ALLOW NOTIFICATIONS  
    For Daily Alerts

    ಫ್ರೆಂಚ್ ಅಥವಾ ಇಂಗ್ಲೀಷ್ ಭಾಷೆಗೆ ರೀಮೇಕ್ ಆಗಲಿದೆ ಕನ್ನಡದ 'ವರ್ತಮಾನ'!

    By Harshitha
    |

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅಭಿನಯದ 'ವರ್ತಮಾನ' ಕಳೆದ ಎರಡು ವಾರಗಳ ಹಿಂದಷ್ಟೇ ಬಿಡುಗಡೆ ಆದ ಸಿನಿಮಾ. ಕನ್ನಡ ಚಿತ್ರರಂಗದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾದ 'ವರ್ತಮಾನ' ಕಂಡು ಪ್ರೇಕ್ಷಕರು ಮನರಂಜನೆ ಪಡೆದುಕೊಂಡಿದ್ದಕ್ಕಿಂತ ಗೊಂದಲಕ್ಕೀಡಾಗಿದ್ದೇ ಹೆಚ್ಚು. ಯಾಕಂದ್ರೆ, ಸಿನಿಮಾದಲ್ಲಿ ಕೋಡಿಂಗ್ ಮತ್ತು ಡಿಕೋಡಿಂಗ್ ಸ್ವಲ್ಪ ಜಾಸ್ತಿಯೇ ಇತ್ತು.

    ಬ್ಲಾಕ್ ಅಂಡ್ ವೈಟ್ ಹಾಗೂ ಕಲರ್ ಗಳ ಕೋಡ್ ಮೂಲಕ ನಿರ್ದೇಶಕರು ಭೂತ, ಭವಿಷ್ಯ ಹಾಗೂ ವರ್ತಮಾನದ ಕಥೆ ಹೇಳ್ತಿದ್ರೆ, ಅದನ್ನ ಅರ್ಥೈಸಿಕೊಳ್ಳುವ ತಾಳ್ಮೆ ಪ್ರೇಕ್ಷಕರಿಗೆ ತುಸು ಹೆಚ್ಚು ಬೇಕಾಗಿತ್ತು. ಹೀಗಾಗಿ, 'ವರ್ತಮಾನ' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ಕಥಾವಸ್ತುವನ್ನು ಸಾಂಕೇತಿಕವಾಗಿ ಹೇಳುವ ನಿರೂಪಣಾ ಶೈಲಿ ಯೂರೋಪಿಯನ್ ಸಿನಿಮಾಗಳಲ್ಲಿ ಹೆಚ್ಚು. ಹೀಗಾಗಿ, 'ವರ್ತಮಾನ' ಚಿತ್ರವನ್ನ ಫ್ರೆಂಚ್ ಅಥವಾ ಇಂಗ್ಲೀಷ್ ಭಾಷೆಗೆ ರೀಮೇಕ್ ಮಾಡಲು ನಿರ್ದೇಶಕ ಉಮೇಶ್ ಅಂಶಿ ಮನಸ್ಸು ಮಾಡಿದ್ದಾರೆ.

    Sanchari Vijay starrer Varthamana to be remade in French or English

    ಚಿತ್ರ ವಿಮರ್ಶೆ: 'ವರ್ತಮಾನ'ದ ಸಂಕಷ್ಟ ಅರಗಿಸಿಕೊಳ್ಳುವುದು ಕಷ್ಟ ಕಷ್ಟಚಿತ್ರ ವಿಮರ್ಶೆ: 'ವರ್ತಮಾನ'ದ ಸಂಕಷ್ಟ ಅರಗಿಸಿಕೊಳ್ಳುವುದು ಕಷ್ಟ ಕಷ್ಟ

    ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನು ಸದ್ದು ಮಾಡದ 'ವರ್ತಮಾನ' ಚಿತ್ರವನ್ನ ವಿದೇಶಗಳಲ್ಲಿ ಬಿಡುಗಡೆ ಮಾಡಲು ಉಮೇಶ್ ಅಂಶಿ ತಯಾರಿ ನಡೆಸಿದ್ದಾರೆ. ಅದಾದ ಬಳಿಕ, 'ವರ್ತಮಾನ' ಚಿತ್ರವನ್ನ ಫ್ರೆಂಚ್ ಅಥವಾ ಇಂಗ್ಲೀಷ್ ಭಾಷೆಗೆ ರೀಮೇಕ್ ಮಾಡುವೆ ಎಂದು ಉಮೇಶ್ ಅಂಶಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

    'ವರ್ತಮಾನ' ಕಂಡು ಗೊಂದಲಗೊಂಡ ಕನ್ನಡ ಸಿನಿ ವಿಮರ್ಶಕರು!'ವರ್ತಮಾನ' ಕಂಡು ಗೊಂದಲಗೊಂಡ ಕನ್ನಡ ಸಿನಿ ವಿಮರ್ಶಕರು!

    ಹೆಚ್ಚು ಡೈಲಾಗ್ಸ್ ಇಲ್ಲದ, ಹಾಡುಗಳು ಇಲ್ಲದ 'ವರ್ತಮಾನ' ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ಹೊಂದಿದೆ. ಯಾವುದೇ ಅದೃಷ್ಟದ ಹಿಂದೆ ಒಂದು ಅಪರಾಧವಿದೆ ಎಂಬ ಮಾತಿನಿಂದ ಪ್ರೇರಿತನಾಗಿ ಅಪರಾಧ ಎಸಗಲು ಮುಂದಾಗುವ ಯುವಕನ ಮನಸ್ಸಿನೊಳಗಿನ ಪಯಣವೇ ಈ ಸಿನಿಮಾ.

    English summary
    Kannada Actor Sanchari Vijay starrer 'Varthamana' to be remade in French or English
    Tuesday, April 17, 2018, 15:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X