For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್‌ಗೆ ಹೋಗಿದ್ದರೆ ಬದುಕಿರುತ್ತಿದ್ರು ಸಂಚಾರಿ ವಿಜಯ್'

  |

  ಸಂಚಾರಿ ವಿಜಯ್ ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಟ. ಸದಾ ವಿಶಿಷ್ಟ ಪಾತ್ರಗಳನ್ನೇ ಹುಡುಕಿಕೊಂಡು ಹೊರಡುತ್ತಿದ್ದ ಸಂಚಾರಿ ವಿಜಯ್ ವಿಶಿಷ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ನಟಿಸಿದ 'ನಾನು ಅವನಲ್ಲ ಅವಳು' ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿಸಂಚಾರಿ ವಿಜಯ್ ನಟಿಸಿದ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಆದರೆ, ಇಂತಹ ಕನ್ನಡ ಚಿತ್ರರಂಗ ಕಂಡ ಇಂತಹ ಅದ್ಭುತ ಅಪಘಾತದಲ್ಲಿ ನಮ್ಮೆಲ್ಲರನ್ನೂ ಅಗಲಿದ್ದಾರೆ.

  ಈಗ ಸಂಚಾರಿ ವಿಜಯ್ ಅಭಿನಯದ ಸಿನಿಮಾ 'ಮೇಲೊಬ್ಬ ಮಾಯಾವಿ' ಬಿಡುಗಡೆಗೆ ಸಜ್ಜಾಗಿದೆ. ಇದೇ ಏಪ್ರಿಲ್ 29ಕ್ಕೆ ಬಿಡುಗಡೆಯಾಗಲಿದೆ. ಇದೇ ವೇಳೆ ಸಂಚಾರಿ ವಿಜಯ್ ಆತ್ಮೀಯರಾಗಿದ್ದ ಚಕ್ರವರ್ತಿ ಚಂದ್ರಚೂಡ ಗೆಳೆಯನ ಸಾವಿನ ರಹಸ್ಯವನ್ನು ಹೊರಹಾಕಿದ್ದಾರೆ.

  Recommended Video

  Sudeep | 'ಮೇಲೊಬ್ಬ ಮಾಯಾವಿ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ ಹೀಗೆ ಅಂದಿದ್ದು ಯಾಕೆ? | Chakravarthi

  ಸಂಚಾರಿ ವಿಜಯ್ ಸಾಯುವುದಕ್ಕೂ ಮುನ್ನ ಬಿಗ್‌ಬಾಸ್‌ಗೆ ಆಫರ್ ಬಂದಿತ್ತು. ಒಂದು ವೇಳೆ ಸಂಚಾರಿ ವಿಜಯ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರೆ, ಇಂದು ಬದುಕಿರುತ್ತಿದ್ದರು ಎನ್ನುತ್ತಾರೆ ಚಕ್ರವರ್ತಿ ಚಂದ್ರಚೂಡ. ಫಿಲ್ಮಿ ಬೀಟ್‌ ಜೊತೆ ಸಂಚಾರಿ ವಿಜಯ್ ಸಾವು, ಸಾಮಾಜಿಕ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  ಬಿಗ್‌ಬಾಸ್‌ಗೆ ವಿಜಯ್ ಪ್ರವೇಶ ಮಾಡಬೇಕಿತ್ತು

  ಬಿಗ್‌ಬಾಸ್‌ಗೆ ವಿಜಯ್ ಪ್ರವೇಶ ಮಾಡಬೇಕಿತ್ತು

  " ಕೋವಿಡ್ ಎರಡನೇ ಅಲೆ ಎದ್ದಾಗ ನಾನು ಬಿಗ್ ಬಾಸ್‌ಗೆ ಹೋಗಿದ್ದೆ. ಇಷ್ಟು ವರ್ಷಗಳ ಜರ್ನಿಯಲ್ಲಿ ನನಗೂ ವಿಜಿಗೂ ಏನಾದರೂ ಸ್ವಲ್ಪ ಗ್ಯಾಪ್ ಆಗಿದ್ದರೆ, ಕೋವಿಡ್ ಎರಡನೇ ಸಮಯದಲ್ಲಿ. ಸೆಕೆಂಡ್ ಕೋವಿಡ್ ಸಮಯದಲ್ಲಿ ನಾನು ಬಿಗ್ ಬಾಸ್ ಮನೆಯೊಳಗೆ ಇದ್ದೆ. ಬಿಗ್ ಬಾಸ್ ಎಂಟನೇ ಸೀಸನ್‌ಗೆ ವಿಜಯ್ ಬರಬೇಕಿತ್ತು. ನನಗೆ ಬಿಗ್ ಬಾಸ್‌ಗೆ ಕರೆಯುತ್ತಿದ್ದಾರೆ ಏನ್ ಮಾಡಲಿ ಎಂದು ಕೇಳಿದ್ದರು. ಹೋಗ್ರಿ ಚೆನ್ನಾಗಿರುತ್ತೆ ಎಂದು ಹೇಳಿದ್ದೆ." ಎನ್ನುತ್ತಾರೆ ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ ಚಕ್ರವರ್ತಿ ಚಂದ್ರಚೂಡ.

  ಬಿಗ್‌ಬಾಸ್ ಹೋಗಿದ್ರೆ ಬದುಕುತಿದ್ರು

  ಬಿಗ್‌ಬಾಸ್ ಹೋಗಿದ್ರೆ ಬದುಕುತಿದ್ರು

  "ಅವರು ತುಂಬಾನೇ ಭಯಪಡುವ ವ್ಯಕ್ತಿ. ಏನಾಗುತ್ತೋ ಏನೋ ನಾನು ಹೋಗಲ್ಲ. ನೀವು ಹೋಗಿ ಬಂದ್ಬಿಡಿ. ಒಂದ್ಸಲ ನೀವು ಬಂದು ಹೇಳಿ ಏನಿರುತ್ತೆ ಅಂತ. ನನಗೆ ಅನಿಸಿದರೆ ನಾನು ಹೋಗುತ್ತೇನೆ. ಅವರು ಬಿಗ್ ಬಾಸ್‌ಗೆ ಬಂದುಬಿಟ್ಟಿದ್ದರೆ, ಬದುಕುಳಿಯುತ್ತಿದ್ದರು. ಇಲ್ಲಾ ನಾನು ಬಿಗ್ ಬಾಸ್‌ ಒಳಗೆ ಹೋಗದೆ ಇದ್ದಿದ್ದರೆ, ಅವರು ಬದುಕುಳಿಯುತ್ತಿದ್ದರು. ಯಾಕಂದ್ರೆ, ಎಲ್ಲಾ ಸಂದರ್ಭದಲ್ಲೂ ಅವರು ನನ್ನ ಜೊತೆಯಲ್ಲಿ ಇರೋರು. ವಿಜಯ ಯಾವುದೇ ಸಂದರ್ಭದಲ್ಲೂ ನಾನು ಜೊತೆಗಿರುತ್ತಿದ್ದೆ. " ಎನ್ನುತ್ತಾರೆ ಚಕ್ರವರ್ತಿ ಚಂದ್ರಚೂಡ.

  ಅಪಘಾತದ ದಿನ ಆಗಿದ್ದು ಇಷ್ಟು

  ಅಪಘಾತದ ದಿನ ಆಗಿದ್ದು ಇಷ್ಟು

  "ಬ್ಯಾಡ್ಮಿಂಟನ್ ಆಡುವಂತಹ ಒಂದು ಟೀಮ್. ಕವಿರಾಜ್ ಅವರೆಲ್ಲಾ ತುಂಬಾನೇ ಆಕ್ಟಿವ್ ಆಗಿದ್ದರು. ಸಾಯುವ ಎರಡು ದಿನದ ಮುನ್ನ ಅವರು ಕಾರು ಮಾಡಿದ್ರು. ಎಲ್ಲೋ ರೇಷನ್ ಹಂಚಿದ್ದರು. ಜನರಿಗೆ ಸಹಾಯ ಮಾಡುವುದಕ್ಕೆ ನನ್ನ ಬಳಿ ದುಡ್ಡಿಲ್ಲ ಅಂತ ಕಾರು ಮಾಡಿದ್ದರು. ಎಂಟು- ಒಂಬತ್ತು ಲಕ್ಷಕ್ಕೆ ಮಾರಿದ್ದರು. ನಾನು ಬೈದು ಕಳುಹಿಸಿದ್ದೆ. ಅವತ್ತು ಒಂದು ಕಡೆ ಊಟ ಮಾಡಿದ್ದಾರೆ. ಅವತ್ತು ಅಭಿಮಾನಿಯೊಬ್ಬರು ಹೊಸ ಬೈಕ್ ಖರೀದಿ ಮಾಡಿದ್ದರು. ಒಂದು ರೌಂಡ್ ಹಾಕಿ ಫೋಟೊ ತೆಗೆಸಿಕೊಳ್ಳಬೇಕು ಅಂತಿದ್ದರು. ಆ ವೇಳೆ ಬೈಕ್ ಸ್ಪೀಡ್ ವೇರಿಯೇಷನ್ ಆಗಿ ಡಿವೈಡರ್‌ಗೆ ಹೊಡೆದಿದ್ದಾರೆ. " ಅಂತಾರೆ ಚಕ್ರವರ್ತಿ ಚಂದ್ರಚೂಡ

  ಕೋವಿಡ್ ವೇಳೆ ಸ್ಲಂಗಳಲ್ಲಿ ರೇಷನ್ ಹಂಚಿದ್ದಾರೆ

  ಕೋವಿಡ್ ವೇಳೆ ಸ್ಲಂಗಳಲ್ಲಿ ರೇಷನ್ ಹಂಚಿದ್ದಾರೆ

  "ವಿಜಯ್ ಸಾಮಾಜಿಕ ಕ್ಷೇತ್ರಕ್ಕೆ ಬಂದಿದ್ದೇ ನನ್ನಿಂದ. ರಂಗಸಪ್ತಾಹ ಮಾಡಿದ್ವಿ. ಕೊಡಗಿನಲ್ಲಿ 55 ದಿನ ಇದ್ದೆವು. ನನ್ನ ಜೊತೆ ಮೂಟೆ ಹೊತ್ತಿದ್ದಾರೆ. ಆಹಾರ ಹೊತ್ತಿದ್ದಾರೆ. ಗಂಜಿ ಕೇಂದ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಿರಾಶ್ರಿತರ ಶಿಬಿರಗಳಲ್ಲಿ ಕೆಲಸ ಮಾಡಿದ್ದಾರೆ. ಅದಾದ ಮೇಲೆ ಕೊವಿಡ್ ಬಂತು. ಹೆಚ್ಚು ಕಡಿಮೆ ಎಂಟು ತಿಂಗಳು ಒಂದೇ ಮನೆಯಲ್ಲಿ ಇದ್ದೆವು. ಬೆಳಗ್ಗೆ ಎದ್ದರೆ ವ್ಯಾಯಾಮ ಮಾಡುವುದು. ಸ್ಲಮ್‌ಗಳಿಗೆ ಹೋಗುವುದು ರೇಷನ್ ಹಂಚುವುದಾಗಿತ್ತು." ಎಂದು ಸಂಚಾರಿ ವಿಜಯ್ ಅವರ ಸಾಮಾಜಿಕ ಕಾಳಜಿಯನ್ನು ನೆನೆಯುತ್ತಾರೆ.

  English summary
  Sanchari Vijay Would alive if he goes Big Boss says Chakravarthy Chandrachooda.
  Tuesday, April 26, 2022, 9:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X