For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ 'ಪ್ಲೇ ಬಾಯ್' ಆದ ಸಂಚಾರಿ ವಿಜಯ್

  By Bharath Kumar
  |

  'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಗೆದ್ದ ನಟ ಸಂಚಾರಿ, 'ಪಾದರಸ' ಚಿತ್ರದಲ್ಲಿ ತುಂಬಾ ವಿಭಿನ್ನವಾಗಿ, ತುಂಬಾ ಬೋಲ್ಡ್ ಆಗಿ ನಟನೆ ಮಾಡಿದ್ದಾರೆ. ಬಹುಶಃ ಇದು ಅವರ ಅಭಿಮಾನಿಗಳಿಗೆ ಕೊಂಚ ಬೇಸರವಾಗಿರಬಹುದೇನೋ.?

  ಆದ್ರೆ, ವಿಜಯ್ ಆ ಪಾತ್ರ ನಿರ್ವಹಿಸುವುದಕ್ಕೆ ಕಾರಣವೂ ಇದೆ. ಅಂದ್ಹಾಗೆ, ಸಂಚಾರಿ ವಿಜಯ್ ಈ ಚಿತ್ರದಲ್ಲಿ ಔಟ್ ಅಂಡ್ ಔಟ್ ಪ್ಲೇ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾತು ಬಿಟ್ಟರೇ ಡಬಲ್ ಮೀನಿಂಗ್ ಡೈಲಾಗ್ ಗಳು, ಅಥವಾ ಹುಡುಗಿಯರನ್ನ ಚುಡಾಯಿಸುವುದು. ನೋಡುಗರಿಗೆ ಇದೆಂಥ ಕೆಟ್ಟ ಪಾತ್ರ ಎಂದು ಎನಿಸುವುದು ಪಕ್ಕಾ.

  ಆದ್ರೆ, ಟ್ರೈಲರ್ ಗಿಂತ ಸಿನಿಮಾ ವಿಭಿನ್ನವಾಗಿದೆಯಂತೆ. ಮೊದಲಾರ್ಧದಲ್ಲಿ ತುಂಬಾ ಪೋಲಿಯಾಗಿ ಕಾಣಿಸಿಕೊಳ್ಳುವ ವಿಜಯ್, ಸೆಕೆಂಡ್ ಹಾಫ್ ನಲ್ಲಿ ಅವರ ಪಾತ್ರ ತುಂಬಾ ಬದಲಾಗುತ್ತಂತೆ. ಸಿನಿಮಾ ಕಾಮಿಡಿ, ಲವ್, ಸಸ್ಪೆನ್ಸ್, ಎಮೋಷನ್ ಎಲ್ಲವೂ ಚಿತ್ರದಲ್ಲಿದೆಯಂತೆ.

  ಆಗಸ್ಟ್ 10 ರಂದು ಥಿಯೇಟರ್ ಗೆ 'ಪಾದರಸ' ಎಂಟ್ರಿ ಆಗಸ್ಟ್ 10 ರಂದು ಥಿಯೇಟರ್ ಗೆ 'ಪಾದರಸ' ಎಂಟ್ರಿ

  ಇನ್ನುಳಿದಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಮತ್ತು ಮನಸ್ವಿ ಜೋಡಿಯಾಗಿದ್ದಾರೆ. ಇನ್ನು ಸಂಚಾರಿ ವಿಜಯ್​ ಅವರ ಸ್ನೇಹಿತನ ಪಾತ್ರದಲ್ಲಿ ನಿರಂಜನ್​ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ.

  ಆರ್ಟ್ ಅಂಡ್ ಸೋಲ್ ಮಿಡಿಯಾ ಸರ್ವಿಸ್ ಲಾಂಛನದಲ್ಲಿ 'ಪಾದರಸ' ಚಿತ್ರ ನಿರ್ಮಾಣವಾಗಿದ್ದು, ಹೃಷೀಕೇಶ್ ಜಂಬರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ಎಟಿ ರವೀಶ್​ ಸಂಗೀತ ನಿರ್ದೇಶನ ಮಾಡಿದ್ದು, ವಿಶೇಷ ಎಂದರೆ ಪವರ್‌ ಸ್ಟಾರ್‌ ಪುನೀತ್ ​ರಾಜ್​​ಕುಮಾರ್​​ ಚಿತ್ರದ ಆಡಿಯೋ ಬಿಡುಗಡೆ ಮಾಡಿಕೊಟ್ಟಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟ್ರೈಲರ್ ಲಾಂಚ್ ಮಾಡಿದ್ದರು.

  ಇನ್ನುಳಿದಂತೆ ವಿಜಯ್​ ಜೊತೆಗೆ ಹಿರಿಯ ನಟ ಜೈಜಗದೀಶ್​, ವಿಜಯ್​ ಚೆಂಡೂರ್​​ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 10 ರಂದು ಬೆಂಗಳೂರಿನ ಕೆ.ಜಿ ರಸ್ತೆಯ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಪ್ರದರ್ಶನವಾಗಲಿದೆ.

  English summary
  National award winner sanchari vijay starrer Padarasa movie will releasing on august 10th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X