For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್‌ ಸಾವಿಗೆ ಗೆಳೆಯನೇ ಕಾರಣ: ಅಣ್ಣನ ಆರೋಪ

  |

  ಶನಿವಾರ (ಜೂನ್ 12)ರ ರಾತ್ರಿ ಬೈಕ್ ಅಪಘಾತಕ್ಕೆ ತುತ್ತಾಗಿದ್ದ ಸಂಚಾರಿ ವಿಜಯ್‌ ಬಾರದ ಲೋಕಕ್ಕೆ ಹೊರಟಿದ್ದಾರೆ.

  ಅಪಘಾತದಲ್ಲಿ ಮೆದುಳಿಗೆ ದೊಡ್ಡ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿದ್ದು ಅವರಿನ್ನು ಚೇತರಿಸಿಕೊಳ್ಳುವುದು ಅಸಾಧ್ಯವೆಂದು ವೈದ್ಯರು ಹೇಳಿದ್ದಾರೆ. ವಿಜಯ್ ದೇಹದ ಅಂಗಾಂಗಗಳನ್ನು ದಾನ ಮಾಡಲಾಗುತ್ತಿದೆ.

  ಶನಿವಾರ ರಾತ್ರಿ ಜೆ.ಪಿ.ನಗರ 7ನೇ ಹಂತದ ಬಳಿ ಗೆಳೆಯ ನವೀನ್‌ ಜೊತೆ ಬೈಕ್‌ನಲ್ಲಿ ಹೋಗುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ಕಂಬಕ್ಕೆ ಗುದ್ದಿದೆ. ಬೈಕ್ ಚಲಾಯಿಸುತ್ತಿದ್ದ ನವೀನ್ ಹೇಗೋ ಪಾರಾಗಿದ್ದಾರೆ ಆದರೆ ವಿಜಯ್‌ ತಲೆಗೆ ತೀವ್ರವಾದ ಪೆಟ್ಟಾಗಿದೆ.

  ಘಟನೆ ಬಗ್ಗೆ ದೂರು ದಾಖಲಿಸಿರುವ ವಿಜಯ್ ಸಹೋದರ ಸಿದ್ದೇಶ್, ನವೀನ್‌ರ ವೇಗದ ಹಾಗೂ ಅಜಾಗರೂಕ ಚಾಲನೆಯೇ ಸಹೋದರ ವಿಜಯ್‌ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಸಿದ್ದೇಶ್ ನೀಡಿರುವ ದೂರಿನನ್ವಯ ನವೀನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಜಯನಗರ ಸಂಚಾರಿ ಠಾಣೆ ಪೊಲೀಸರು.

  ನವೀನ್ ಹಾಗೂ ವಿಜಯ್ ಕೆಎ01 ಇಡಬ್ಲು 2690 ನೊಂದಣಿಯ ಯಮಹಾ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರೂ ಬಿದ್ದ ಕೂಡಲೇ ಸ್ಥಳೀಯರು ಅವರನ್ನು ಬನ್ನೇರುಘಟ್ಟದ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಯಾಣಿಸುತ್ತಿದ್ದ ಬೈಕ್‌ ನವೀನ್‌ ಅವರಿಗೆ ಸೇರಿದ್ದು ಎನ್ನಲಾಗುತ್ತಿದೆ.

  ಕನ್ನಡ ಚಿತ್ರರಂಗ ಅತಿ ಕಳಪೆ ಎಂದವರಿಗೆ ಚೇತನ್ ಬೆಂಬಲ: Rakshit Shetty ಆಕ್ರೋಶ | Filmibeat Kannada

  ಸಂಚಾರಿ ವಿಜಯ್‌ ಮೆದುಳು ನಿಷ್ಕ್ರಿಯಗೊಂಡಿದ್ದು, ಅವರು ಬದುಕುವುದಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದಾರೆ. ವಿಜಯ್‌ರ ಅಂಗಾಂಗ ಸಂಗ್ರಹಿಸಿ ಅಗತ್ಯ ಇರುವವರಿಗೆ ಕಸಿ ಮಾಡುವ ಕಾರ್ಯ ಚಾಲ್ತಿಯಲ್ಲಿದೆ. ವಿಜಯ್‌ರ ಅಂತಿಮ ಸಂಸ್ಕಾರ ನಾಳೆ ಅವರ ಹುಟ್ಟೂರು ಚಿಕ್ಕಮಗಳೂರಿಗೆ ಪಂಚನಹಳ್ಳಿಯಲ್ಲಿ ನಡೆಯಲಿದೆ.

  English summary
  Sanchari Vijay met with accident while riding with his friend. Vijay's brother gave complaint against Vijay's friend Naveen for careless driving.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X