For Quick Alerts
    ALLOW NOTIFICATIONS  
    For Daily Alerts

    ಪುನೀತ್ ಇಂಟ್ರೊಡಕ್ಷನ್ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ

    |

    ಗಾಯಕ ಸಂಚಿತ್ ಹೆಗ್ಡೆ ಈಗ ಒಂದರ ನಂತರ ಒಂದು ಹಿಟ್ ಹಾಡುಗಳನ್ನು ನೀಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿಯೂ ಅವರು ಹಾಡಿ ಬಂದಿದ್ದಾರೆ. ಅವುಗಳ ಜೊತೆಗೆ ಇದೀಗ ನಟ ಪುನೀತ್ ಸಿನಿಮಾದ ಒಂದು ಹಾಡಿಗೆ ಸಂಚಿತ್ ಧ್ವನಿ ನೀಡಿದ್ದಾರೆ.

    ಸಂಚಿತ್ ಹೆಗ್ಡೆ ಹಾಡಿಗೆ ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇಬ್ಬರೂ ಫಿದಾ ಆಗಿದ್ದರು. ಇತ್ತೀಚಿಗಷ್ಟೆ ಸಂಚಿತ್ ಹಾಡಿದ್ದ 'ಲಂಬೋದರ' ಚಿತ್ರದ ಹಾಡನ್ನು ಅಪ್ಪು ರಿಲೀಸ್ ಮಾಡಿದ್ದರು. ಅದರ ಹಿಂದೆಯೇ ಈಗ ಪುನೀತ್ ಚಿತ್ರಕ್ಕೆ ಸಂಚಿತ್ ಹಾಡಿರೋ ಸುದ್ದಿ ಹೊರ ಬಂದಿದೆ.

    'ನಟ ಸಾರ್ವಭೌಮ' ಸಿನಿಮಾದ ಇಂಟ್ರೊಡಕ್ಷನ್ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಜೊತೆಗೆ 'ಟಗರು' ಖ್ಯಾತಿಯ ಅಂಟೋನಿ ದಾಸ್ ಸಹ ಹಾಡನ್ನು ಹಾಡಿದ್ದಾರೆ. ಡಿ ಇಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    'ನಟ ಸಾರ್ವಭೌಮ' ಚಿತ್ರದ ಹಾಡಿನ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಅದ್ಧೂರಿ ಸೆಟ್ ಗಳ ಮೂಲಕ ದೊಡ್ಡ ಮಟ್ಟದಲ್ಲಿ ಹಾಡನ್ನು ಶೂಟಿಂಗ್ ಮಾಡುತ್ತಿದ್ದಾರೆ. ರಾಕ್ ಲೈನ್ ಚಿತ್ರದ ನಿರ್ಮಾಪಕರಾಗಿದ್ದಾರೆ.

    ಪವನ್ ಒಡೆಯರ್ ಎರಡನೇ ಬಾರಿ ಅಪ್ಪುಗೆ ನಿರ್ದೇಶನ ಮಾಡುತ್ತಿದ್ದಾರೆ. ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಸಿನಿಮಾದ ನಾಯಕಿಯಾರಾಗಿದ್ದಾರೆ.

    English summary
    Sanchith Hegde sings for Power Star Puneet Rajkumar's 'Nata Sarwabouma' movie.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X