2ನೇ ವಾರಕ್ಕೆ ಕಾಲಿಟ್ಟ 'ಮ್ಯಾಂಗೋ ಪಚ್ಚ'; ಪ್ರೇಕ್ಷಕರಿಂದ ಬೇಕಿದೆ ಹೆಚ್ಚಿನ ಬೆಂಬಲ

ಸಂಚಿತ್ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಶುಕ್ರವಾರ ತೆರೆಕಂಡ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಕ್ತಿಲ್ಲ. ಒಳ್ಳೆ ಕನ್ನಡ ಚಿತ್ರವನ್ನು ದೊಡ್ಡಮಟ್ಟದಲ್ಲಿ ನೋಡಿ ಹಾರೈಸಬೇಕಿದೆ.

ಸಿನಿಮಾ ನೋಡಿದವರು ಸಂಚಿತ್ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಬಹಳ ಚಿಕ್ಕದಾಗಿ ಚೊಕ್ಕವಾಗಿ ಕಥೆ ಹೇಳಿ ಮುಗಿಸಿರುವ ತಂಡಕ್ಕೆ ಬಹುಪರಾಕ್ ಎನ್ನುತ್ತಿದ್ದಾರೆ. ಆದರೆ 'ಪೆದ್ದಿ' ಹಾಗೂ 'ದೃಶ್ಯಂ- 3' ನಡುವೆ ಕರ್ನಾಟಕದಲ್ಲಿ ಕನ್ನಡ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿರುವುದು ಸುಳ್ಳಲ್ಲ. ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕಿಚ್ಚ ಸುದೀಪ್ ಕೂಡ ಚಿತ್ರತಂಡದ ಬೆನ್ನಿಗೆ ನಿಂತಿದ್ದಾರೆ.

Sanchith s Mango Pachcha Continues Theatre Run Awaits Wider Audience Response

ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕ ವಿವೇಕ 'ಮ್ಯಾಂಗೋ ಪಚ್ಚ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಟೈಟಲ್ ರೋಲ್‌ನಲ್ಲಿ ಸಂಚಿತ್ ಕಮಾಲ್ ಮಾಡಿದ್ದಾರೆ. ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಕೆಲ ಫ್ರೇಮ್‌ಗಳಲ್ಲಿ ಮಾವ ಸುದೀಪ್ ಅವರನ್ನು ನೆನಪಿಸುತ್ತಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ. ಒಂದೂವರೆ ಗಂಟೆಯಲ್ಲಿ ಬಹಳ ಕ್ರಿಸ್ಪಿಯಾಗಿ ಕಥೆ ಹೇಳಿ ಮುಗಿಸಿದ್ದಾರೆ.

ಮೈಸೂರಿನ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಸಾಗುತ್ತದೆ. ಸಿಡಿ ಅಂಗಡಿ ನಡೆಸುವ ಪ್ರಶಾಂತ ಮುಂದೆ ಅನಿವಾರ್ಯ ಕಾರಣಗಳಿಂದ ಗಾಂಜಾ ದಂಧೆಗೆ ಇಳಿಯುವಂತಾಗುತ್ತದೆ. ಆ ನಂತರ ಅವನ ಜೀವನದಲ್ಲಿ ನಡೆಯುವ ಘಟನೆಗಳೇ ಸಿನಿಮಾ ಕಥೆ. ರೆಟ್ರೋ ಲುಕ್‌ನಲ್ಲಿ ಬಹಳ ಸ್ಟೈಲಿಶ್ ಆಗಿ ಪಚ್ಚ ಸಂಚಿತ್ ನಟಿಸಿದ್ದಾರೆ. ಮಯೂರ್ ಪಟೇಲ್, ಹರಿಣಿ, ಹಂಸಾ ಪ್ರತಾಪ್, ಉಗ್ರಂ ಮಂಜು, ಕಾಜಲ್‌ ಕುಂದರ್‌ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. 2000 ಇಸವಿಯ ಮೈಸೂರು ಚಿತ್ರಣ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ.

ಅಬ್ಬರದ ಪ್ರಚಾರ ಮಾಡದೇ 'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಸುದೀಪ್ ಕೂಡ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಸಿಕ್ತಿಲ್ಲ. ಅಂದಾಜು 3 ಕೋಟಿ ರೂ. ಬಜೆಟ್ ಸಿನಿಮಾ ಮೊದಲ ವಾರದ ಕಲೆಕ್ಷನ್ 1.50 ಕೋಟಿ ರೂ. ಕೂಡ ದಾಟಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ನಿನ್ನೆ(ಜೂನ್ 11) ನಗರದ ಆಯ್ದ ಚಿತ್ರಮಂದಿರಗಳಿಗೆ ಚಿತ್ರತಂಡ ಭೇಟಿ ನೀಡಿತ್ತು. ನಾಯಕ ಸಂಚಿತ್ ಮಂತ್ರಿ ಮಾಲ್, ಒರಾಯನ್ ಮಾಲ್, ಗ್ಲೋಬಲ್ ಮಾಲ್ ಹಾಗೂ ವೀರೇಶ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿ ಧನ್ಯವಾದ ತಿಳಿಸಿದ್ದರು. ಕ್ಲೈಮ್ಯಾಕ್ಸ್ ನೋಡಿದ್ರೆ 'ಮ್ಯಾಂಗೋ ಪಚ್ಚ' ಸೀಕ್ವೆಲ್ ಬಗ್ಗೆ ಕುತೂಹಲ ಮೂಡಿದೆ. ಮೌತ್ ಟಾಕ್ ಚೆನ್ನಾಗಿ ಇದ್ದರೂ ಪ್ರೇಕ್ಷಕರು ಯಾರೋ ಚಿತ್ರಮಂದಿರಗಳ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

Read more about: sudeep sandalwood box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X