ರಿಲೀಸ್‌ಗೂ ಮುನ್ನವೇ 'ಯುವ vs ಜಿಮ್ಮಿ' ವಾರ್ ಶುರು; ಯುವ vs ಸಂಚಿತ್ ಸಂಜೀವ್ ಇಬ್ಬರಲ್ಲಿ ಗೆಲ್ಲೋರಾರು?
ಚಂದನವನದಲ್ಲಿ ಸ್ಟಾರ್‌ಗಳ ಅಬ್ಬರ ಜೋರಾಗಿದ್ದು, ಇದೀಗ ಹೊಸ ನಟರ ಆಗಮನದಿಂದ ಹೊಸ ಅಲೆಯೂ ಎಬ್ಬಿದೆ. ಪುನೀತ್ ರಾಜ್‌ಕುಮಾರ್, ದರ್ಶನ್ ಹಾಗೂ ಕಿಚ್ಚ ಸುದೀಪ್ ಅಬ್ಬರಿಸಿದ್ದ ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ರಾಕಿ ಭಾಯ್ ಹವಾ ಜೋರಾಗಿದೆ.
ಅಲ್ಲದೇ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಸಹ ದೊಡ್ಡ ಕಲೆಕ್ಷನ್ ಮಾಡುವ ಭರವಸೆಯನ್ನು ಹುಟ್ಟುಹಾಕಿದ್ದಾರೆ. ಇವರ ಜತೆ ಧನಂಜಯ್, ಧೃವ ಸರ್ಜಾ ಸಹ ಮುಂದೆ ದೊಡ್ಡ ಸಾಧನೆ ಮಾಡುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದು, ಇತ್ತೀಚೆಗೆ ನವೀನ್ ಶಂಕರ್ ಸಹ ಭರವಸೆ ಹುಟ್ಟುಹಾಕಿದ್ದಾರೆ.

ಹೀಗಿರುವಾಗಲೇ ಈ ವರ್ಷ ಚಂದನವನಕ್ಕೆ ಮತ್ತಿಬ್ಬರು ಯಂಗ್ & ಎನರ್ಜೆಟಿಕ್ ಹೀರೊಗಳ ಎಂಟ್ರಿಯಾಗುವುದು ಬಹುತೇಕ ಖಚಿತವಾಗಿದೆ. ಪುನೀತ್ ರಾಜ್‌ಕುಮಾರ್ ವಾರಸ್ದಾರ ಎಂದೇ ಗುರುತಿಸಿಕೊಂಡಿರುವ ಯುವ ರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಭರವಸೆ ಹುಟ್ಟುಹಾಕಿರುವ ನಟರಾಗಿದ್ದಾರೆ.
ಹೌದು, ಯುವ ರಾಜ್‌ಕುಮಾರ್ ಈ ವರ್ಷದ ಕೊನೆಯ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಯುವ ಚಿತ್ರದ ಮೂಲಕ ಬೆಳ್ಳಿ ತೆರೆ ಜರ್ನಿಯನ್ನು ಆರಂಭಿಸಲು ಸಿದ್ಧರಾಗಿದ್ದು, ಅತ್ತ ಸಂಚಿತ್ ಸಂಜೀವ್ ಜಿಮ್ಮಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.
ಯುವ ಚಿತ್ರಕ್ಕೆ ಇಂಡಸ್ಟ್ರಿ ಹಿಟ್ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ನಿರ್ದೇಶನವಿದ್ದು, ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಜಿಮ್ಮಿ ಚಿತ್ರಕ್ಕೆ ವೀನಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಕೆಪಿ ಶ್ರೀಕಾಂತ್ ಬಂಡವಾಳ ಹೂಡುತ್ತಿದ್ದು, ಸಂಚಿತ್ ಸಂಜೀವ್ ಸ್ವತಃ ಆಕ್ಷನ್ ಕಟ್ ಹೇಳಿಕೊಳ್ಳಲಿದ್ದಾರೆ.
ಯುವ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಡಿಸೆಂಬರ್ 22ರಂದು ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಜಿಮ್ಮಿ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಮಾತ್ರ ಲಭ್ಯವಿಲ್ಲ. ಹೀಗಿದ್ದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಯುವ vs ಜಿಮ್ಮಿ ಫ್ಯಾನ್ ವಾರ್ ಆರಂಭವಾಗಿಬಿಟ್ಟಿದೆ. ಜಿಮ್ಮಿ ಚಿತ್ರೀಕರಣ ಬೇಗ ಮುಗಿದರೆ ಯುವ ಜತೆ ಡಿಸೆಂಬರ್‌ನಲ್ಲಿಯೇ ಚಿತ್ರ ತೆರೆಗೆ ಬಂದು ಯುವ ಹಾಗೂ ಜಿಮ್ಮಿ ಚಿತ್ರಗಳು ಕ್ಲಾಷ್ ಆಗಬಹುದು ಎಂಬ ಊಹೆ ಸಹ ಇದೆ.
ಮೊನ್ನೆಯಷ್ಟೇ ಸಂಚಿತ್ ಸಂಜೀವ್ ನಟನೆಯ ಜಿಮ್ಮಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಂಚಿತ್ ಸಂಜೀವ್ ನಟನೆ ಹಾಗೂ ಡೈಲಾಗ್ ಡೆಲಿವರಿ ಕಂಡ ಸಿನಿ ರಸಿಕರು ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ಯುವ ರಾಜ್‌ಕುಮಾರ್ ಹಾಗೂ ಸಂಚಿತ್ ಸಂಜೀವ್ ಚಿತ್ರಗಳು ದೊಡ್ಡ ಮಟ್ಟದಲ್ಲಿ ಅಬ್ಬರಿಸಲಿವೆ ಮತ್ತು ಈ ಇಬ್ಬರು ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಸಮರ ಏರ್ಪಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಇಬ್ಬರೂ ಸಹ ಯಂಗ್ ನಟರಾಗಿದ್ದು, ಪ್ರಸ್ತುತ ಕನ್ನಡ ಸಿನಿ ರಸಿಕರ ಅಭಿರುಚಿಗೆ ತಕ್ಕಂತೆ ಫಿಟ್ ಆಗಿ ಕಣಕ್ಕಿಳಿದಿದ್ದಾರೆ. ಯುವ ರಾಜ್‌ಕುಮಾರ್ ಈಗಾಗಲೇ ವೇದಿಕೆ ಮೇಲೆ ಡಾನ್ಸ್ ಮಾಡಿ, ಹಲವು ವಿಡಿಯೊಗಳ ಮೂಲಕ ತಾನೊಬ್ಬ ಒಳ್ಳೆಯ ಡಾನ್ಸರ್ ಹಾಗೂ ಫೈಟರ್ ಎಂಬ ಭರವಸೆ ಮೂಡಿಸಿದ್ದು, ಟೀಸರ್ ಮೂಲಕ ಲುಕ್ ವಿಭಾಗದಲ್ಲೂ ಸಹ ಸಿನಿ ರಸಿಕರಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದಾರೆ.
ಇತ್ತ ಸಂಚಿತ್ ಸಂಜೀವ್ ನಟನೆ ಜತೆಗೆ ನಿರ್ದೇಶನಕ್ಕೂ ಸಹ ಕೈಹಾಕಿದ್ದು ಮೊನ್ನೆ ಬಿಡುಗಡೆಯಾದ ಫಸ್ಟ್ ಲುಕ್ ಮೂಲಕ ಭರವಸೆ ಮೂಡಿಸಿದ್ದಾರೆ. ಒಟ್ಟಿನಲ್ಲಿ ಸಿನಿ ರಸಿಕರ ಊಹೆಯಂತೆ ಈ ಇಬ್ಬರ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ವಾರ್ ಮುಂದಿನ ದಿನಗಳಲ್ಲಿ ಏರ್ಪಡುವುದಂತೂ ಖಚಿತವಾಗಿದ್ದು, ಸ್ಯಾಂಡಲ್‌ವುಡ್‌ಗೆ ಮತ್ತಿಬ್ಬರು ಪೈಪೋಟಿದಾರರ ಎಂಟ್ರಿಯಾಗಿದೆ.


Click it and Unblock the Notifications











