ಕನ್ವರ್ ಬಳಿಕ ಅಂಬಿ ಮೆಚ್ಚಿನ ಶ್ವಾನ ಬುಲ್ ಬುಲ್ ನಿಧನ
ಸ್ಯಾಂಡಲ್ವುಡ್ನ ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮತ್ತೆ ಮೌನ ಆವರಿಸಿದೆ. ದಿವಂಗತ ನಟ ಅಂಬರೀಶ್ ಅವರ ಅಚ್ಚು ಮೆಚ್ಚಿನ ಶ್ವಾನವಾಗಿದ್ದ ಬುಲ್ ಬುಲ್ ಇಂದು(ಸಪ್ಟೆಂಬರ್ 17) ಕೊನೆಯುಸಿರೆಳೆದಿದೆ. ಶ್ವಾನ ಪ್ರಿಯರಾಗಿದ್ದ ಅಂಬರೀಶ್ ತಮ್ಮ ಮನೆಯಲ್ಲಿ ಮುದ್ದಾಗಿ ಸಾಕಿದ್ದ ಎರಡೂ ಶ್ವಾನಗಳು ನಿಧನ ಹೊಂದಿದಂತಾಗಿದೆ.
ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ ಅವರ ಬುಲ್ ಬುಲ್ ಮಾತಾಡಕಿಲ್ವಾ.. ಹಾಗೂ ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಬೋಲೋ ಡೈಲಾಗ್ಗಳು ಸಖತ್ ಫೇಮಸ್ ಆಗಿದ್ದವು. ಹೀಗಾಗಿ ಅವರು ತಮ್ಮ ನೆಚ್ಚಿನ ಶ್ವಾನಗಳಿಗೆ ಬುಲ್ ಬುಲ್ ಹಾಗೂ ಕನ್ವರ್ ಎಂದು ಹೆಸರಿಟ್ಟದ್ದರು.
ಅಂಬರೀಶ್ ತಮ್ಮ ಶ್ವಾನಗಳನ್ನು ಬಹಳ ಮುದ್ದಾಗಿ ಸಾಕಿದ್ದರು. ಅದರಂತೆ ಅವುಗಳೂ ಕೂಡ ಅವುಗಳು ಕೂಡ ಅಂಬರೀಶ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದವು. ಶೂಟಿಂಗ್ ಸಮಯ ಹೊರತು ಪಡಿಸಿ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಮುದ್ದಿನ ಶ್ವಾನಗಳಾದ ಕನ್ವರ್ ಹಾಗೂ ಬುಲ್ಬುಲ್ ಜೊತೆ ಕಳೆಯುತ್ತಿದ್ದರು. ಹೀಗಾಗಿ ಅಂಬರೀಶ್ ನಿಧನದ ಬಳಿಕ ಎರಡೂ ಶ್ವಾನಗಳು ಮಂಕಾಗಿದ್ದವು.

ಅಂಬರೀಶ್ ಅವರೊಂದಿಗೆ ಬಹಳ ಆತ್ಮೀಯತೆಯಿಂದ ಕನ್ವರ್ ಶ್ವಾನವು ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಕಣ್ಣೀರಿಟ್ಟಿತ್ತು. ಅಲ್ಲದೇ ಊಟ ತಿಂಡಿ ಬಿಟ್ಟು ಅಂಬರೀಶ್ ಅವರಿಗಾಗಿ ಕೊರಗಿತ್ತು. ಕೊನೆಗೂ ಒಡೆಯನ ನಿಧನದ ಬಳಿಕ ಕೊರಗಿದ್ದ ಕನ್ವರ್ 2021 ಮೇ 24ರಂದು ಕೊನೆಯುಸಿರೆಳೆದಿತ್ತು.
ಇದೀಗ ಸುಮಾರು ಒಂಬತ್ತು ವರ್ಷಗಳಿಂದ ಅಂಬರೀಶ್ ಕುಟುಂಬದ ಸದಸ್ಯನಂತಿದ್ದ ಬುಲ್ ಬುಲ್ ಶ್ವಾನ ಕೂಡ ಸಾವನ್ನಪ್ಪಿದ್ದು, ಅಂಬಿ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಇನ್ನು ಹಿರಿಯ ನಟಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ನಟ ಅಭಿಷೇಕ್ ಅಂಬರೀಶ್ಗೂ ಅಚ್ಚುಮೆಚ್ಚಾಗಿದ್ದ ಬುಲ್-ಬುಲ್ ಶ್ವಾನವನ್ನು ತಮ್ಮ ಫಾರ್ಮ್ ಹೌಸ್ನಲ್ಲೇ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದಾರೆ.
ಇನ್ನು ಸ್ಯಾಂಡಲ್ವುಡ್ನ ರೆಬಲ್ ಸ್ಟಾರ್ ಅಂಬರೀಶ್ ಅಗಲಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿದ್ದು, ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಅಂಬರೀಶ್ ಅವರನ್ನು ಲಕ್ಷಾಂತರ ಅಭಿಮಾನಿಗಳು ಇಂದಿಗೂ ಅವರನ್ನು ಸ್ಮರಿಸುತ್ತಿರುತ್ತಾರೆ. ಇನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಅಂಬರೀಶ್ ಗುಡಿ ಕೂಡ ನಿರ್ಮಾಣ ಮಾಡಲಾಗಿದೆ.


Click it and Unblock the Notifications











