For Quick Alerts
  ALLOW NOTIFICATIONS  
  For Daily Alerts

  ಕನ್ವರ್​​ ಬಳಿಕ ಅಂಬಿ ಮೆಚ್ಚಿನ ಶ್ವಾನ ಬುಲ್ ಬುಲ್​​ ನಿಧನ

  |

  ಸ್ಯಾಂಡಲ್​ವುಡ್​ನ ರೆಬಲ್​ ಸ್ಟಾರ್ ಅಂಬರೀಶ್​ ಮನೆಯಲ್ಲಿ ಮತ್ತೆ ಮೌನ ಆವರಿಸಿದೆ. ದಿವಂಗತ ನಟ ಅಂಬರೀಶ್​ ಅವರ ಅಚ್ಚು ಮೆಚ್ಚಿನ ಶ್ವಾನವಾಗಿದ್ದ ಬುಲ್​ ಬುಲ್​ ಇಂದು(ಸಪ್ಟೆಂಬರ್​ 17) ಕೊನೆಯುಸಿರೆಳೆದಿದೆ. ಶ್ವಾನ ಪ್ರಿಯರಾಗಿದ್ದ ಅಂಬರೀಶ್​ ತಮ್ಮ ಮನೆಯಲ್ಲಿ ಮುದ್ದಾಗಿ ಸಾಕಿದ್ದ ಎರಡೂ ಶ್ವಾನಗಳು ನಿಧನ ಹೊಂದಿದಂತಾಗಿದೆ.

  ಕನ್ನಡ ಚಿತ್ರರಂಗದಲ್ಲಿ ಅಂಬರೀಶ್​ ಅವರ ಬುಲ್​ ಬುಲ್​ ಮಾತಾಡಕಿಲ್ವಾ.. ಹಾಗೂ ಕುತ್ತೆ ಕನ್ವರ್​ ನಹಿ ಕನ್ವರ್ ಲಾಲ್​ ಬೋಲೋ ಡೈಲಾಗ್​ಗಳು ಸಖತ್​ ಫೇಮಸ್​ ಆಗಿದ್ದವು. ಹೀಗಾಗಿ ಅವರು ತಮ್ಮ ನೆಚ್ಚಿನ ಶ್ವಾನಗಳಿಗೆ ಬುಲ್​ ಬುಲ್​ ಹಾಗೂ ಕನ್ವರ್​ ಎಂದು ಹೆಸರಿಟ್ಟದ್ದರು.

  ಅಂಬರೀಶ್​ ತಮ್ಮ ಶ್ವಾನಗಳನ್ನು ಬಹಳ ಮುದ್ದಾಗಿ ಸಾಕಿದ್ದರು. ಅದರಂತೆ ಅವುಗಳೂ ಕೂಡ ಅವುಗಳು ಕೂಡ ಅಂಬರೀಶ್​ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದವು. ಶೂಟಿಂಗ್ ​ ಸಮಯ ಹೊರತು ಪಡಿಸಿ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಮುದ್ದಿನ ಶ್ವಾನಗಳಾದ ಕನ್ವರ್​ ಹಾಗೂ ಬುಲ್​ಬುಲ್​ ಜೊತೆ ಕಳೆಯುತ್ತಿದ್ದರು. ಹೀಗಾಗಿ ಅಂಬರೀಶ್​ ನಿಧನದ ಬಳಿಕ ಎರಡೂ ಶ್ವಾನಗಳು ಮಂಕಾಗಿದ್ದವು.

  ಅಂಬರೀಶ್​ ಅವರೊಂದಿಗೆ ಬಹಳ ಆತ್ಮೀಯತೆಯಿಂದ ಕನ್ವರ್​ ಶ್ವಾನವು ಅಂಬರೀಶ್ ​ ನಿಧನರಾದ ಸಂದರ್ಭದಲ್ಲಿ ಕಣ್ಣೀರಿಟ್ಟಿತ್ತು. ಅಲ್ಲದೇ ಊಟ ತಿಂಡಿ ಬಿಟ್ಟು ಅಂಬರೀಶ್​ ಅವರಿಗಾಗಿ ಕೊರಗಿತ್ತು. ಕೊನೆಗೂ ಒಡೆಯನ ನಿಧನದ ಬಳಿಕ ಕೊರಗಿದ್ದ ಕನ್ವರ್​ 2021 ಮೇ 24ರಂದು ಕೊನೆಯುಸಿರೆಳೆದಿತ್ತು.

  ಇದೀಗ ಸುಮಾರು ಒಂಬತ್ತು ವರ್ಷಗಳಿಂದ ಅಂಬರೀಶ್​ ಕುಟುಂಬದ ಸದಸ್ಯನಂತಿದ್ದ ಬುಲ್​ ಬುಲ್​ ಶ್ವಾನ ಕೂಡ ಸಾವನ್ನಪ್ಪಿದ್ದು, ಅಂಬಿ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಇನ್ನು ಹಿರಿಯ ನಟಿ ಸಂಸದೆ ಸುಮಲತಾ ಅಂಬರೀಶ್​ ಹಾಗೂ ನಟ ಅಭಿಷೇಕ್ ​ ಅಂಬರೀಶ್​ಗೂ ಅಚ್ಚುಮೆಚ್ಚಾಗಿದ್ದ ಬುಲ್-ಬುಲ್​ ಶ್ವಾನವನ್ನು ತಮ್ಮ ಫಾರ್ಮ್​ ಹೌಸ್​ನಲ್ಲೇ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದಾರೆ.

  ಇನ್ನು ಸ್ಯಾಂಡಲ್​ವುಡ್​ನ ರೆಬಲ್​ ಸ್ಟಾರ್​ ಅಂಬರೀಶ್​ ಅಗಲಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿದ್ದು, ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಅಂಬರೀಶ್​ ಅವರನ್ನು ಲಕ್ಷಾಂತರ ​ ಅಭಿಮಾನಿಗಳು ಇಂದಿಗೂ ಅವರನ್ನು ಸ್ಮರಿಸುತ್ತಿರುತ್ತಾರೆ. ಇನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಅಂಬರೀಶ್​ ಗುಡಿ ಕೂಡ ನಿರ್ಮಾಣ ಮಾಡಲಾಗಿದೆ.

  English summary
  Sandalwood actor rebel star Ambareesh favorite dog Bull Bull no more, Know more about it.
  Saturday, September 17, 2022, 22:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X