For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಂಕಷ್ಟಕ್ಕೆ ಚಿಕ್ಕಣ್ಣ ನೆರವು: ಬಡವರ ಹಸಿವು ನೀಗಿಸುತ್ತಿರುವ ನಟ

  |

  ಕೊರೊನಾ ಭೀಕರತೆಯ ಪರಿಹಾರ ಕಾರ್ಯಕ್ಕೆ ಅನೇಕರು ಕೈ ಜೋಡಿಸಿದ್ದಾರೆ. ತನ್ನ ಕೈಲಾದ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಸಿನಿ ಕಲಾವಿದರು ಸಹ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

  ಸ್ಯಾಂಡಲ್ ವುಡ್ ನ ಅನೇಕ ಮಂದಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಕಾಮಿಡಿ ನಟ ಚಿಕ್ಕಣ್ಣ ಕೂಡ ಸಹಾಯಕಾರ್ಯಕ್ಕೆ ಮುಂದಾಗಿದ್ದು, ಬಡವರ ಹಸಿವು ನೀಗಿಸುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ತಮ್ಮ ಮೂಲ ಕಸುಬಾದ ಗಾರೆ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದ ಚಿಕ್ಕಣ್ಣ ಇದೀಗ ಅನ್ನ ದಾನ ಕಾರ್ಯ ಮಾಡುತ್ತಿದ್ದಾರೆ. ಮುಂದೆ ಓದಿ...

  ಹಳೆ ವೃತ್ತಿ ಗಾರೆ ಕೆಲಸಕ್ಕೆ ಮರಳಿದ ನಟ ಚಿಕ್ಕಣ್ಣ!ಹಳೆ ವೃತ್ತಿ ಗಾರೆ ಕೆಲಸಕ್ಕೆ ಮರಳಿದ ನಟ ಚಿಕ್ಕಣ್ಣ!

  ಆಹಾರ ವಿತರಿಸುತ್ತಿರುವ ಚಿಕ್ಕಣ್ಣ

  ಆಹಾರ ವಿತರಿಸುತ್ತಿರುವ ಚಿಕ್ಕಣ್ಣ

  ಲಾಕ್ ಡೌನ್ ಕಾರಣ ಸದ್ಯ ಮೈಸೂರಿನಲ್ಲೇ ನೆಲೆಸಿರುವ ಚಿಕ್ಕಣ್ಣ, ನಂಜರಾಜ ಬಹದ್ದೂರ್ ಛತ್ರದಲ್ಲಿ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಕೆ. ಆರ್ ಆಸ್ಪತ್ರೆ ಮತ್ತು ಬಸ್ ಸ್ಟ್ಯಾಂಡ್ ಬಳಿ ಹಸಿದವರಿಗೆ ಆಹಾರ ಪ್ಯಾಕ್ ಗಳನ್ನು ವಿತರಣೆ ಮಾಡುವ ಮೂಲಕ ಮಾನವೀಯ ಕೆಲಸ ಮಾಡುತ್ತಿದ್ದಾರೆ.

  200ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ

  200ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ

  ಪ್ರತಿನಿತ್ಯ ಸುಮಾರು 200ಕ್ಕೂ ಹೆಚ್ಚು ಊಟದ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಚಿಕ್ಕಣ್ಣ, ಹಸಿದವರಿಗೆ ಮಾತ್ರ ಅನ್ನದ ಬೆಲೆ ಗೊತ್ತು. ನಾನು ಕೂಡ ಹಸಿವಿನಿಂದ ಬಂದವನು. ಹಾಗಾಗಿ ಈ ಕಾರ್ಯಕ್ಕೆ ಮುಂದಾಗಿದ್ದೇನೆ' ಎಂದು ಚಿಕ್ಕಣ್ಣ ಹೇಳಿದ್ದಾರೆ.

  ಚಿಕ್ಕಣ್ಣನಿಗೆ ಸ್ನೇಹಿತರು ಸಾಥ್

  ಚಿಕ್ಕಣ್ಣನಿಗೆ ಸ್ನೇಹಿತರು ಸಾಥ್

  ಕಷ್ಟದಲ್ಲಿರೋರಿಗೆ ಸಹಾಯ ಮಾಡೋಣ ಅಂತ ಸ್ನೇಹಿತರಲ್ಲ ಹೇಳಿದ್ರು. ನಾನು ಕೂಡ ಕೈ ಜೋಡಿಸುತ್ತೇನೆ ಎಂದು ಈ ಕೆಲಸ ಮಾಡುತ್ತಿದ್ದೇವೆ. ನನ್ನ ಜೊತೆ ಅನೇಕರು ಕೈ ಜೋಡಿಸಿದ್ದಾರೆ ಎಂದು ಚಿಕ್ಕಣ್ಣ ಹೇಳಿದ್ದಾರೆ. ಸ್ಯಾಂಡಲ್ ವುಡ್ ನ ಖ್ಯಾತ ಕಾಮಿಡಿ ಕಲಾವಿದರಲ್ಲಿ ಒಬ್ಬರಾಗಿರುವ ಚಿಕ್ಕಣ್ಣ ಈ ಹಂತಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದಾರೆ.

  ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ

  ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ

  ಸಾಮಾನ್ಯ ಕುಟುಂಬದಿಂದ ಬಂದಿರುವ ಚಿಕ್ಕಣ್ಣ ಮೊದಲು ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮೇಸ್ತ್ರಿ ಕೈಕೆಳಗೆ ದಿನಗೂಲಿಗೆ ಮನೆಗಳ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಚಿಕ್ಕಣ್ಣ ನಟನಾಗುವ ಉದ್ದೇಶದಿಂದ ಬೆಂಗಳೂರಿಗೆ ಬಂದು ಹಲವು ಸುತ್ತು ಸೈಕಲ್ ಹೊಡೆದ ಬಳಿಕ ಇಂದು ಖ್ಯಾತ ನಟನಾಗಿ, ಸ್ಯಾಂಡಲ್ ವುಡ್ ನ ಬೇಡಿಕೆಯ ಹಾಸ್ಯಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ.

  ತೋಟದ ಮನೆಯಲ್ಲಿ ಕೆಲಸ ಮಾಡುತ್ತಿರುವ ನಟ

  ತೋಟದ ಮನೆಯಲ್ಲಿ ಕೆಲಸ ಮಾಡುತ್ತಿರುವ ನಟ

  ಸದ್ಯ ಲಾಕ್ ಡೌನ್ ನಿಂದ ತಮ್ಮ ಊರಲ್ಲೇ ನೆಲೆಸಿರುವ ಚಿಕ್ಕಣ್ಣ ಮತ್ತೆ ಹಳೆ ವೃತ್ತಿಗೆ ಮರಳಿದ್ದರು. ತಮ್ಮದೇ ತೋಟದ ಮನೆಯ ಗಾರೆ ಕೆಲಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ನಟ ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿಕ್ಕಣ್ಣನ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

  English summary
  Sandalwood Actor Chikkanna distributes food for poor people.
  Saturday, May 15, 2021, 11:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X