For Quick Alerts
  ALLOW NOTIFICATIONS  
  For Daily Alerts

  ಗೋವಾದಲ್ಲಿ ಸಿದ್ದರಾಮಯ್ಯ ಚಿಕ್ಕಣ್ಣ ಭೇಟಿ: ಏನು ವಿಶೇಷ?

  |

  ಸಿನಿಮಾ ಹಾಗೂ ರಾಜಕಾರಣ ಜೊತೆ-ಜೊತೆಯಾಗಿ ಸಾಗುತ್ತಿರುವ ರಂಗಗಳು. ನಟರು ರಾಜಕಾರಣಿಗಳಾಗುವುದು, ರಾಜಕಾರಣಿಗಳು ಸಿನಿಮಾ ನಿರ್ಮಾಪಕರು, ನಟರಾಗುವುದು ಬಹುಕಾಲದಿಂದ ನಡದೇ ಇದೆ.

  ಕರ್ನಾಟಕದಲ್ಲಿಯೂ ಈ ಪದ್ಧತಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ನಟ-ನಟಿಯರಾಗಿ ಮೆರೆದ ಹಲವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಈಗಲೂ ಹಲವು ನಟ-ನಟಿಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಎನ್ ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದರು. ಇದೀಗ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಅಚಾನಕ್ಕಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

  ಪಂಚ ರಾಜ್ಯಗಳ ಚುನಾವಣೆ ಇರುವ ಕಾರಣ ಸಿದ್ದರಾಮಯ್ಯ ಅವರು ಗೋವಾಕ್ಕೆ ಭೇಟಿ ನೀಡಿದ್ದರು. ಈ ಸಮಯ ಗೋವಾದಲ್ಲಿಯೇ ನಟ ಚಿಕ್ಕಣ್ಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಕೆಲ ಕಾಲ ಮಾತುಕತೆ ನಡೆಸಿದ್ದಾರೆ.

  ಗೋವಾದಲ್ಲಿ ಸಿದ್ದರಾಮಯ್ಯರ ಭೇಟಿಯಾದ ಚಿಕ್ಕಣ್ಣ

  ಗೋವಾದಲ್ಲಿ ಸಿದ್ದರಾಮಯ್ಯರ ಭೇಟಿಯಾದ ಚಿಕ್ಕಣ್ಣ

  ನಟ ಚಿಕ್ಕಣ್ಣ ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಗೋವಾಕ್ಕೆ ತೆರಳಿದ್ದರು. ಅಲ್ಲಿಯೇ ಸಿದ್ದರಾಮಯ್ಯ ಅವರನ್ನು ಕಂಡು ಚಿಕ್ಕಣ್ಣ ಮಾತನಾಡಿಸಿದ್ದಾರೆ. ಚಿಕ್ಕಣ್ಣ ಅವರು ತಮ್ಮನ್ನು ಗೋವಾದಲ್ಲಿ ಭೇಟಿಯಾಗಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, ''ಗೋವಾದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಚಿಕ್ಕಣ್ಣನವರೊಂದಿಗೆ ಒಂದಷ್ಟು ಹೊತ್ತು ಆತ್ಮೀಯ ಮಾತಕತೆ'' ಎಂದು ಬರೆದುಕೊಂಡಿದ್ದಾರೆ. ಆದರೆ ಗೋವಾದಲ್ಲಿ ಎಲ್ಲಿ ಅವರಿಬ್ಬರೂ ಭೇಟಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

  ಡಿಕೆಶಿಯ ಭೇಟಿಯಾಗಿದ್ದ ನಟ ಆಲಿ

  ಡಿಕೆಶಿಯ ಭೇಟಿಯಾಗಿದ್ದ ನಟ ಆಲಿ

  ಕೆಲವು ದಿನಗಳ ಹಿಂದಷ್ಟೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕನ್ನಡದಲ್ಲಿಯೂ ನಟಿಸಿರುವ ತೆಲುಗಿನ ಹಾಸ್ಯನಟ ಆಲಿ ಗೋವಾದಲ್ಲಿಯೇ ಭೇಟಿ ಆಗಿದ್ದರು. ಶೂಟಿಂಗ್‌ಗಾಗಿ ಗೋವಾಕ್ಕೆ ಹೋಗಿದ್ದ ಆಲಿ ಅಲ್ಲಿಯೇ ಸಭೆಯೊಂದಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ.ಶಿವಕುಮಾರ್ ಹಂಚಿಕೊಂಡಿದ್ದರು.

  ಪಕ್ಷಬಲವರ್ಧನೆ ಮಾಡುತ್ತಿರುವ ಡಿಕೆಶಿ

  ಪಕ್ಷಬಲವರ್ಧನೆ ಮಾಡುತ್ತಿರುವ ಡಿಕೆಶಿ

  ಕರ್ನಾಟಕ ಕಾಂಗ್ರೆಸ್‌ ಸಾರಥ್ಯ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಪ್ರಭಾವಿಗಳನ್ನು ಪಕ್ಷಕ್ಕೆ ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ. ಹಾಗಾಗಿ ಕೆಲವು ಸಿನಿಮಾ ತಾರೆಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಡಿ.ಕೆ.ಶಿವಕುಮಾರ್ ಭೇಟಿ ಆಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಸಿನಿಮಾ ನಟರು ರಾಜಕಾರಣಿಗಳ ಭೇಟಿಯನ್ನು ಸಾಮಾನ್ಯ ಭೇಟಿ ಎಂದು ಈ ಸಂದರ್ಭದಲ್ಲಿ ಅಂತೂ ಪಕ್ಕಕ್ಕೆ ತಳ್ಳಲಾಗದು.

  ಕಾಂಗ್ರೆಸ್ ಸೇರಲಿದ್ದಾರೆ ಎಸ್ ನಾರಾಯಣ್

  ಕಾಂಗ್ರೆಸ್ ಸೇರಲಿದ್ದಾರೆ ಎಸ್ ನಾರಾಯಣ್

  ಕೆಲವು ದಿನಗಳ ಹಿಂದಷ್ಟೆ ನಿರ್ದೇಶಕ, ನಟ ಎಸ್.ನಾರಾಯಣ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವುದಾಗಿ ಘೋಷಿಸಿದ್ದಾರೆ. ಅಸಲಿಗೆ ಎಸ್.ನಾರಾಯಣ್, ಎಚ್‌ಡಿ ಕುಮಾರಸ್ವಾಮಿ ಅವರಿಗೆ ಬಹಳ ಆಪ್ತರಾಗಿದ್ದರು. ಎಸ್ ನಾರಾಯಣ್ ಜೆಡಿಎಸ್ ಸೇರುವ ನಿರೀಕ್ಷೆಯೂ ಇತ್ತು ಆದರೆ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ''ನಮ್ಮ ಪಕ್ಷದ ಸಿದ್ಧಾಂತ, ಆದರ್ಶಗಳಿಂದ ಪ್ರೇರಿತರಾದ ನಟ, ನಿರ್ದೇಶಕ ಶ್ರೀ ಎಸ್. ನಾರಾಯಣ್ ಅವರು ಇಂದು ನನ್ನನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಅಭಿಲಾಷೆ ವ್ಯಕ್ತಪಡಿಸಿದರು. ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಿದೆ'' ಎಂದು ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

  English summary
  Kannada movie actor Chikkanna met Siddaramaiah in Goa. Siddaramaiah shared photo in social media. Chikkanna is in Goa for movie shooting.
  Tuesday, February 8, 2022, 17:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X