ಹಿರಿಯ ನಟ ಕೆ ಶಿವರಾಮ್ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು..!
ಬಾ ನಲ್ಲೆ ಮಧು ಚಂದ್ರಕೆ ಮೂಲಕ ಕನ್ನಡಿಗರ ಮನ ಗೆದ್ದ ಕೆ.ಶಿವರಾಮ್ ಅವರಿಗೆ ಹೃದಯಾಘಾತವಾಗಿದೆ. ಬೆಂಗಳೂರಿನ ಎಚ್ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರ ಆರೋಗ್ಯ ಚಿಂತಾಜನಕ ಆಗಿದ್ದು ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಇನ್ನೂ ಶಿವರಾಮ್ ಅವರ ಮೆದುಳು ನಿಷ್ಕ್ರಿಯವಾಗಿದ್ದು, ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಶಿವರಾಮ್ ಅವರ ಅಳಿಯ ಭರತ್ ನೀಡಿರುವ ಮಾಹಿತಿಯಂತೆ, 20 ದಿನಗಳ ಹಿಂದೆ ಕೆ.ಶಿವರಾಮ್ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿತ್ತು.

ಈ ಹಿನ್ನೆಲೆಯಲ್ಲಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಇಂದು ಹೃದಯಾಘಾತವಾಗಿದೆ. 71 ವರ್ಷದ ಕೆ.ಶಿವರಾಮ್ ವಸಂತಕಾವ್ಯ', 'ಖಳನಾಯಕ', 'ಯಾರಿಗೆ ಬೇಡ ದುಡ್ಡು', 'ಗೇಮ್ ಫಾರ್ ಲವ್', 'ನಾಗ', 'ಓ ಪ್ರೇಮ ದೇವತೆ ಚಿತ್ರದಲ್ಲಿ ನಟಿಸಿದ್ದಾರೆ. 2007ರಲ್ಲಿ ಬಿಡುಗಡೆ ಆದ 'ಟೈಗರ್' ಚಿತ್ರದ ನಂತರ ಬಣ್ಣದ ಲೋಕದಿಂದ ಅಂತರ ಕಾಪಾಡಿಕೊಂಡಿದ್ದರು ಕೆ.ಶಿವರಾಮ್.
More from Filmibeat
English summary
andalwood Actor Former IAS Officer K.Shivaram Hospitalized


Click it and Unblock the Notifications











