ಹಾಸನದಲ್ಲಿ ಸ್ಯಾಂಡಲ್‌ವುಡ್ ನಟ ನೀನಾಸಂ ಅಶ್ವಥ್ ಬಂಧನ

ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ನಿನಾಸಂ ಅಶ್ವಥ್ ಬಂಧನವಾಗಿದೆ. ಕನ್ನಡದಲ್ಲಿ 'ಕೆಜಿಎಫ್‌', 'ಕಬ್ಜ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಚೆಕ್ ಬೌನ್ಸ್ ಕೇಸ್‌ನಲ್ಲಿ ಹಾಸನ ಪೊಲೀಸರು ನಿನ್ನೆ ರಾತ್ರಿ ನಟ ಅಶ್ವಥ್‌ರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ನಿನಾಸಂ ಅಶ್ವಥ್ ವಿರುದ್ಧ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿದ್ದರು ಪ್ರಯೋಜನವಾಗಿರಲಿಲ್ಲ. ನಾಲ್ಕೂ ಬಾರಿಯೂ ಕೋರ್ಟ್‌ಗೆ ಹಾಜರಾಗದ ಕಾರಣ ಐದನೇ ಬಾರಿ ಅರೆಸ್ಟ್ ವಾರೆಂಟ್ ಹಿನ್ನಲೆ ಹಾಸನ ಬಡಾವಣೆ ಠಾಣೆ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಾಸನ ಮೂಲದ ರೋಹಿತ್ ಎಂಬುವರಿಂದ ಹಸು ಖರೀದಿಸಿದ್ದ ಅಶ್ವಥ್ 1.5ಲಕ್ಷದ ಚೆಕ್ ನೀಡಿದ್ದರು. ಆದರೆ ಚೆಕ್ ಬ್ಯಾಂಕ್‌ಗೆ ಹಾಕಿದಾಗ ಅದು ಬೌನ್ಸ್ ಆಗಿತ್ತು. ಈ ಸಂಬಂಧ ಹಾಸನದ ಜೆಎಮ್‌ಎಫ್‌ಸಿ‌ ಕೋರ್ಟ್‌ನಲ್ಲಿ‌ ರೋಹಿತ್ ದೂರು ದಾಖಲಿಸಿದ್ದರು.

Sandalwood actor Ninasam Ashwath Arrested In Cheque Bounce Case In Haasan

ನ್ಯಾಯಾಧೀಶರ ಮುಂದೆ ನಿನಾಸಂ ಅಶ್ವಥ್ ತಪ್ಪೊಪ್ಪಿಕೊಂಡಿದ್ದು ಶೇ.25 ರಷ್ಟು ಹಣ ಪಾವತಿಸಿದ್ದಾರೆ. ಇನ್ನುಳಿದ ಹಣ ಶೀಘ್ರದಲ್ಲೇ ನೀಡುವುದಾಗಿ ಹೇಳಿದ್ದಾರೆ. ಈ ಹಿಂದೆ ಕೂಡ ನಿನಾಸಂ ಅಶ್ವಥ್ ವಿರುದ್ಧ ಚೆಕ್‌ಬೌನ್ಸ್, ವಂಚನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.

More from Filmibeat

English summary
Sandalwood actor Ninasam Ashwath Arrested In Cheque Bounce Case In Haasan. 4 times Arrest warrant issued against actor. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X