ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್

ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಡಿಸೆಂಬರ್ 28 ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ನೆರವೇರಿದೆ.

Recommended Video

ಅದ್ದೂರಿಯಾಗಿ ನಡೆಯಿತು ರಮೇಶ್ ಅರವಿಂದ್ ಮಗಳ ಆರತಕ್ಷತೆ | Filmibeat Kannada

ಇಂದು ಆರತಕ್ಷತೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಚಿತ್ರರಂಗದ ಮತ್ತು ರಾಜಕೀಯ ಗಣ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ರಮೇಶ್ ಅರವಿಂದ್ ಮಗಳ ಮದುವೆಯ ಆರತಕ್ಷತೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ. ಚಂದನವನದ ತಾರೆಯರಾದ ಸುದೀಪ್, ಯಶ್, ಸುಮಲತಾ ಅಂಬರೀಶ್, ಶ್ರೀಮುರಳಿ, ಪ್ರಜ್ವಲ್ ದೇವರಾಜ್, ಹರ್ಷಿಕಾ ಪೂಣಚ್ಚ, ಅಮೂಲ್ಯ, ಶಿಲ್ಪಾ ಗಣೇಶ್ ಸೇರದಂತೆ ಅನೇಕ ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ.

ಮದುವೆ ಆರತಕ್ಷತೆಯಲ್ಲಿ ಸುದೀಪ್ ದಂಪತಿ

ಮದುವೆ ಆರತಕ್ಷತೆಯಲ್ಲಿ ಸುದೀಪ್ ದಂಪತಿ

ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ದಂಪತಿ ರಮೇಶ್ ಅರವಿಂದ್ ಮಗಳ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನಿಹಾರಿಕಾ ಮತ್ತು ಅಕ್ಷಯ್ ಜೋಡಿಗೆ ಶುಭಕೋರಿದ್ದಾರೆ. ಜನವರಿ 16ರಂದು ಗೋವಾ ಅಂತರರಾಷ್ಟ್ರೀಯ ಚಲಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಕಿಚ್ಚ, ಗೋವಾದಿಂದ ವಾಪಸ್ ಆಗಿ, ರಮೇಶ್ ಅರವಿಂದ್ ಮಗಳ ಮದುವೆಯಲ್ಲಿ ಭಾಗಿಯಾಗಿದ್ದರು.

ಯಶ್ ಮತ್ತು ರಾಧಿಕಾ ದಂಪತಿ

ಯಶ್ ಮತ್ತು ರಾಧಿಕಾ ದಂಪತಿ

ನಿಹಾರಿಕಾ ಮತ್ತು ಅಕ್ಷಯ್ ಜೋಡಿಗೆ ಶುಭ ಹಾರೈಸಲು ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಸಹ ಭಾಗಿಯಾಗಿದ್ದರು. ರಾಧಿಕಾ ಬಿಳಿ ಬಣ್ಣದ ಗೌನ್ ಧರಿಸಿದ್ರೆ, ಯಶ್ ಬಿಳಿ ಶರ್ಟ್ ಮತ್ತು ಫಾರ್ಮಲ್ ಪ್ಯಾಂಟ್ ನಲ್ಲಿ ಯಶ್ ಮಿಂಚಿದ್ದಾರೆ. ಇಬ್ಬರ ಸುಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಮಲತಾ ಅಂಬರೀಶ್

ಸುಮಲತಾ ಅಂಬರೀಶ್

ನಟಿ ಸುಮಲತಾ ಅಂಬರೀಶ್ ಸಹ ರಮೇಶ್ ಅರವಿಂದ್ ಅವರ ಮಗಳ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಸಂತಸ ಪಟ್ಟಿದ್ದಾರೆ. ಸುಮಲತಾ ಅಂಬರೀಶ್ ಯಶ್ ಮತ್ತು ಸುದೀಪ್ ಜೊತೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಶ್ರೀಮುರಳಿ, ಪ್ರಜ್ವಲ್ ದೇವರಾಜ್, ವಿಜಯ್ ಪ್ರಕಾಶ್

ಶ್ರೀಮುರಳಿ, ಪ್ರಜ್ವಲ್ ದೇವರಾಜ್, ವಿಜಯ್ ಪ್ರಕಾಶ್

ನಟ ಶ್ರೀಮುರಳಿ ಮತ್ತು ಪ್ರಜ್ವಲ್ ದೇವರಾಜ್ ಸಹ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಇನ್ನೂ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಗುರುಕಿರಣ್ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಳಿಯ ಅಕ್ಷಯ್ ನವ ಜೋಡಿಗೆ ಶುಭಹಾರೈಸಿದ್ದಾರೆ.

ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ

ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ

ರಮೇಶ್ ಅರವಿಂದ್ ಮಗಳ ಮದುವೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ಗೆಳೆಯ ಭುವನ್ ಪೊನ್ನಣ್ಣ ಮಿಂಚಿದ್ದಾರೆ. ಇನ್ನೂ ನಟಿ ರಾಧಿಕಾ ನಾರಾಯಣ್ ಸೇರಿದಂತೆ ಅನೇಕರು ನಿಹಾರಿಕಾ ಮತ್ತು ಅಕ್ಷಯ್ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಯಶ್ ಮತ್ತು ಸುದೀಪ್ ಮಸ್ತ್ ಸ್ಟೆಪ್

ಯಶ್ ಮತ್ತು ಸುದೀಪ್ ಮಸ್ತ್ ಸ್ಟೆಪ್

ಮದುವೆ, ಆರತಕ್ಷತೆ ಅಂದ್ಮೇಲೆ ಡ್ಯಾನ್ಸ್ ಇಲ್ಲದೆ ಇರೋಕೆ ಸಾಧ್ಯನಾ? ಅದರಲ್ಲೂ ಸಿನಿಮಾ ಸ್ಟಾರ್ಸ್ ಮದುವೆ ಅಂದಮೇಲೆ ಡ್ಯಾನ್ಸ್ ಬಗ್ಗೆ ಕೇಳಬೇಕಾ? ರಮೇಶ್ ಅರವಿಂದ್ ಮಗಳ ಮದುವೆಯಲ್ಲೂ ಡ್ಯಾನ್ಸ್ ಮಿಸ್ ಆಗಿಲ್ಲ. ರಾಕಿಂಗ್ ಸ್ಟಾರ್ ಮತ್ತು ಸುದೀಪ್ ಸೇರಿದಂತೆ ಸೆಲೆಬ್ರಿಟಿಗಳು ಮಸ್ತ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ನಿಹಾರಿಕಾ ಮತ್ತು ಅಕ್ಷಯ್ ನವಜೋಡಿಯ ಜೊತೆ ಸುದೀಪ್ ಮತ್ತು ಯಶ್ ಸೇರಿದಂತೆ ಅನೇಕ ಕಲಾವಿದರು ಡ್ಯಾನ್ಸ್ ಮಾಡಿ ಮಸ್ತ್ ಎಂಜಾಯ್ ಮಾಡಿದ್ದಾರೆ.

More from Filmibeat

English summary
Ramesh Aravind daughter reception; sandalwood actor attend niharika and akshay marriage reception.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X